See also 1lie  2lie  3lie
4lie ಲೈ
ಕ್ರಿಯಾಪದ

(ವರ್ತಮಾನಕಾಲ ಪ್ರಥಮ ಪುರುಷ ಏಕವಚನ lies, ಭೂತರೂಪ ಮತ್ತು ಭೂತಕೃದಂತ lied, ವರ್ತಮಾನ ಕೃದಂತ lying ಉಚ್ಚಾರಣೆ ಲೈಇಂಗ್‍).

ಸಕರ್ಮಕ ಕ್ರಿಯಾಪದ
  1. (ಆತ್ಮಾರ್ಥಕ) ಸುಳ್ಳು ಹೇಳಿ (ಒಂದು ಪರಿಸ್ಥಿತಿ ಮೊದಲಾದವುಗಳಿಂದ) – ಪಾರಾಗು, ತಪ್ಪಿಸಿಕೊ, ಬಚಾಯಿಸಿಕೊ: managed to lie himself out of trouble ಅವನು ಸುಳ್ಳುಪಳ್ಳು ಹೇಳಿ ಬಚಾವಾದ.
  2. ಸುಳ್ಳು ಹೇಳಿ (ಒಬ್ಬನನ್ನು ಪರಿಸ್ಥಿತಿ ಮೊದಲಾದವುಗಳಲ್ಲಿ) ಸಿಕ್ಕಿಸು.
  3. ಸುಳ್ಳು ಹೇಳಿ (ಒಬ್ಬನನ್ನು ಪರಿಸ್ಥಿತಿ ಮೊದಲಾದವುಗಳಿಂದ) – ತಪ್ಪಿಸು, ಬಚಾಯಿಸು, ಪಾರುಮಾಡು.
  4. (ಒಬ್ಬ ವ್ಯಕ್ತಿಯ ಒಳ್ಳೆಯ ಹೆಸರು ಮೊದಲಾದವನ್ನು) ಸುಳ್ಳೆನಿಸು; (ಒಬ್ಬನ) ಹೆಸರು ಹಾಳುಮಾಡು; ಹೆಸರು ಕೆಡಿಸು; (ಒಬ್ಬನ) ಹೆಸರಿಗೆ ಮಸಿ ಬಳಿ: men have lied out of office ಹೆಸರಿಗೆ ಸುಳ್ಳಿನ ಮಸಿ ಬಳಿದು ಜನರನ್ನು ಸ್ಥಾನಗಳಿಂದ ಚ್ಯುತಿಗೊಳಿಸಿದ್ದುಂಟು.
ಅಕರ್ಮಕ ಕ್ರಿಯಾಪದ
  1. ಸುಳ್ಳು ಹೇಳು; ಸುಳ್ಳಾಡು; ಸಟೆಯಾಡು: they lied to me ಅವರು ನನಗೆ ಸುಳ್ಳು ಹೇಳಿದರು.
  2. (ವಸ್ತುವಿನ ವಿಷಯದಲ್ಲಿ) ಸುಳ್ಳು ಹೇಳು; ವಂಚಿಸು; ತಪ್ಪು ಕಲ್ಪನೆ ಹುಟ್ಟಿಸು; ತಪ್ಪು ಅಭಿಪ್ರಾಯ ಮೂಡಿಸು: that thermometer must be lying ಆ ಉಷ್ಣಮಾಪಕ ತಪ್ಪು ತೋರಿಸುತ್ತಿರಬೇಕು. the camera cannot lie ಕ್ಯಾಮರಾ ಸುಳ್ಳು ಹೇಳಲು ಸಾಧ್ಯವಿಲ್ಲ.
ನುಡಿಗಟ್ಟು

lie in one’s teeth (or throat) (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಭರ್ಜರಿ ಸುಳ್ಳು – ಹೇಳು, ಬಿಡು; ಇತಿಮಿತಿಯಿಲ್ಲದೆ ಯಾ ನಾಚಿಕೆ ಹೇಸಿಗೆ ಇಲ್ಲದೆ ಸುಳ್ಳು ಹೇಳು.