See also 2row  3row  4row  5row
1row ರೋ
ನಾಮವಾಚಕ
  1. (ಜನರ ಯಾ ವಸ್ತುಗಳ, ಹೆಚ್ಚುಕಡಮೆ ಸರಳ ರೇಖೆಯಲ್ಲಿರುವ) ಸಾಲು; ಪಂಕ್ತಿ; ಹಂತ; ಶ್ರೇಣಿ: in a row ಸಾಲಾಗಿ. in rows ಸಾಲುಸಾಲಾಗಿ.
    1. ಮನೆಗಳ ಸಾಲು, ಕೇರಿ, ಓಣಿ.
    2. ಒಂದು ಕಡೆ ಯಾ ಎರಡೂ ಕಡೆ ಸಾಲುಮನೆಗಳುಳ್ಳ ಬೀದಿ; ಸಾಲುಮನೆಗಳ ಬೀದಿ (ಅನೇಕವೇಳೆ ಬೀದಿಗಳ ಹೆಸರುಗಳಲ್ಲಿ ಪ್ರಯೋಗ)
  2. (ನಾಟ್ಯಶಾಲೆ, ಸಿನಿಮಾ ಮೊದಲಾದವುಗಳಲ್ಲಿ) ಆಸನಸಾಲು; ಪೀಠಪಂಕ್ತಿ: in front row ಪೀಠಗಳ ಮುಂದಿನ ಸಾಲಿನಲ್ಲಿ.
  3. (ತೋಟದಲ್ಲಿ ಯಾ ಹೊಲದಲ್ಲಿ) ಸಸ್ಯಗಳ ಸಾಲು.
  4. ಅಡ್ಡ–ಪಂಕ್ತಿ, ಸಾಲು; ಕೋಷ್ಟಕ, ಪಟ್ಟಿ ಮೊದಲಾದವುಗಳಲ್ಲಿ ಅಡ್ಡಲಾಗಿ ಹಾಕಿರುವ ದಾಖಲೆಗಳ ಸಾಲು.
ಪದಗುಚ್ಛ
  1. a hard row to hoe ಕಷ್ಟದ ಕೆಲಸ.
  2. in a row
    1. ಸಾಲಾಗಿ.
    2. (ಆಡುಮಾತು) ಅನುಕ್ರಮವಾಗಿ; ಒಂದಾದ ಮೇಲೊಂದರಂತೆ: two Sundays in a row ಅನುಕ್ರಮವಾಗಿ ಎರಡು ಭಾನುವಾರಗಳು. two holidays in a row ಒಂದಾದ ಮೇಲೊಂದರಂತೆ ಎರಡು ರಜಾದಿನಗಳು.