See also 1clear  2clear
3clear ಕ್ಲಿಅರ್‍
ಸಕರ್ಮಕ ಕ್ರಿಯಾಪದ
  1. ಸ್ವಚ್ಛಗೊಳಿಸು; ನಿರ್ಮಲಗೊಳಿಸು; ಶುದ್ಧಗೊಳಿಸು.
  2. (ಅಭಿಪ್ರಾಯ, ಬರೆಹ ಮೊದಲಾದವನ್ನು) ಸ್ಪಷ್ಟಗೊಳಿಸು; ನಿಸ್ಸಂದಿಗ್ಧಗೊಳಿಸು; ಸ್ಫುಟಗೊಳಿಸು.
  3. ನಿರಪರಾಧಿಯೆಂದು ಘೋಷಿಸು; ತಪ್ಪಿತಸ್ಥನಲ್ಲವೆಂದು ತೋರಿಸು; ನಿರ್ದೋಷಿಯೆಂದು–ಸಾಧಿಸು, ಪ್ರತಿಪಾದಿಸು.
  4. (ವ್ಯಕ್ತಿಯು ರಹಸ್ಯ ಸಮಾಚಾರವನ್ನು ಪಡೆಯಲು ಅರ್ಹನೆಂದು) ಸಾರು; ಘೋಷಿಸು.
  5. ಬಹಿಷ್ಕಾರ ಯಾ ಅಡಚಣೆಗಳಿಂದ–ದೂರವಾಗಿಸು, ಮುಕ್ತವಾಗಿಸು ಯಾ ಬಿಡುಗಡೆ ಕೊಡಿಸು.
  6. ಅಡ್ಡಿ ಅಡಚಣೆಗಳನ್ನು ನಿವಾರಿಸು; ಪ್ರತಿಬಂಧಕ ಪರಿಹರಿಸು; ಅಡಚಣೆ, ಅನಪೇಕ್ಷಿತ ವಸ್ತು ಮೊದಲಾದವನ್ನು ತೆಗೆದುಹಾಕು, ನಿವಾರಿಸು: clear out of the way ದಾರಿಯಿಂದ (ಅಡಚಣೆಯನ್ನು) ತೆಗೆದುಹಾಕು; ದಾರಿ ಬಿಡಿಸು.
  7. (ಸಾಲ, ಬಿಲ್ಲು ಮೊದಲಾದವನ್ನು ಪೂರ್ತಿ) ಕೊಟ್ಟು ಬಿಡು; ಪಾವತಿ ಮಾಡು; ತೀರಿಸು; ಸಲ್ಲಿಸು.
  8. (ಚೆಕ್ಕು ಯಾ ವ್ಯಾಪಾರದ ಹುಂಡಿಗಳನ್ನು ತೀರುವೆ ಮನೆಯಲ್ಲಿ) ವಿಲೇವಾರಿ ಮಾಡು.
  9. ಬರಿದು ಮಾಡು; ತೆಗೆದು ಹಾಕು: clear a ship of her cargo ಸಾಮಾನನ್ನು ಇಳಿಸಿ ಹಡಗನ್ನು ಖಾಲಿ ಮಾಡು. clear this land of trees ಈ ನೆಲದಿಂದ ಮರಗಳನ್ನು ತೆಗೆದು ಹಾಕು ಯಾ ಕಡಿದು ಹಾಕು.
  10. (ಮುಖ್ಯವಾಗಿ ಹಾರುವುದರಿಂದ) ಮುಟ್ಟದೆ, ತಾಗದೆ–ದಾಟು, ಹಾಯು; ಹಾದುಹೋಗು: the ship cleared the reef ಹಡಗು ದಿಬ್ಬವನ್ನು (ತಾಗದೆ) ದಾಟಿತು. the winner cleared six feet ಜಯಶಾಲಿಯು ಕಂಬಿಯನ್ನು ತಾಗದೆ ಆರು ಅಡಿ ಹಾರಿದನು.
  11. (ಹಡಗು, ಸರಕು ಮೊದಲಾದವುಗಳ) ಸುಂಕ ಮೊದಲಾದ ಎಲ್ಲವನ್ನೂ ತೀರಿಸಿ–ಬಿಡಿಸು, ಬಿಡುಗಡೆ ಮಾಡಿಸು.
  12. (ಹಣವನ್ನು) ನಿವ್ವಳ ಲಾಭವಾಗಿ ಪಡೆ; ಕಳೆಯುವುದು, ಕೂಡುವುದು ಯಾವುದೂ ಇಲ್ಲದೆ ಒಟ್ಟು ಲಾಭವಾಗಿ ಯಾ ಆದಾಯವಾಗಿ ಪಡೆ.
  13. (ವೆಚ್ಚಗಳನ್ನು) ಸರಿದೂಗಿಸು; ತೀರಿಸು; ವೆಚ್ಚಗಳನ್ನೆಲ್ಲಾ ಕೊಟ್ಟುಬಿಡು.
  14. (ಯಾವುದೇ ಸರಕಿನ ವಿಷಯದಲ್ಲಿ) ಮಾರಾಟ ಮಾಡಿ ಮುಗಿಸು; ಇರುವುದನ್ನೆಲ್ಲಾ ಮಾರಿ ಯಾ ಕೊಂಡು ಮುಗಿಸು: bidders quickly cleared the market’s wheat stores ಮಾರುಕಟ್ಟೆಯ ಗೋಧಿ ದಾಸ್ತಾನನ್ನು ದಳ್ಳಾಳಿಗಳು ಬೇಗ ಮುಗಿಸಿಬಿಟ್ಟರು.
  15. (ಸಾಲ ಮೊದಲಾದವುಗಳಿಂದ) ಬಿಡಿಸು; ಬಿಡುಗಡೆಗೊಳಿಸು; ಮುಕ್ತಗೊಳಿಸು; ವಿಮೋಚನೆಗೊಳಿಸು: she had to borrow money to clear her estate ಅವಳು ತನ್ನ ಜಮೀನನ್ನು ಬಿಡಿಸಿಕೊಳ್ಳಲು ಸಾಲ ತೆಗೆಯಬೇಕಾಯಿತು. just a few dollars more would clear him ಇನ್ನು ಕೆಲವೇ ಕೆಲವು ಡಾಲರು ಅವನನ್ನು ಸಾಲದಿಂದ ಮುಕ್ತಗೊಳಿಸುತ್ತವೆ.
  16. (ಅಂಚೆ ಕಾಗದ, ಟೆಲಿಹೋನು ಕರೆ ಮೊದಲಾದವನ್ನು) ವಿಲೇವಾರಿ ಮಾಡು; ವ್ಯವಸ್ಥೆಗೊಳಿಸು.
  17. ಅನುಮತಿ ಕೊಡು; ಒಪ್ಪಿಗೆ ಕೊಡು.
ಅಕರ್ಮಕ ಕ್ರಿಯಾಪದ
  1. ಸ್ವಚ್ಛವಾಗು; ನಿರ್ಮಲವಾಗು; ಶುದ್ಧವಾಗು.
  2. (ಮಂಜು, ಚಿಹ್ನೆಗಳು ಮೊದಲಾದವು) ಮಾಯವಾಗು; ಇಲ್ಲವಾಗು; ಕರಗಿಹೋಗು.
  3. (ಅಶಿಷ್ಟ) (ವ್ಯಕ್ತಿಗಳ ವಿಷಯದಲ್ಲಿ) ಮಾಯವಾಗು; ಜಾಗ ಖಾಲಿ ಮಾಡು; ಹೊರಟುಹೋಗು.
  4. (ಊಟವಾದ ಮೇಲೆ ಊಟದ ಕೋಣೆ, ಮೇಜು ಮೊದಲಾದವುಗಳಿಂದ ಪಾತ್ರೆಗಳು, ಉಳಿದ ಊಟ, ತಿಂಡಿ ಮೊದಲಾದವನ್ನು ತೆಗೆದು) ಸ್ವಚ್ಛಗೊಳಿಸು; ಬರಿದು ಮಾಡು; ಖಾಲಿ ಮಾಡು: you are to clear after every meal ಪ್ರತಿ ಸಾರಿ ಊಟ ಆದ ಮೇಲೂ ನೀನು ಸ್ವಚ್ಛಗೊಳಿಸಬೇಕು.
  5. (ಹಡಗಿನ ವಿಷಯದಲ್ಲಿ) ಸುಂಕ ಮೊದಲಾದವನ್ನು ತೀರಿಸಿ ಬಂದರು ಬಿಡು ಯಾ ಹೊರಡು.
  6. ನಿರಾಳವಾಗು; ಸಮಾಧಾನ ತಾಳು; ನೆಮ್ಮದಿ ಹೊಂದು; ಸಂಶಯ, ಚಿಂತೆ, ತಪ್ಪಭಿಪ್ರಾಯ ಮೊದಲಾದವುಗಳಿಂದ ಬಿಡುಗಡೆ ಹೊಂದು: his mind cleared when he heard the truth ನಿಜವನ್ನು ಕೇಳಿದಾಗ ಅವನ ಮನಸ್ಸು ನಿರಾಳವಾಯಿತು.
  7. (ಮಾರಾಟದ ಸರಕಿನ ವಿಷಯದಲ್ಲಿ) ಪೂರ್ತಿ ಮಾರಾಟವಾಗು; ಮಾರಾಟವಾಗಿಹೋಗು: wheat cleared rapidly ಗೋಧಿ ಬೇಗನೆ ಮಾರಾಟವಾಗಿಹೋಯಿತು.
ಪದಗುಚ್ಛ

clear room etc. ರೂಮು ಮೊದಲಾದವುಗಳಿಂದ ವ್ಯಕ್ತಿಗಳನ್ನು ಹೊರಹಾಕು, ಖಾಲಿ ಮಾಡಿಸು.

ನುಡಿಗಟ್ಟು
  1. clear away
    1. (ಜಾಗ ಮಾಡಿಕೊಡಲು ಯಾವುದನ್ನೇ) ತೆಗೆದು ಹಾಕು.
    2. ಊಟದ ಮೇಜಿನಿಂದ ಉಳಿದ ತಿಂಡಿ, ಊಟ, ತಟ್ಟೆ, ಬಟ್ಟಲು ಮೊದಲಾದವನ್ನು ತೆಗೆ.
    3. (ಮಂಜು, ಹೊಗೆ, ಚಿಹ್ನೆ ಮೊದಲಾದವುಗಳ ವಿಷಯದಲ್ಲಿ) ಇಲ್ಲವಾಗು; ಮಾಯವಾಗು; ಕರಗಿ ಹೋಗು.
  2. clear land ಆರಂಬಕ್ಕೆ, ಬೇಸಾಯಕ್ಕೆ ಯಾ ಕಟ್ಟಡ ಕಟ್ಟುವುದಕ್ಕೆ ಮೊದಲು ಜಮೀನಿನಲ್ಲಿರುವ ಮರ ಮೊದಲಾದವನ್ನು ಕಡಿದುಹಾಕು.
  3. clear off
    1. (ಯಾವುದನ್ನೇ) ಹೊರಹಾಕು; ತೊಲಗಿಸು; ನಿವಾರಿಸು.
    2. (ಮಂಜು ಮೊದಲಾದವು) ಇಲ್ಲವಾಗು; ಮಾಯವಾಗು; ಕಾಣದಾಗು.
    3. (ವ್ಯಕ್ತಿಯ ವಿಷಯದಲ್ಲಿ) ಇಲ್ಲವಾಗು; ಮಾಯವಾಗು: ಹೊರಟು ಹೋಗು.
    4. (ಸಾಲ) ತೀರಿಸು.
  4. clear one’s throat (ಮೆಲ್ಲಗೆ ಕೆಮ್ಮಿ) ಗಂಟಲು–ಸರಿ ಮಾಡಿಕೊ, ಬಿಡಿಸಿಕೊ.
  5. clear out
    1. ಬರಿದು ಮಾಡು; ಖಾಲಿ ಮಾಡು.
    2. ಚೊಕ್ಕಟಗೊಳಿಸು; ಸ್ವಚ್ಛ ಮಾಡು.
    3. (ಮುಖ್ಯವಾಗಿ ಬೇಗ ಯಾ ಇದ್ದಕ್ಕಿದ್ದಂತೆ) ಹೊರಟುಹೋಗು; ಪರಾರಿಯಾಗು; ಓಡಿಹೋಗು; ಪಲಾಯನ ಮಾಡು.
    4. (ಹಡಗಿನ ವಿಷಯದಲ್ಲಿ) ಸುಂಕ ಮೊದಲಾದವನ್ನು ತೀರಿಸಿ ಬಂದರು ಬಿಡು.
    5. (ಆಡುಮಾತು) (ಯಾರನ್ನೋ ಯಾ ಯಾವುದನ್ನೋ ಬಲಾತ್ಕಾರವಾಗಿ) ಹೊರದೂಡು; ಹೊರಗಟ್ಟು; ಹೊರಹಾಕು; ಹೊರನೂಕು.
  6. clear the air
    1. ತಂಪಾಗಿಸು; ಸೆಕೆಯಿಲ್ಲದಂತೆ ಮಾಡು.
    2. ವಾತಾವರಣ ತಿಳಿಯಾಗಿಸು; ಯಾವುದೇ ಪರಿಸ್ಥಿತಿಯಲ್ಲಿನ ಚಿಂತೆ, ಆತಂಕ, ಸಂಶಯ, ನಿರ್ಬಂಧ, ಮುನಿಸು ಮೊದಲಾದವುಗಳನ್ನು ಹೋಗಲಾಡಿಸು.
  7. clear the decks (for action) (ರೂಪಕವಾಗಿ ಸಹ) ಯುದ್ಧಕ್ಕೆ ಸಿದ್ಧವಾಗು; ಕಾಳಗಕ್ಕೆ ಅಣಿಯಾಗು; ಕಾರ್ಯಾಚರಣೆಗೆ ತಯಾರಾಗು.
  8. clear the way (ಹೊಸ ಬೆಳವಣಿಗೆ, ಚಟುವಟಿಕೆ ಮೊದಲಾದವುಗಳಿಗೆ) ದಾರಿ ಮಾಡಿಕೊಡು; ಅಡ್ಡಿ ಅಡಚಣೆ ನಿವಾರಿಸು; ಹಾದಿ ಕಲ್ಪಿಸು; ದಾರಿ ಸುಗಮವಾಗಿಸು.
  9. clear thing with (ವ್ಯಕ್ತಿಯಿಂದ) ಯಾವುದಕ್ಕೇ ಒಪ್ಪಿಗೆ ಯಾ ಪ್ರಮಾಣೀಕೃತ ಅಧಿಕಾರ ಪಡೆ.
  10. clear up
    1. (ತೊಡಕು, ರಹಸ್ಯ) ಬಿಡಿಸು; ಪರಿಹರಿಸು.
    2. ಚೊಕ್ಕಟ ಮಾಡು; ಓರಣಗೊಳಿಸು; ಒಪ್ಪಗೊಳಿಸು.
    3. (ವಾತಾವರಣ ಮೊದಲಾದವು) ತಿಳಿಯಾಗು; ನಿರ್ಮಲವಾಗು.
    4. = 3clear ಅಕರ್ಮಕ ಕ್ರಿಯಾಪದ \((2)\).