throat ತ್ರೋಟ್‍
ನಾಮವಾಚಕ
  1. (ಮನುಷ್ಯನ) ಕುತ್ತಿಗೆ(ಯಾ ಮುಂಭಾಗ); ಕೊರಲು; ಮುಂಗೊರಲು; ಮುಂಗತ್ತು; ಮೆಟರೆ; ಗೋಣು; ಗೋನಾಳಿ.
  2. ಪ್ರಾಣಿಯ ಈ ಅಂಗಭಾಗ.
  3. ಗಂಟಲು; ಕಂಠ; ಅನ್ನನಾಳ ಯಾ ಶ್ವಾಸನಾಳ: words stuck in my throat ಮಾತುಗಳು ನನ್ನ ಗಂಟಲಲ್ಲಿ ಸಿಕ್ಕಿಕೊಂಡವು.
  4. (ಸಾಹಿತ್ಯಕ) (ಮುಖ್ಯವಾಗಿ ಹಾಡುವ ಹಕ್ಕಿಯ) ಕಂಠ; ಧ್ವನಿ; ಗಂಟಲು.
  5. ಗಂಟಲಿನಾಕಾರದ ವಸ್ತು ಮೊದಲಾದವು; ಒಂದರ ಕಂಠ, ಕಂಠಭಾಗ, ಇಕ್ಕಟ್ಟು ಭಾಗ; ಬಂಡೆಗಳ ನಡುವಣ ನದಿಯ ಯಾ ಯಾವುದಾದರೂ ಪ್ರವೇಶ ಮಾರ್ಗದ ಇಕ್ಕಟ್ಟು ಭಾಗ.
  6. (ನೌಕಾಯಾನ) ಹಾಯಿಯ (ಪಟದ) ಮೇಲುತುದಿ(ಯ ಭಾಗ).
ಪದಗುಚ್ಛ
  1. $^3$clear one’s throat.
  2. clergy- man’s (sore) throat (ಹೆಚ್ಚಾಗಿ ಸಾರ್ವಜನಿಕ ಭಾಷಣ ಮಾಡುವವರಿಗೆ ಬರುವ) ಒಂದು ಬಗೆಯ ಗಂಟಲೂತ, ಗಂಟಲು ಹುಣ್ಣು; ಉಪದೇಶಿಗಳ ಯಾ ಮಾತಿನಮಲ್ಲರ ಗಂಟಲ ಹುಣ್ಣು.
  3. cut one another’s throats (ರೂಪಕವಾಗಿ) (ಪೈಪೋಟಿಯಲ್ಲಿ) ಒಬ್ಬರನ್ನೊಬ್ಬರು ಹಾಳುಮಾಡು; ಪರಸ್ಪರ ವಿನಾಶಕ ನೀತಿ ಅನುಸರಿಸು.
  4. cut one’s own throat (ರೂಪಕವಾಗಿ) ತನ್ನ ಕೊರಳು ತಾನೇ ಕೊಯ್ದುಕೊ; ಆತ್ಮನಾಶದ ಮಾರ್ಗ ಹಿಡಿ.
  5. cut (person’s) throat (ಕೊಲ್ಲುವ ಉದ್ದೇಶದಿಂದ) ಕತ್ತು ಕೊಯ್ಯಿ; ಕತ್ತು ಕತ್ತರಿಸು.
  6. give (person) the lie in his throat ವಿಪರೀತ ಸುಳ್ಳು ಬೊಗಳುತ್ತಾನೆಂದು ಎದುರಿಗೇ ಆರೋಪಿಸು.
  7. $^2$jump down (person’s) throat.
  8. $^4$lie in one’s throat.
  9. ram (or thrust) down one’s throat
    1. ಗಂಟಲೊಳಕ್ಕೆ ಗಿಡಿ, ತುರುಕು.
    2. (ರೂಪಕವಾಗಿ) ಬಲಾತ್ಕಾರದಿಂದ–ಒಪ್ಪಿಸು, ಒಬ್ಬನ ಗಮನಕ್ಕೆ ತರು.
  10. take by the throat ಕತ್ತು ಕಿವಿಚು; ಮೆಟರೆ ಹಿಸುಕು.