See also 2gear
1gear ಗಿಅರ್‍
ನಾಮವಾಚಕ
  1. ಸಜ್ಜು ಸಾಮಗ್ರಿ.
  2. (ಮುಖ್ಯವಾಗಿ ಆಡುಮಾತು) ಯುವಕರ ಉಡುಪು, ಉಡಿಗೆತೊಡಿಗೆ.
  3. (ಭಾರ ಎಳೆಯುವ ಪ್ರಾಣಿಗಳ) ಸಜ್ಜು ಸರಂಜಾಮು; ಜತ್ತಿಗೆ; ಜೊತ್ತಿಗೆ; ಯೋಕ್ತ್ರ.
  4. ಯಂತ್ರ – ಸಾಧನ, ಸಲಕರಣೆ, : aircraft’s landing gear ವಿಮಾನದ ಇಳಿಯುವ ಸಲಕರಣೆಗಳು.
  5. ಹಗ್ಗ, ಕೊಕ್ಕೆ, ಮೊದಲಾದವುಗಳನ್ನೊಳಗೊಂಡ ಸಾಧನ, ಪರಿಕರ.
  6. ಉಪಕರಣಗಳು; ಹತ್ಯಾರ; ಸಲಕರಣೆಗಳು; ಸಾಧನಸಾಮಗ್ರಿ.
  7. (ಸಾಮಾನ್ಯವಾಗಿ ವಿಶಿಷ್ಟ ಉದ್ದೇಶಕ್ಕಾಗಿ) ಚಕ್ರಗಳು, ರಾಟೆಗಳು, ಸನ್ನೆಗಳು, ಮೊದಲಾದವುಗಳ – ವ್ಯವಸ್ಥೆ, ಜೋಡಣೆ: winding gear ಸುತ್ತಿಡುವ ವ್ಯವಸ್ಥೆ.
  8. ಗೇರು; ಗಿಯರು; ಚಾಲಕ; ಮೋಟಾರನ್ನು ಯಾ ಎಂಜಿನನ್ನು ಅದರ ಕಾರ್ಯಕಾರಿಯಾದ ಅಂಗಗಳಿಗೆ ಕೂಡಿಸುವ ಅಳವಡಿಕೆ.
  9. ಗೇರು; ಹಲ್ಲುಗಳು ಮೊದಲಾದವುಗಳ ಮೂಲಕ ಒಂದಕ್ಕೊಂದು ತಗುಲಿ ಕೆಲಸ ಮಾಡುವ ಚಕ್ರಗಳು.
  10. (ಹಡಗಿನ) ಕೂವೆ ಹಗ್ಗಗಳು; ಕೂವೆಗಂಬಕ್ಕೆ ಬಿಗಿಯುವ ಹಗ್ಗಗಳು.
  11. ಸರಕು ಸಾಮಾನುಗಳು.
  12. ಮನೆಯ ಪಾತ್ರೆ ಪದಾರ್ಥಗಳು; ಪಾತ್ರೆಪಗಡಿ.
ಪದಗುಚ್ಛ
  1. bottom gear (ಬ್ರಿಟಿಷ್‍ ಪ್ರಯೋಗ) ಕನಿಷ್ಠ ಗೇರು; ತಳ ಗಿಯರು; ಬೈಸಿಕಲ್‍, ಮೋಟಾರ್‍ ಕಾರು, ಮೊದಲಾದವುಗಳಲ್ಲಿ ಚಾಲಿತ ಭಾಗಗಳು ಚಾಲಕ ಭಾಗಗಳಿಗಿಂತ ಕನಿಷ್ಠ ವೇಗದಲ್ಲಿ ಸುತ್ತುತ್ತಿರುವುದು.
  2. first gear = ಪದಗುಚ್ಛ \((1)\).
  3. high gear ಏರುಗೇರು; ಬೈಸಿಕಲ್‍, ಮೋಟಾರ್‍ ಕಾರು, ಮೊದಲಾದವುಗಳಲ್ಲಿ ಚಾಲಿತ ಭಾಗಗಳು ಚಾಲಕ ಭಾಗಗಳಿಗಿಂತ ಹೆಚ್ಚು ವೇಗದಲ್ಲಿ ಸುತ್ತುತ್ತಿರುವುದು.
  4. in gear ಮೋಟಾರಿಗೆ ಕೂಡಿ ಯಾ ಕೂಡಿಸಿ; ಮೋಟಾರು ಕೆಲಸ ಮಾಡುತ್ತಿರುವ ಸ್ಥಿತಿಯಲ್ಲಿ.
  5. low gear ಇಳಿಗೇರು; ಬೈಸಿಕಲ್‍, ಮೋಟಾರ್‍ ಕಾರು, ಮೊದಲಾದವುಗಳಲ್ಲಿ ಚಾಲಿತ ಭಾಗಗಳು ಚಾಲಕ ಭಾಗಗಳಿಗಿಂತ ಕಡಿಮೆ ವೇಗದಲ್ಲಿ ಸುತ್ತುತ್ತಿರುವುದು.
  6. out of gear
    1. ಮೋಟಾರೊಡನೆ ಕೂಡದೆ ಯಾ ಕೂಡಿಸದೆ; ಮೋಟಾರು ನಿಷ್ಕ್ರಿಯ ಸ್ಥಿತಿಯಲ್ಲಿ.
    2. (ಬ್ರಿಟಿಷ್‍ ಪ್ರಯೋಗ) (ರೂಪಕವಾಗಿ) ಕ್ರಮಗೆಟ್ಟು; ಸರಿಯಾಗಿಲ್ಲದೆ.
  7. top gear ಗರಿಷ್ಟ ಗೇರು; ಮೇಲುಗಿಯರು; ತುದಿಗೇರು; ಬೈಸಿಕಲ್‍, ಮೋಟಾರ್‍ ಕಾರು, ಮೊದಲಾದವುಗಳಲ್ಲಿ ಚಾಲಿತ ಭಾಗಗಳು ಚಾಲಕ ಭಾಗಗಳಿಗಿಂತ ಹೆಚ್ಚು ವೇಗದಲ್ಲಿ ಸುತ್ತುತ್ತಿರುವುದು.