See also 2row  3row  4row  5row
1row ರೋ
ನಾಮವಾಚಕ
  1. (ಜನರ ಯಾ ವಸ್ತುಗಳ, ಹೆಚ್ಚುಕಡಮೆ ಸರಳ ರೇಖೆಯಲ್ಲಿರುವ) ಸಾಲು; ಪಂಕ್ತಿ; ಹಂತ; ಶ್ರೇಣಿ: in a row ಸಾಲಾಗಿ. in rows ಸಾಲುಸಾಲಾಗಿ.
    1. ಮನೆಗಳ ಸಾಲು, ಕೇರಿ, ಓಣಿ.
    2. ಒಂದು ಕಡೆ ಯಾ ಎರಡೂ ಕಡೆ ಸಾಲುಮನೆಗಳುಳ್ಳ ಬೀದಿ; ಸಾಲುಮನೆಗಳ ಬೀದಿ (ಅನೇಕವೇಳೆ ಬೀದಿಗಳ ಹೆಸರುಗಳಲ್ಲಿ ಪ್ರಯೋಗ)
  2. (ನಾಟ್ಯಶಾಲೆ, ಸಿನಿಮಾ ಮೊದಲಾದವುಗಳಲ್ಲಿ) ಆಸನಸಾಲು; ಪೀಠಪಂಕ್ತಿ: in front row ಪೀಠಗಳ ಮುಂದಿನ ಸಾಲಿನಲ್ಲಿ.
  3. (ತೋಟದಲ್ಲಿ ಯಾ ಹೊಲದಲ್ಲಿ) ಸಸ್ಯಗಳ ಸಾಲು.
  4. ಅಡ್ಡ–ಪಂಕ್ತಿ, ಸಾಲು; ಕೋಷ್ಟಕ, ಪಟ್ಟಿ ಮೊದಲಾದವುಗಳಲ್ಲಿ ಅಡ್ಡಲಾಗಿ ಹಾಕಿರುವ ದಾಖಲೆಗಳ ಸಾಲು.
ಪದಗುಚ್ಛ
  1. a hard row to hoe ಕಷ್ಟದ ಕೆಲಸ.
  2. in a row
    1. ಸಾಲಾಗಿ.
    2. (ಆಡುಮಾತು) ಅನುಕ್ರಮವಾಗಿ; ಒಂದಾದ ಮೇಲೊಂದರಂತೆ: two Sundays in a row ಅನುಕ್ರಮವಾಗಿ ಎರಡು ಭಾನುವಾರಗಳು. two holidays in a row ಒಂದಾದ ಮೇಲೊಂದರಂತೆ ಎರಡು ರಜಾದಿನಗಳು.
See also 1row  3row  4row  5row
2row ರೋ
ಸಕರ್ಮಕ ಕ್ರಿಯಾಪದ
    1. (ದೋಣಿಯನ್ನು ಹುಟ್ಟುಗಳಿಂದ) ನಡಸು; ಹುಟ್ಟುಹಾಕು ( ಅಕರ್ಮಕ ಕ್ರಿಯಾಪದ ಸಹ).
    2. (ಪ್ರಯಾಣಿಕರನ್ನು) ದೋಣಿಯಲ್ಲಿ ಸಾಗಿಸು, ದಾಟಿಸು, ಹಾಯಿಸು.
    1. ಪಂದ್ಯದಲ್ಲಿ ದೋಣಿ ನಡಸು. ಹುಟ್ಟುಹಾಕು: row a race ಪಂದ್ಯದಲ್ಲಿ ದೋಣಿ ನಡಸು.
    2. ದೋಣಿ ಪಂದ್ಯದಲ್ಲಿ ಸ್ಪರ್ಧಿಸು.
ಅಕರ್ಮಕ ಕ್ರಿಯಾಪದ
  1. (ದೋಣಿಯಲ್ಲಿ) ನಿರ್ದಿಷ್ಟ ಸಂಖ್ಯೆಯ ಹುಟ್ಟುಗಾರನಾಗಿರು: rows $5$ in the Oxford crew ಆಕ್ಸ್‍ಹರ್ಡ್‍ ಕಲಾಸಿ ತಂಡದಲ್ಲಿ ಅವನು ಐದನೆಯ ಸಂಖ್ಯೆಯ ಹುಟ್ಟುಗಾರ.
  2. (ದೋಣಿಯ ವಿಷಯದಲ್ಲಿ) ನಿರ್ದಿಷ್ಟ ಸಂಖ್ಯೆಯ ಹುಟ್ಟುಗಳಿರು ಯಾ ಹುಟ್ಟುಗಳಿಂದ ಸಾಗು.
ಪದಗುಚ್ಛ
  1. row down (ದೋಣಿ ಪಂದ್ಯದಲ್ಲಿ) ಮುಂದಿದ್ದವನನ್ನು ಸೋಲಿಸು, ಹಿಂಬೀಳಿಸು.
  2. row out ದೋಣಿ ನಡಸಿ, ಹುಟ್ಟುಹಾಕಿ–ಬಳಲು, ಆಯಾಸಪಡು: the crew were completely rowed out at the finish ಕೊನೆಮುಟ್ಟುವ ಹೊತ್ತಿಗೆ ಕಲಾಸಿ ತಂಡ ಬಳಲಿತ್ತು.
  3. row over (ದೋಣಿ ಪಂದ್ಯದಲ್ಲಿ ಸ್ಪರ್ಧಿಗಳ ಅಭಾವದಿಂದ ಯಾ ಅಸಾಮರ್ಥ್ಯದಿಂದ) ದೋಣಿ ಮುಟ್ಟಬೇಕಾದ ದೂರವನ್ನು ಸುಲಭವಾಗಿ ಕ್ರಮಿಸು, ತಲುಪು; ಸುಲಭವಾಗಿ ಗೆಲ್ಲು; ಜಯಿಸು.
See also 1row  2row  4row  5row
3row ರೋ
ನಾಮವಾಚಕ
  1. ದೋಣಿ ನಡಸುವ ಒಂದು ಸುತ್ತು, ಸೂಳು.
  2. ದೋಣಿ ವಿಹಾರ.
See also 1row  2row  3row  5row
4row ರೋ
ನಾಮವಾಚಕ
  1. (ಆಡುಮಾತು) ಗಲಾಟೆ; ಗದ್ದಲ; ಗಲಭೆ; ಹುಯಿಲು; ಗೊಂದಲ; ರಂಪ; ದೊಂಬಿ; ಜಗಳ: what’s the row ಏನು ಗದ್ದಲ? ಏನು ಗಲಾಟೆ?
  2. ಕಾದಾಟ; ಬಡಿದಾಟ; ರಂಪ; ಗೊಂದಲ: town-&-gown row (ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಡ್ಜ್‍ ವಿಶ್ವವಿದ್ಯಾನಿಲಯಗಳಲ್ಲಿ) ಸದಸ್ಯೇತರರ ಮತ್ತು ಸದಸ್ಯರ ಬಡಿದಾಟ.
  3. ಆಕ್ಷೇಪಣೆಗೆ ಗುರಿಯಾಗುವುದು; ಬೈಗುಳ ತಿನ್ನುವುದು; ಛೀಮಾರಿ ಮಾಡಿಸಿಕೊಳ್ಳುವುದು: shall get into a row ಬೈಗುಳ ತಿನ್ನುತ್ತೇನೆ; ಆಕ್ಷೇಪಣೆಗೆ ಗುರಿಯಾಗುತ್ತೇನೆ.
ಪದಗುಚ್ಛ
  1. kick up a row = ಪದಗುಚ್ಛ\((2)\).
  2. make a row
    1. ಗಲಾಟೆಮಾಡು; ಗಲಭೆಮಾಡು.
    2. ಜೋರಾಗಿ ಪ್ರತಿಭಟಿಸು.
See also 1row  2row  3row  4row
5row ರೋ
ಸಕರ್ಮಕ ಕ್ರಿಯಾಪದ

ಆಕ್ಷೇಪಣೆ ಮಾಡು; ಛೀಮಾರಿ ಹಾಕು; ಗದರಿಸು; ಕೋಪದಿಂದ ಬಯ್ಯು.