See also 2rough  3rough  4rough
1rough ರಹ್‍
ಗುಣವಾಚಕ
  1. ಒರಟಾದ; ತರಕಲಾದ; ದರಕಾದ; ದೊರಗಾದ.
  2. (ನೆಲ, ದೇಶ ಮೊದಲಾದವು) ಉಬ್ಬುತಗ್ಗುಗಳುಳ್ಳ; ಕಾಡುಮೇಡಿನ; ಏರುಪೇರುಗಳುಳ್ಳ; ಹಳ್ಳತಿಟ್ಟಾದ; ಸಮವಾದ ಮೇಲ್ಮೈಯಿಲ್ಲದ.
  3. ಕೂದಲುತುಂಬಿದ; ಒರಟುಕೂದಲಿನ; ಬಿರುಸುಕೂದಲುಳ್ಳ: rough skin ಬಿರುಗೂದಲ ಚರ್ಮ.
  4. (ಬಟ್ಟೆಯ ವಿಷಯದಲ್ಲಿ) ನಯವಿಲ್ಲದ; ಒರಟು; ದುವಲ್ಲದ.
  5. ಗೊಂದಲದ; ಒರಟಾಟದ; ದೊಂಬಿಯ; ಪುಂಡಾಟದ: rough element of the population ಪುಂಡುಜನ; ಒರಟುಜನ.
  6. ಕಠಿಣ; ಕಟು; ತೀಕ್ಷ್ಣ: rough temper ಕಟುವಾದ ಮನೋಧರ್ಮ.
  7. (ಭಾಷೆ ಮೊದಲಾದವು) ಕ್ರೂರ; ಉಗ್ರ; ಪರುಷ; ಬಿರುಸಾದ; ಒರಟಾದ: rough words ಕ್ರೂರವಾದ ಮಾತುಗಳು.
  8. ಕರ್ಕಶ; ಗಡುಸಾದ: rough voice ಕರ್ಕಶ ಧ್ವನಿ.
  9. ಉಗ್ರ; ತೀವ್ರ; ಜೋರಾದ: rough remedies ಉಗ್ರ ಪರಿಹಾರಗಳು; ಉಗ್ರಚಿಕಿತ್ಸೆ; ರಣವೈದ್ಯ.
  10. ದಯದಾಕ್ಷಿಣ್ಯವಿಲ್ಲದ; ನಿಷ್ಠುರ: rough handling ದಯದಾಕ್ಷಿಣ್ಯವಿಲ್ಲದ ವ್ಯವಹಾರ ನೀತಿ.
  11. (ವೈನ್‍ ಮೊದಲಾದವು) ತೀಕ್ಷ್ಣ; ಕಟು: rough claret ತೀಕ್ಷ್ಣ ಕ್ಲಾರೆಟ್‍ ಮದ್ಯ.
  12. ಒರಟಾದ; ಒಡ್ಡಾದ; ಅಸಭ್ಯ: rough tongue ಒರಟು ನಾಲಿಗೆ; ಅಸಭ್ಯವಾಗಿ, ಒರಟಾಗಿ ಬಯ್ಯುವ, ಮಾತನಾಡುವ–ಅಭ್ಯಾಸ.
  13. (ಸಮುದ್ರ, ಹವಾ ಮೊದಲಾದವುಗಳ ವಿಷಯದಲ್ಲಿ) ಪ್ರಕ್ಷುಬ್ಧ; ಅಲ್ಲೋಲಕಲ್ಲೋಲವಾದ; ಬಿರುಗಾಳಿಯಿಂದ ಕೂಡಿದ.
  14. ನಯನಾಜೂಕಿಲ್ಲದ; ಒಪ್ಪವಿಲ್ಲದ; ಒರಟೊರಟಾದ: rough kindness ಒರಟು ದಯೆ; ಒರಟಾಗಿ ತೋರಿಸುವ, ನಯನಾಜೂಕಿಲ್ಲದ ದಯೆ.
  15. ಅಪೂರ್ಣ; ಆದ್ಯಾವಸ್ಥೆಯ; ಪ್ರಾರಂಭಾವಸ್ಥೆಯ; ಅಪರಿಷ್ಕೃತ: rough plan ಅಪೂರ್ಣ ಯೋಜನೆ.
  16. ನಿಷ್ಕೃಷ್ಟವಾಗಿರದ; ಸ್ಥೂಲ; ಕರಾರುವಾಕ್ಕಾಗಿರದ; ನಿಖರವಲ್ಲದ; ಸರಿಸುಮಾರಾದ; ಹತ್ತಿರ ಹತ್ತಿರದ: rough estimate ಸ್ಥೂಲ ಅಂದಾಜು.
  17. ನಯಗೊಳಿಸದ; ಮೆರುಗುಕೊಡದ; ಹೊಳಪು ಕೊಟ್ಟಿಲ್ಲದ.
  18. ಸಂಸ್ಕರಿಸಿದ: rough rice ಬತ್ತ; ನೆಲ್ಲು.
  19. ಕರಡು; ಪರಿಷ್ಕರಿಸದ; ತಿದ್ದುಪಾಟು ಮಾಡಿರದ; ಆಖೈರಾಗಿರದ: rough draft ಕರಡು ಲೇಖನ.
  20. ಆರಂಭದ; ಮೊದಮೊದಲಿನ; ಪೂರ್ವಭಾವಿ: rough attempt ಪೂರ್ವಭಾವಿ ಯತ್ನ.
  21. ಅಹಿತವಾದ; ತೊಂದರೆಯ; ಕಷ್ಟದ: had a rough time ಅಹಿತದ, ಕಷ್ಟದ ಕಾಲವನ್ನನುಭವಿಸಿದ.
  22. ಹೀನ; ಕಷ್ಟದ; ದೌರ್ಭಾಗ್ಯದ: had a rough luck ಹೀನ ಅಷ್ಟ ಅನುಭವಿಸಿದ.
  23. ಅನುಕೂಲವಾಗಿಲ್ಲದ; ಸುಖ, ಸೌಲಭ್ಯ ಮೊದಲಾದವು ಇಲ್ಲದಿರುವ: rough lodgings ಸುಖಸೌಲಭ್ಯಗಳಿಲ್ಲದ ವಸತಿಗಳು. a rough welcome ಅಹಿತಕರ ಸ್ವಾಗತ.
  24. (ಲೇಖನ ಸಾಮಗ್ರಿ ಮೊದಲಾದವುಗಳ ವಿಷಯದಲ್ಲಿ) ಕಚ್ಚಾ; ಟಿಪ್ಪಣಿ ಮೊದಲಾದವನ್ನು ಬರೆಯಲು ಬಳಸುವ.
  25. (ಆಡುಮಾತು) ಮೈಸರಿಯಿಲ್ಲದ; ಮುಜುಗರದ; ಇರಸು ಮುರಸಿನ: am feeling rough ಮೈಸರಿಯಿಲ್ಲದಂತಿದೆ.
  26. (ಆಡುಮಾತು) ಖಿನ್ನ; ವಿಷಣ್ಣ; ಮನ ಕುಗ್ಗಿದ, ಮುದುಡಿದ.
ಪದಗುಚ್ಛ
  1. book with rough edges ತರಕಲಂಚಿನ ಹಾಳೆಗಳುಳ್ಳ ಪುಸ್ತಕ.
  2. have a rough time
    1. ಒರಟು ವರ್ತನೆಗೆ ಗುರಿಯಾಗು.
    2. ತೊಂದರೆಗೆ ಒಳಗಾಗಿರು; ಕಷ್ಟದೆಸೆ ಅನುಭವಿಸು.
  3. horse has rough paces ಕುದುರೆ ಸವಾರನನ್ನು ಕುಲಕಾಡಿಸುತ್ತದೆ, ಎತ್ತೆತ್ತಿ ಹಾಕುತ್ತದೆ; ಕುದುರೆಯ ಹೆಜ್ಜೆ ಯಾ ಓಟ ಒರಟಾಗಿದೆ.
  4. is rough of (or rough luck on) (person) ವ್ಯಕ್ತಿಯ ಅಷ್ಟ ಪ್ರತಿಕೂಲವಾಗಿದೆ; ಗ್ರಹಚಾರ ಚೆನ್ನಾಗಿಲ್ಲ; ಸ್ವಲ್ಪ ಹೆಚ್ಚಾಗಿಯೇ ದುರಷ್ಟದ ಪೆಟ್ಟು ಬಿದ್ದಿದೆ.
  5. ride rough shod over (ಮತ್ತೊಬ್ಬರ ಭಾವನೆಗಳನ್ನು ಗಣಿಸದೆ) ಒರಟಾಗಿ ನಡೆದುಕೊ, ವ್ಯವಹರಿಸು; ದರ್ಪದಿಂದ ವರ್ತಿಸು; ದಬ್ಬಾಳಿಕೆ ನಡೆಸು; ಮೆಟ್ಟಿ, ತುಳಿದು ಹಾಕು.
  6. in the rough leaf ಮೊದಲೆಲೆ ಒಡೆದು; ಮೊದಲೆಲೆ ಒಡೆದ ಹಂತದಲ್ಲಿ, ಸ್ಥಿತಿಯಲ್ಲಿ.
  7. the rough edge (or side) of one’s tongue ಕಟು ಮಾತುಗಳು; ನಿಷ್ಠುರ ಮಾತುಗಳು; ಕಠೋರವಾಕ್ಕು.
See also 1rough  3rough  4rough
2rough ರಹ್‍
ಕ್ರಿಯಾವಿಶೇಷಣ

ಒರಟಾಗಿ; ಒರಟೊರಟಾಗಿ; ಒಡ್ಡೊಡ್ಡಾಗಿ: land should be ploughed rough ಜಮೀನನ್ನು ಒರಟಾಗಿ ಉಳಬೇಕು. play rough ಒರಟಾಗಿ ಆಡು.

ಪದಗುಚ್ಛ

sleep rough (ಹಾಸಿಗೆಯ ಮೇಲಲ್ಲದೆ ಬರಿಯ ನೆಲದ ಮೇಲೆ) ಹೊರಗೆ ಮಲಗು.

See also 1rough  2rough  4rough
3rough ರಹ್‍
ನಾಮವಾಚಕ

  1. ಒರಟು ನೆಲ:
    1. ಹಳ್ಳತಿಟ್ಟಿನ ನೆಲ; ಕಾಡುಮೇಡು; ಅಸಮ ಭೂಮಿ: over rough and smooth ಏರುಪೇರಿನ ಹಾಗೂ ಮಟ್ಟವಾಗಿರುವ ನೆಲದ ಮೇಲೆ.
    2. (ಗಾಲ್‍ ಆಟ) ಆಟದ ಪ್ರದೇಶದ ಅಂಚಿನಲ್ಲಿ ಬೆಳೆಯುವ ಹುಲ್ಲು, ಕಳೆ ಮೊದಲಾದವನ್ನು ಸಮರಿಹಾಕದ ಒರಟು ನೆಲ.
  2. ಲಾಳದ ಮೊಳೆ; ಕುದುರೆಯನ್ನು ಪಳಗಿಸುವಾಗ ಅದು ಜಾರದಂತೆ ಅದರ ಲಾಳದ ಹಿಮ್ಮಡಿಯಲ್ಲಿ ಹೊಡೆದ ದೊಡ್ಡ ಮೊಳೆ.
  3. (ಬದುಕಿನ) ಕಷ್ಟಭಾಗ; ಕಷ್ಟದೆಸೆ; ಕಷ್ಟ; ತೊಂದರೆ: take the rough with the smooth ಸುಖದ ಜೊತೆಗೆ ಕಷ್ಟವನ್ನೂ ಸ್ವೀಕರಿಸು.
  4. ಪುಂಡ; ಒರಟ; ಗಲಭೆಕೋರ; ತಂಟೆಕೋರ; ಶಾಂತಿಭಂಗದ ದೊಂಬಿಗೆ ಸಿದ್ಧನಾಗಿರುವ ಕೀಳುವರ್ಗಕ್ಕೆ ಸೇರಿದವನು (ಹುಡುಗ ಯಾ ಬೆಳೆದವನು): a bunch of roughs ಪುಂಡರ ಒಂದು ತಂಡ.
  5. ಒರಟು ಸ್ಥಿತಿ; ಪ್ರಾತ ಯಾ ಅಪರಿಷ್ಕೃತ ಸ್ಥಿತಿ, ರೂಪ: shape it from the rough ಒರಟು ಸ್ಥಿತಿ ಹೋಗುವಂತೆ ಅದನ್ನು ರೂಪಿಸು; ಒರಟು ಸ್ಥಿತಿಯಲ್ಲಿರುವ ಅದಕ್ಕೆ ಆಕಾರಕೊಡು.
  6. ಸಾಮಾನ್ಯ ರೀತಿ; ಸಾಧಾರಣ ರೀತಿ: is true in the rough ಸಾಮಾನ್ಯ ರೀತಿಯಲ್ಲಿ ಅದು ನಿಜ.
ಪದಗುಚ್ಛ

the roughs and the smooths ಕಷ್ಟಸುಖಗಳು.

See also 1rough  2rough  3rough
4rough ರಹ್‍
ಸಕರ್ಮಕ ಕ್ರಿಯಾಪದ
  1. (ಗರಿ, ಕೂದಲು ಮೊದಲಾದವನ್ನು ಎಳೆಗೆ ಎದುರಾಗಿ ಉಜ್ಜಿ) ಕೆದರು; ಕೆದರಿಸು; ಬಿರುಸುಮಾಡು.
  2. (ಕುದುರೆಯನ್ನು) ಪಳಗಿಸು; ಒಗ್ಗಿಸು.
  3. (ಕುದುರೆ ಯಾ ಅದರ ಲಾಳ ಜಾರದಂತೆ) ಲಾಳದ ಹಿಮ್ಮಡಿಗೆ ದೊಡ್ಡ ಮೊಳೆ ಹೊಡೆ.
  4. ಸ್ಥೂಲವಾಗಿ–ರೂಪಿಸು, ರಚಿಸು ಯಾ ಯೋಜಿಸು; ಸ್ಥೂಲರೂಪ ಕೊಡು.
  5. ಸ್ಥೂಲ ಚಿತ್ರ ಬರೆ; ಸ್ಥೂಲವಾಗಿ ರೂಪರೇಖೆ ಚಿತ್ರಿಸು.
  6. (ಪಿಯಾನೋ ವಾದ್ಯವನ್ನು) ಸ್ಥೂಲವಾಗಿ, ಸರಿಸುಮಾರಾಗಿ ಶ್ರುತಿಮಾಡು.
  7. (ಮಸೂರ, ರತ್ನ ಮೊದಲಾದವುಗಳಿಗೆ) ಸ್ಥೂಲರೂಪ ಕೊಡು; ಮೊಟ್ಟಮೊದಲ ರೂಪಕೊಡು.
ಪದಗುಚ್ಛ
  1. rough it
    1. ಕನಿಷ್ಠ ಜೀವನ ಸೌಕರ್ಯಗಳಿಲ್ಲದಿರು; ಅವಶ್ಯ ಜೀವನಾನುಕೂಲಗಳಿಲ್ಲದಿರು.
    2. (ಜೀವನದ ಸಾಮಾನ್ಯ ಸೌಕರ್ಯಗಳಿಲ್ಲದೆ) ಕಷ್ಟಕ್ಕೆ ಒಗ್ಗಿಸಿಕೊ; ಕಷ್ಟಕ್ಕೆ ಗಟ್ಟಿಯಾಗು; ಕಷ್ಟದಲ್ಲಿ ನುಗ್ಗಿನುರಿ.
  2. rough one up the wrong way ಒಬ್ಬನನ್ನು ಕೆರಳಿಸು, ರೇಗಿಸು.
  3. rough up (ಅಶಿಷ್ಟ) (ವ್ಯಕ್ತಿಯ ಮೇಲೆ) ತೀವ್ರವಾದ ಹಲ್ಲೆ ಮಾಡು; ಒರಟಾಗಿ ಕೈಮಾಡು.