See also 1top  2top  4top
3top ಟಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು, ಭೂತಕೃದಂತ topped; ವರ್ತಮಾನ ಕೃದಂತ topping).
  1. (ಚಾವಣಿ, ಮುಚ್ಚಳ, ಟೋಪಿ, ಕುಲಾವಿ, ಮೇಲುಪದರ, ಮೇಲು ಹೊದಿಕೆ, ಹರಹು, ಮೊದಲಾದವನ್ನು) ಇಡು; ಹಾಕು; ಒದಗಿಸು; ಅಳವಡಿಸು: cake topped with icing ಐಸ್‍ಕ್ರೀಮ್‍ ಮೇಲುಪದರದಿಂದ ಮುಚ್ಚಿದ ಕೇಕು.
  2. (ಬೆಳವಣಿಗೆ ಉತ್ತಮಗೊಳಿಸಲು) ಗಿಡದ–ತುದಿ ಕತ್ತರಿಸು; ತಲೆ ಕಡಿ; ಗಿಡದ–ತಲೆ ಕಡಿದು ಕಸಿ ಮಾಡು.
  3. ಅಡುಗೆಗೆ ಸಿದ್ಧಪಡಿಸಲು ಹಣ್ಣು, ಕಾಯಿ, ಮೊದಲಾದವುಗಳ ಹೊರಸಿಪ್ಪೆಯನ್ನು ತೆಗೆದುಹಾಕು.
  4. (ಅಶಿಷ್ಟ)
    1. ನೇಣುಹಾಕು; ಗಲ್ಲಿಗೇರಿಸು.
    2. (ಆತ್ಮಾರ್ಥಕ) ಆತ್ಯಹತ್ಯೆ ಮಾಡಿಕೊ.
  5. (ಬೆಟ್ಟ ಮೊದಲಾದವುಗಳ) ತುದಿಗೆ, ಶಿಖರಕ್ಕೆ–ಹತ್ತು; ಬೆಟ್ಟದ ನೆತ್ತಿ ಮುಟ್ಟು, ತಲಪು.
  6. (ಒಬ್ಬನಿಗಿಂತ) ಉನ್ನತವಾಗಿರು; ಎತ್ತರವಾಗಿರು.
  7. (ಒಬ್ಬನಿಗಿಂತ) ಶ್ರೇಷ್ಠವಾಗಿರು; ಮೇಲಾಗಿರು; (ಒಬ್ಬನನ್ನು) ಮೀರಿಸು.
  8. ಅತ್ಯುಚ್ಚ ಸ್ಥಾನದಲ್ಲಿರು: top the list (ವಿಜೇತ ಮೊದಲಾದ) ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನಗಳಿಸು.
  9. (ಗಾಲ್ಫ್‍ಆಟ)
    1. (ಚೆಂಡನ್ನು) ಮಧ್ಯದಿಂದ ಮೇಲಿನ ಭಾಗಕ್ಕೆ ಹೊಡೆ.
    2. ಈ ವರಿಸೆಯ ಹೊಡೆತ ಹೊಡೆ.
ಪದಗುಚ್ಛ
  1. top off (or up) ಕೊನೆ ಮುಟ್ಟಿಸು; ಮುಗಿಸು; ಮುಕ್ತಾಯ ಮಾಡು ಯಾ ವಸ್ತುವಿಗೆ ಅಂತಿಮರೂಪ ಕೊಡು.
  2. top one’s part (ಮುಖ್ಯವಾಗಿ ನಾಟಕದಲ್ಲಿ) ತನ್ನ ಪಾತ್ರವನ್ನು ಪರಿಪೂರ್ಣವಾಗಿ, ಸರ್ವಶ್ರೇಷ್ಠವಾಗಿ–ಅಭಿನಯಿಸು, ನಿರ್ವಹಿಸು.
  3. top out (ಕಟ್ಟಡದ) ಮೇಲುಗಡೆ ಅತ್ಯಂತ ಎತ್ತರದ ಕಲ್ಲನ್ನಿಡು, ಕಲ್ಲು ಸೇರಿಸು.
  4. top up (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)
    1. (ಅರೆತುಂಬಿರುವ ಲೋಟ, ಡಬ್ಬ, ಮೊದಲಾದವನ್ನು) ಪೂರ್ತಿ ತುಂಬಉ; ಭರ್ತಿಮಾಡು.
    2. (ಸಂಖ್ಯೆ ಯಾ ಮೊತ್ತವನ್ನು) ಪೂರ್ಣಗೊಳಿಸು; ಭರ್ತಿಮಾಡು.
    3. (ಒಬ್ಬ ವ್ಯಕ್ತಿಗಾಗಿ ಯಾವುದನ್ನೇ) ತುಂಬಉ; ಭರ್ತಿಮಾಡು: may I top you up with sherry ನಾನು ನಿನಗಾಗಿ ಷೆರಿಯನ್ನು ತುಂಬಲೇ?