See also 1rough  2rough  4rough
3rough ರಹ್‍
ನಾಮವಾಚಕ

  1. ಒರಟು ನೆಲ:
    1. ಹಳ್ಳತಿಟ್ಟಿನ ನೆಲ; ಕಾಡುಮೇಡು; ಅಸಮ ಭೂಮಿ: over rough and smooth ಏರುಪೇರಿನ ಹಾಗೂ ಮಟ್ಟವಾಗಿರುವ ನೆಲದ ಮೇಲೆ.
    2. (ಗಾಲ್‍ ಆಟ) ಆಟದ ಪ್ರದೇಶದ ಅಂಚಿನಲ್ಲಿ ಬೆಳೆಯುವ ಹುಲ್ಲು, ಕಳೆ ಮೊದಲಾದವನ್ನು ಸಮರಿಹಾಕದ ಒರಟು ನೆಲ.
  2. ಲಾಳದ ಮೊಳೆ; ಕುದುರೆಯನ್ನು ಪಳಗಿಸುವಾಗ ಅದು ಜಾರದಂತೆ ಅದರ ಲಾಳದ ಹಿಮ್ಮಡಿಯಲ್ಲಿ ಹೊಡೆದ ದೊಡ್ಡ ಮೊಳೆ.
  3. (ಬದುಕಿನ) ಕಷ್ಟಭಾಗ; ಕಷ್ಟದೆಸೆ; ಕಷ್ಟ; ತೊಂದರೆ: take the rough with the smooth ಸುಖದ ಜೊತೆಗೆ ಕಷ್ಟವನ್ನೂ ಸ್ವೀಕರಿಸು.
  4. ಪುಂಡ; ಒರಟ; ಗಲಭೆಕೋರ; ತಂಟೆಕೋರ; ಶಾಂತಿಭಂಗದ ದೊಂಬಿಗೆ ಸಿದ್ಧನಾಗಿರುವ ಕೀಳುವರ್ಗಕ್ಕೆ ಸೇರಿದವನು (ಹುಡುಗ ಯಾ ಬೆಳೆದವನು): a bunch of roughs ಪುಂಡರ ಒಂದು ತಂಡ.
  5. ಒರಟು ಸ್ಥಿತಿ; ಪ್ರಾತ ಯಾ ಅಪರಿಷ್ಕೃತ ಸ್ಥಿತಿ, ರೂಪ: shape it from the rough ಒರಟು ಸ್ಥಿತಿ ಹೋಗುವಂತೆ ಅದನ್ನು ರೂಪಿಸು; ಒರಟು ಸ್ಥಿತಿಯಲ್ಲಿರುವ ಅದಕ್ಕೆ ಆಕಾರಕೊಡು.
  6. ಸಾಮಾನ್ಯ ರೀತಿ; ಸಾಧಾರಣ ರೀತಿ: is true in the rough ಸಾಮಾನ್ಯ ರೀತಿಯಲ್ಲಿ ಅದು ನಿಜ.
ಪದಗುಚ್ಛ

the roughs and the smooths ಕಷ್ಟಸುಖಗಳು.