See also 1row  3row  4row  5row
2row ರೋ
ಸಕರ್ಮಕ ಕ್ರಿಯಾಪದ
    1. (ದೋಣಿಯನ್ನು ಹುಟ್ಟುಗಳಿಂದ) ನಡಸು; ಹುಟ್ಟುಹಾಕು ( ಅಕರ್ಮಕ ಕ್ರಿಯಾಪದ ಸಹ).
    2. (ಪ್ರಯಾಣಿಕರನ್ನು) ದೋಣಿಯಲ್ಲಿ ಸಾಗಿಸು, ದಾಟಿಸು, ಹಾಯಿಸು.
    1. ಪಂದ್ಯದಲ್ಲಿ ದೋಣಿ ನಡಸು. ಹುಟ್ಟುಹಾಕು: row a race ಪಂದ್ಯದಲ್ಲಿ ದೋಣಿ ನಡಸು.
    2. ದೋಣಿ ಪಂದ್ಯದಲ್ಲಿ ಸ್ಪರ್ಧಿಸು.
ಅಕರ್ಮಕ ಕ್ರಿಯಾಪದ
  1. (ದೋಣಿಯಲ್ಲಿ) ನಿರ್ದಿಷ್ಟ ಸಂಖ್ಯೆಯ ಹುಟ್ಟುಗಾರನಾಗಿರು: rows $5$ in the Oxford crew ಆಕ್ಸ್‍ಹರ್ಡ್‍ ಕಲಾಸಿ ತಂಡದಲ್ಲಿ ಅವನು ಐದನೆಯ ಸಂಖ್ಯೆಯ ಹುಟ್ಟುಗಾರ.
  2. (ದೋಣಿಯ ವಿಷಯದಲ್ಲಿ) ನಿರ್ದಿಷ್ಟ ಸಂಖ್ಯೆಯ ಹುಟ್ಟುಗಳಿರು ಯಾ ಹುಟ್ಟುಗಳಿಂದ ಸಾಗು.
ಪದಗುಚ್ಛ
  1. row down (ದೋಣಿ ಪಂದ್ಯದಲ್ಲಿ) ಮುಂದಿದ್ದವನನ್ನು ಸೋಲಿಸು, ಹಿಂಬೀಳಿಸು.
  2. row out ದೋಣಿ ನಡಸಿ, ಹುಟ್ಟುಹಾಕಿ–ಬಳಲು, ಆಯಾಸಪಡು: the crew were completely rowed out at the finish ಕೊನೆಮುಟ್ಟುವ ಹೊತ್ತಿಗೆ ಕಲಾಸಿ ತಂಡ ಬಳಲಿತ್ತು.
  3. row over (ದೋಣಿ ಪಂದ್ಯದಲ್ಲಿ ಸ್ಪರ್ಧಿಗಳ ಅಭಾವದಿಂದ ಯಾ ಅಸಾಮರ್ಥ್ಯದಿಂದ) ದೋಣಿ ಮುಟ್ಟಬೇಕಾದ ದೂರವನ್ನು ಸುಲಭವಾಗಿ ಕ್ರಮಿಸು, ತಲುಪು; ಸುಲಭವಾಗಿ ಗೆಲ್ಲು; ಜಯಿಸು.