See also 2top  3top  4top
1top ಟಾಪ್‍
ನಾಮವಾಚಕ
  1. ಮೇಲ್ತುದಿ; ನೆತ್ತಿ; ತಲೆ; ಅಗ್ರ; ಶಿಖರ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಗಡ್ಡೆಸಸ್ಯಗಳ ನೆಲದ ಮೇಲಣ(ಎಲೆ ಮೊದಲಾದ) ಭಾಗ: turnip tops ಮೂಲಂಗಿ ಎಲೆಗಳು.
  3. (ಬಹುವಚನದಲ್ಲಿ) ನೂಲು ತೆಗೆಯಲು ಸಿದ್ಧಪಡಿಸುವ ಉದ್ದನೆಯ ಉಣ್ಣೆ ಎಳೆಗಳ ಕಟ್ಟು.
  4. (ನೆಲ, ಮೇಜು, ಮೊದಲಾದವುಗಳ) ಮೇಲ್ಭಾಗ; ಮೇಲ್ಮೆ ಭಾಗ.
  5. (ಪಾದರಕ್ಷೆ, ಮೋಜ, ಮೊದಲಾದವುಗಳ) ಮೇಲುಭಾಗ.
  6. (ಗಾಡಿಯ) ಚಾವಣಿ; ಮುಚ್ಚಿಗೆ.
  7. (ಮೋಟಾರು ಕಾರು, ಮಕ್ಕಳ ತಳ್ಳುಬಂಡಿ, ಮೊದಲಾದವುಗಳ) ಮಡಿಸುವ ಚಾವಣಿ; ಮಡಿಚಬಲ್ಲ ಮುಚ್ಚಿಗೆ.
  8. (ಡಬರಿ ಮೊದಲಾದವುಗಳ) ಮುಚ್ಚಳ.
  9. ಸೀಸೆಯ ಮುಚ್ಚಳ, ಬಿರಡೆ.
  10. (ಹಾಲಿನ) ಕೆನೆಯ ಭಾಗ.
  11. (ಪುಸ್ತಕದ) ಪುಟದ ಮೇಲಂಚು ಯಾ ಅಂಚುಗಳು: gilt top ಗಿಲೀಟು ಅಂಚಿನ (ಪುಟಗಳು).
  12. ಜಾಕಿಟ್‍; (ಸೊಂಟದಿಂದ) ಮೇಲುಭಾಗ ಮುಚ್ಚುವ ಉಡುಪು.
    1. ಕಾಲುಚೀಲದ–ಮೇಲುಗಡೆಯ ಮಡಿಕೆಯ ಭಾಗ, ಮೇಲಿನ ಪಟ್ಟೆಯಂಚು.
    2. ನೀಳ ಬಊಟಿನ ಮೇಲುತುದಿ.
    1. ಅತ್ಯಂತ ಮೇಲುದರ್ಜೆ; ಅಗ್ರಸ್ಥಾನ.
    2. ಅಗ್ರಸ್ಥಾನದಲ್ಲಿರುವ ವ್ಯಕ್ತಿ: came out (at the) top of the school ಶಾಲೆಗೆಲ್ಲಾ ಮೇಲಿನವನಾಗಿ ಬಂದ.
  13. ಮೇಲ್ತುದಿ; ಅಗ್ರಸ್ಥಾನ; ಶಿರೋಭಾಗ: top of the table ಭೋಜನ ಗೋಷ್ಠಿಯಲ್ಲಿ ಅಗ್ರಸ್ಥಾನ; ಊಟದ ಮೇಜಿನಲ್ಲಿ ಉಚ್ಚಸ್ಥಾನ.
  14. ತುತ್ತತುದಿ; ಶಿಖರ; ಪರಮಾವಧಿ; ಪರಾಕಾಷ್ಠೆ; ಅತ್ಯಂತ ಮೇಲಿನ ಮಟ್ಟ: realised the top of my ambition ನನ್ನ ಮಹತ್ವಾಕಾಂಕ್ಷೆಯ ಶಿಖರ ಮುಟ್ಟಿದೆ. called at the top of his voice ಅವನು ಉಚ್ಚಕಂಠದಲ್ಲಿ ಕೂಗಿದ.
  15. (ಬಹುವಚನದಲ್ಲಿ) (ಆಡುಮಾತು) ಉತ್ತಮೋತ್ತಮ ವಸ್ತು ಯಾ ವ್ಯಕ್ತಿ: he’s tops at cricket ಅವನು ಕ್ರಿಕೆಟ್‍ನಲ್ಲಿ ಉತ್ತಮೋತ್ತಮ ವ್ಯಕ್ತಿ.
  16. (ನೌಕಾಯಾನ) ತಲೆಕಟ್ಟೆ; ನೆತ್ತಿಕಟ್ಟೆ; ಮೇಲ್ಕೂವೆಯ ಹಗ್ಗ ಹುರಿಗಳನ್ನು ವಿಸ್ತರಿಸಲು ಯಾ ಬಂದೂಕಗಳನ್ನಿರಿಸಲು ಅನುಕೂಲಿಸುವ, ಕೆಳಕೂವೆಯ ಮೇಲ್ತುದಿಯಲ್ಲಿರುವ ಕಟ್ಟೆ, ಜಗಲಿ.
  17. (ಬಹುವಚನದಲ್ಲಿ) (ಮುಖ್ಯವಾಗಿ ಬ್ರಿಡ್ಜ್‍ ಆಟ) ಒಂದೇ ರಂಗಿನ ಎರಡು ಯಾ ಮೂರು ಉಚ್ಚತಮ ಎಲೆಗಳು.
  18. = $^1$gear.
  19. = topspin.
ಪದಗುಚ್ಛ
  1. at the top (of the tree) (ರೂಪಕವಾಗಿ) (ಉದ್ಯೋಗ, ವೃತ್ತಿ, ಮೊದಲಾದವುಗಳ) ತುತ್ತತುದಿಯಲ್ಲಿ; ಪರಮೋಚ್ಚ ಸ್ಥಾನದಲ್ಲಿ.
  2. come to the top ಅಗ್ರಸ್ಥಾನ ಗಳಿಸು; ಪ್ರಾಶಸ್ತ್ಯ ಪಡೆ.
  3. from top to toe ಸಂಪೂರ್ಣವಾಗಿ; ಪೂರ್ತಿಯಾಗಿ; ಅಡಿಯಿಂದ ಮುಡಿಯವರೆಗೆ; ನಖಶಿಖಾಂತ.
  4. on top
    1. ಮೇಲೆ; ಉಚ್ಚಸ್ಥಾನದಲ್ಲಿ.
    2. ಜತೆಗೆ; ಸಾಲದುದಕ್ಕೆ; ಅಷ್ಟೇ ಅಲ್ಲದೆ.
    3. ನೆತ್ತಿಯ ಮೇಲೆ; ತಲೆಯ ಬಉರುಡೆಯ ಮೇಲೆ: going bald on top ನೆತ್ತಿ ಬೋಳಾಗುತ್ತಿದೆ.
  5. on top of
    1. (ರೂಪಕವಾಗಿ) ಸಂಪೂರ್ಣ ಸ್ವಾಮ್ಯ ಪಡೆದಿರು; ಸಂಪೂರ್ಣ ಹತೋಟಿ ಹೊಂದಿರು.
    2. (ಒಂದಕ್ಕೆ) ಅತಿ ಹತ್ತಿರದಲ್ಲಿ, (ಒಂದರ ಹಿಂದೆ) ತೀರಾ ಸಮೀಪದಲ್ಲಿ.
    3. ಅದರ ಜೊತೆಗೆ; ಮತ್ತೂ.
  6. on top of the world (ಆಡುಮಾತು) ಹರ್ಷೋತ್ಕರ್ಷದ; ಆನಂದದಿಂದ ತುಂಬಿ ತುಳುಕುವ.
  7. over the top
    1. ರಕ್ಷಣಾ ಗುಂಡಿಯ ಮೇಲು ಅಂಚನ್ನು ಹಾಯ್ದು (ರಣರಂಗಕ್ಕೆ ನುಗ್ಗಿ).
    2. (ರೂಪಕವಾಗಿ) ನಿರ್ಣಾಯಕ, ಅಂತಿಮ–ಘಟ್ಟದಲ್ಲಿ.
    3. ಅತಿ ಎನ್ನುವಷ್ಟು: that joke was over the top ಆ ಹಾಸ್ಯ ಅತಿ ಎನ್ನುವಷ್ಟಾಗಿತ್ತು.
  8. the top of the morning (to you) (ಐರ್ಲೆಂಡಿನವರ ಸುಪ್ರಭಾತದ ವಂದನೆ ಯಾ ನಮಸ್ಕಾರದ ಒಕ್ಕಣೆ) “ನಿನಗೆ ಸುಪ್ರಭಾತ”.