See also 1jump
2jump ಜಂಪ್‍
ಸಕರ್ಮಕ ಕ್ರಿಯಾಪದ
  1. (ಹೆಬ್ಬಾಗಿಲು ಮೊದಲಾದವನ್ನು) ಹಾರು; ಹಾರಿ ದಾಟು; ಲಂಘಿಸು.
  2. (ವಾಹನದ ವಿಷಯದಲ್ಲಿ) (ಕೆಂಪು ಸಂಕೇತ ದೀಪವನ್ನು ಕಡೆಗಣಿಸಿ) ದಾಟು; ಮುನ್ನುಗ್ಗು; ಮುಂದೆ – ಸಾಗು, ಹಾದು ಹೋಗು.
  3. (ರೈಲು, ಟ್ರ್ಯಾಮ್‍, ಮೊದಲಾದವುಗಳ ವಿಷಯದಲ್ಲಿ) ಕಂಬಿ(ಯನ್ನು), ಹಳಿ(ಯನ್ನು) – ತಪ್ಪು; ಕಂಬಿ(ಯನ್ನು) ಬಿಟ್ಟುಹೋಗು.
  4. (ಅಡ್ಡ ಬಂದ ವಸ್ತುವನ್ನು) ಹಾರು; ದಾಟು; ನೆಗೆದು ಮುಂದೆ ಹೋಗು.
  5. (ಅಮೆರಿಕನ್‍ ಪ್ರಯೋಗ) (ರೈಲು ಮೊದಲಾದವನ್ನು ಅಥವಾ ಮೊದಲಾದವುಗಳಿಂದ ಮುಖ್ಯವಾಗಿ ಕಾನೂನಿಗೆ ವಿರುದ್ದವಾದ ರೀತಿಯಲ್ಲಿ) ಥಟ್ಟನೆ ಹತ್ತು ಅಥವಾ ಇಳಿ.
  6. (ಒಪ್ಪಂದ, ಹೊಣೆ, ಮೊದಲಾದವನ್ನು) ಮುರಿ; ಕೈಬಿಡು; ತೊರೆ; ಭಂಗಮಾಡು.
  7. (ಮಗು ಮೊದಲಾದವರಿಗೆ) ಕೆಳಕ್ಕೆ ಹಾರಲು ನೆರವಾಗು; ದುಮುಕಲು ಸಹಾಯ ಮಾಡು.
  8. (ವಸ್ತುವನ್ನು ಅಥವಾ ಪ್ರಾಣಿಯನ್ನು, ಮುಖ್ಯವಾಗಿ ಕುದುರೆಯನ್ನು) ಹಾರಿಸು; ನೆಗೆಸು; ಜಿಗಿಸು; ಚಿಮ್ಮಿಸು.
  9. ಹಾರಲು, ನೆಗೆಯಲು (ಕುದುರೆಯನ್ನು) ಬಳಸು; ಕುದುರೆಯನ್ನೇರಿ (ಯಾವುದರ ಮೇಲಾಗಲಿ) ಹಾರು.
  10. (ಸಾಮಾನ್ಯವಾಗಿ ಭೂತಕೃದಂತದಲ್ಲಿ) (ಆಲೂಗೆಡ್ಡೆ ಮೊದಲಾದವನ್ನು ಬಾಣಲೆಯಲ್ಲಿ ಆಗಾಗ) ಕೆದಕುತ್ತ – ಕರಿ, ಹುರಿ, ಬಾಡಿಸು.
  11. (ವ್ಯಕ್ತಿಯ, ವಸ್ತುವಿನ ಮೇಲೆ) ಎರಗು; ಎಗುರಿಬೀಳು.
  12. (ವಿಧಿಸಿದ ಕಾಲಕ್ಕೆ) ಮುಂಚೆಯೇ ಮಾಡಿಬಿಡು.
  13. (ಹಿಂದಿನ ಅನುಭವದಾರನು ತೊರೆದು ಬಿಟ್ಟಿದ್ದೆಂಬ ಅಥವಾ ಕಾಯಿದೆಯಂತೆ ಕಳೆದುಕೊಂಡನೆಂಬ ನೆವದಿಂದ ಅವನ ಹಕ್ಕನ್ನು, ಕಾಯಿದೆ ಕ್ರಮಕ್ಕೆ ಕಾಯದೆ) ಸರಕ್ಕನೆ ವಶಪಡಿಸಿಕೊ; ಆತುರದಿಂದ ಆಕ್ರಮಿಸಿಕೊ.
  14. (ವಿಷಯ, ಪುಸ್ತಕದ ಭಾಗ, ಮೊದಲಾದವನ್ನು ಕಣ್ಣು ಹಾಯಿಸುತ್ತಾ) ದಾಟಿ ಹೋಗು; ಹಾರಿಸಿ ಬಿಡು.
  15. (ಬಂಡೆಯನ್ನು, ಬಂಡೆಯಲ್ಲಿ ತೂತನ್ನು) ಮೊನಚು ಗಡಾರಿಯಿಂದ ಕೊರೆ.
  16. (ಬೆಲೆಯನ್ನು) ಇದ್ದಕ್ಕಿದ್ದಂತೆ – ಏರಿಸು, ಹೆಚ್ಚಿಸು, ಏರುವಂತೆ ಮಾಡು.
  17. (ಮಧ್ಯದಲ್ಲಿನ ವಸ್ತುವನ್ನು ಬಿಟ್ಟು, ಮುಂದೆ) ಹೋಗು; ದಾಟು; ಹಾರು.
ಅಕರ್ಮಕ ಕ್ರಿಯಾಪದ
  1. (ನೆಲ ಮೊದಲಾದವುಗಳಿಂದ ಮೇಲಕ್ಕೆ) ನೆಗೆ; ಎಗುರು; ಹಾರು; ಚಿಮ್ಮು; ಜಿಗಿ; ಕುಪ್ಪಳಿಸು; ಲಂಘಿಸು.
  2. (ಮೀನಿನ ವಿಷಯದಲ್ಲಿ) ಬಾಲವನ್ನು ನಿಮಿರಿಸಿ ಚಿಮ್ಮು.
  3. (ಆಸನ ಮೊದಲಾದವುಗಳಿಂದ ಮೇಲಕ್ಕೆ, ಎತ್ತರದ ಸ್ಥಳದಿಂದ ದೂರಕ್ಕೆ) ನೆಗೆ; ಹಾರು; ಜಿಗಿ: we jumped up ನಾವು ಮೇಲಕ್ಕೆ ನೆಗೆದೆವು.
  4. (ಸಂಭ್ರಮ, ದುಗುಡ, ಆಘಾತ, ಮೊದಲಾದವುಗಳಿಂದ) ಥಟ್ಟನೆ – ಬೆಚ್ಚಿಬೀಳು, ನೆಗೆದಾಡು, ಕುಣಿದಾಡು: (ಮುಖ್ಯವಾಗಿ) jump for joy ಸಂತೋಷದಿಂದ ನೆಗೆದಾಡು, ಕುಣಿದಾಡು.
  5. (ಬೆಲೆ ಮೊದಲಾದವುಗಳ ವಿಷಯದಲ್ಲಿ) ಇದ್ದಕ್ಕಿದ್ದಂತೆ – ಏರು, ಹೆಚ್ಚಾಗು: prices jumped ಬೆಲೆಗಳು ಹಠಾತ್ತನೆ ಏರಿದವು.
  6. ಆತುರದಿಂದ ತೀರ್ಮಾನಕ್ಕೆ ಬರು; ತೀರ್ಮಾನಕ್ಕೆ ದಿಡೀರನೆ ಧುಮುಕು.
  7. ಇದ್ದಕ್ಕಿದ್ದಂತೆ (ಪ್ರಾಮುಖ್ಯ, ಸ್ಥಾನ, ಮೊದಲಾದವಕ್ಕೆ) – ಏರು, ಹಾರು, ನೆಗೆ.
  8. (ಒಬ್ಬನೊಡನೊಬ್ಬ, ಒಂದರೊಡನೊಂದು) ಹೊಂದಿಕೊ; ಹೊಂದಾವಣೆಗೆ ಬರು; ಒಂದಾಗು; ಮೇಳಯಿಸು.
  9. ಒಂದು ಭಾವನೆ ಅಥವಾ ವಿಷಯದಿಂದ ಇನ್ನೊಂದಕ್ಕೆ – ಹಾರು, ಎಗರು, ನೆಗೆ, ಬೇಗ ಹೋಗು ಅಥವಾ ಬದಲಾಯಿಸು.
  10. ಇದ್ದಕ್ಕಿದ್ದಂತೆ ಅಥವಾ ಆತುರಾತುರವಾಗಿ ನಿರ್ದಿಷ್ಟ ರೀತಿಯಲ್ಲಿ ಚಲಿಸು: we jumped into the car ನಾವು ಕಾರಿನೊಳಕ್ಕೆ ಹಾರಿ ಕುಳಿತೆವು. jumped from (or out of) the car ನಾವು ಕಾರಿನಿಂದ ಹೊರಕ್ಕೆ ನೆಗೆದವು.
ಪದಗುಚ್ಛ
  1. jump in (ಗಾಡಿ ಮೊದಲಾದವುಗಳೊಳಕ್ಕೆ) ಚುರುಕಾಗಿ ಹಾರಿಕೊ.
  2. jump the queue (ಬ್ರಿಟಿಷ್‍ ಪ್ರಯೋಗ) ಕ್ಯೂ ಹಾರು; ಸಾಲು ಹಾರು; ಪಂಕ್ತಿ ಲಂಘಿಸು; ಕ್ಯೂನಲ್ಲಿ ನಿಂತಿದ್ದವರನ್ನು ಹಿಂದಕ್ಕೆ ಹಾಕಿ ಮುಂದಕ್ಕೆ ಹೋಗು, ಮುಂದೆ ಹೋಗಿ ನಿಲ್ಲು.
ನುಡಿಗಟ್ಟು
  1. jump at (ರೂಪಕವಾಗಿ) (ವಾಗ್ದಾನ, ಲಾಭದ ವ್ಯಾಪಾರ, ಮೊದಲಾದವನ್ನು) ತವಕದಿಂದ, ತ್ವರೆಯಿಂದ, ಆತುರದಿಂದ – ಒಪ್ಪಿಕೊ, ಅಂಗೀಕರಿಸು, ಹಿಡಿದುಕೊ.
  2. jump down person’s throat
    1. ಒಬ್ಬನನ್ನು ಬಿರುಸಾಗಿ ಖಂಡಿಸು, ಛೀಮಾರಿ ಹಾಕು.
    2. ಒಬ್ಬನಿಗೆ ಬಿರುಸಾಗಿ ಪ್ರತ್ಯುತ್ತರ ಕೊಡು.
  3. jump in the lake (ಆಡುಮಾತು) (ಸಾಮಾನ್ಯವಾಗಿ ವಿಧಿ ರೂಪದಲ್ಲಿ) ತೊಲಗಿ ಹೋಗು; ಹೋಗಿ ಕೆರೆಗೆ ಬೀಳು.
  4. jump on (or upon) (ಮಾತಿನಿಂದ ಅಥವಾ ಕಾರ್ಯದಿಂದ) ಹುಟ್ಟಡಗಿಸು; ತಲೆಎತ್ತದಂತೆ ಮೇಲೆರಗು; ಮೇಲೆ ಬಿದ್ದು ತುಳಿದು ಹಾಕು (ರೂಪಕವಾಗಿ ಸಹ).
  5. jump on the bandwagon ಗೆಲ್ಲುವ ಪಕ್ಷ ಹಿಡಿ; ಗೆಲ್ಲುವೆತ್ತಿನ ಬಾಲ ಹಿಡಿ; ಯಶಸ್ವಿಯಾಗುವಂತಿರುವವರ ಕಡೆ ಸೇರಿಕೊ.
  6. jump out of one’s $^1$skin (ಆಶ್ಚರ್ಯ, ಆನಂದ, ಮೊದಲಾದವುಗಳಿಂದ) ಬೆಚ್ಚಿಬೀಳು; ಹೌಹಾರು; ಚಕಿತನಾಗು.
  7. jump over the broomstick ಮದುವೆ ಮಾಡಿಕೊ; ವಿವಾಹವಾಗು.
  8. jump ship (ನಾವಿಕನ ವಿಷಯದಲ್ಲಿ) (ಮಾಡಿಕೊಂಡಿರುವ ಒಪ್ಪಂದದ ಅವಧಿ ಮುಗಿಯುವುದಕ್ಕಿಂತ ಮುಂಚೆಯೇ) ಕೆಲಸವನ್ನು ತೊರೆದು ಹೋಗು.
  9. jump the gun (ಆಡುಮಾತು) ಸಿಗ್ನಲ್‍ ಕೊಡುವುದಕ್ಕೆ ಮುಂಚೆ ಯಾ ಒಪ್ಪಿದ ಕಾಲಕ್ಕೆ – ಹೊರಡು.
  10. jump together ಒಂದರೊಡನೊಂದು ಪೂರ್ತಿಯಾಗಿ ಮೇಳಯಿಸು, ಹೊಂದಿಕೊ.
  11. jump to it ಅದಕ್ಕೆ ಅಥವಾ ಕೆಲಸಕ್ಕೆ ಧುಮುಕು; ಕೂಡಲೇ ಬಿರುಸಿನಿಂದ ಪ್ರಾರಂಭಿಸು.