See also 2rough  3rough  4rough
1rough ರಹ್‍
ಗುಣವಾಚಕ
  1. ಒರಟಾದ; ತರಕಲಾದ; ದರಕಾದ; ದೊರಗಾದ.
  2. (ನೆಲ, ದೇಶ ಮೊದಲಾದವು) ಉಬ್ಬುತಗ್ಗುಗಳುಳ್ಳ; ಕಾಡುಮೇಡಿನ; ಏರುಪೇರುಗಳುಳ್ಳ; ಹಳ್ಳತಿಟ್ಟಾದ; ಸಮವಾದ ಮೇಲ್ಮೈಯಿಲ್ಲದ.
  3. ಕೂದಲುತುಂಬಿದ; ಒರಟುಕೂದಲಿನ; ಬಿರುಸುಕೂದಲುಳ್ಳ: rough skin ಬಿರುಗೂದಲ ಚರ್ಮ.
  4. (ಬಟ್ಟೆಯ ವಿಷಯದಲ್ಲಿ) ನಯವಿಲ್ಲದ; ಒರಟು; ದುವಲ್ಲದ.
  5. ಗೊಂದಲದ; ಒರಟಾಟದ; ದೊಂಬಿಯ; ಪುಂಡಾಟದ: rough element of the population ಪುಂಡುಜನ; ಒರಟುಜನ.
  6. ಕಠಿಣ; ಕಟು; ತೀಕ್ಷ್ಣ: rough temper ಕಟುವಾದ ಮನೋಧರ್ಮ.
  7. (ಭಾಷೆ ಮೊದಲಾದವು) ಕ್ರೂರ; ಉಗ್ರ; ಪರುಷ; ಬಿರುಸಾದ; ಒರಟಾದ: rough words ಕ್ರೂರವಾದ ಮಾತುಗಳು.
  8. ಕರ್ಕಶ; ಗಡುಸಾದ: rough voice ಕರ್ಕಶ ಧ್ವನಿ.
  9. ಉಗ್ರ; ತೀವ್ರ; ಜೋರಾದ: rough remedies ಉಗ್ರ ಪರಿಹಾರಗಳು; ಉಗ್ರಚಿಕಿತ್ಸೆ; ರಣವೈದ್ಯ.
  10. ದಯದಾಕ್ಷಿಣ್ಯವಿಲ್ಲದ; ನಿಷ್ಠುರ: rough handling ದಯದಾಕ್ಷಿಣ್ಯವಿಲ್ಲದ ವ್ಯವಹಾರ ನೀತಿ.
  11. (ವೈನ್‍ ಮೊದಲಾದವು) ತೀಕ್ಷ್ಣ; ಕಟು: rough claret ತೀಕ್ಷ್ಣ ಕ್ಲಾರೆಟ್‍ ಮದ್ಯ.
  12. ಒರಟಾದ; ಒಡ್ಡಾದ; ಅಸಭ್ಯ: rough tongue ಒರಟು ನಾಲಿಗೆ; ಅಸಭ್ಯವಾಗಿ, ಒರಟಾಗಿ ಬಯ್ಯುವ, ಮಾತನಾಡುವ–ಅಭ್ಯಾಸ.
  13. (ಸಮುದ್ರ, ಹವಾ ಮೊದಲಾದವುಗಳ ವಿಷಯದಲ್ಲಿ) ಪ್ರಕ್ಷುಬ್ಧ; ಅಲ್ಲೋಲಕಲ್ಲೋಲವಾದ; ಬಿರುಗಾಳಿಯಿಂದ ಕೂಡಿದ.
  14. ನಯನಾಜೂಕಿಲ್ಲದ; ಒಪ್ಪವಿಲ್ಲದ; ಒರಟೊರಟಾದ: rough kindness ಒರಟು ದಯೆ; ಒರಟಾಗಿ ತೋರಿಸುವ, ನಯನಾಜೂಕಿಲ್ಲದ ದಯೆ.
  15. ಅಪೂರ್ಣ; ಆದ್ಯಾವಸ್ಥೆಯ; ಪ್ರಾರಂಭಾವಸ್ಥೆಯ; ಅಪರಿಷ್ಕೃತ: rough plan ಅಪೂರ್ಣ ಯೋಜನೆ.
  16. ನಿಷ್ಕೃಷ್ಟವಾಗಿರದ; ಸ್ಥೂಲ; ಕರಾರುವಾಕ್ಕಾಗಿರದ; ನಿಖರವಲ್ಲದ; ಸರಿಸುಮಾರಾದ; ಹತ್ತಿರ ಹತ್ತಿರದ: rough estimate ಸ್ಥೂಲ ಅಂದಾಜು.
  17. ನಯಗೊಳಿಸದ; ಮೆರುಗುಕೊಡದ; ಹೊಳಪು ಕೊಟ್ಟಿಲ್ಲದ.
  18. ಸಂಸ್ಕರಿಸಿದ: rough rice ಬತ್ತ; ನೆಲ್ಲು.
  19. ಕರಡು; ಪರಿಷ್ಕರಿಸದ; ತಿದ್ದುಪಾಟು ಮಾಡಿರದ; ಆಖೈರಾಗಿರದ: rough draft ಕರಡು ಲೇಖನ.
  20. ಆರಂಭದ; ಮೊದಮೊದಲಿನ; ಪೂರ್ವಭಾವಿ: rough attempt ಪೂರ್ವಭಾವಿ ಯತ್ನ.
  21. ಅಹಿತವಾದ; ತೊಂದರೆಯ; ಕಷ್ಟದ: had a rough time ಅಹಿತದ, ಕಷ್ಟದ ಕಾಲವನ್ನನುಭವಿಸಿದ.
  22. ಹೀನ; ಕಷ್ಟದ; ದೌರ್ಭಾಗ್ಯದ: had a rough luck ಹೀನ ಅಷ್ಟ ಅನುಭವಿಸಿದ.
  23. ಅನುಕೂಲವಾಗಿಲ್ಲದ; ಸುಖ, ಸೌಲಭ್ಯ ಮೊದಲಾದವು ಇಲ್ಲದಿರುವ: rough lodgings ಸುಖಸೌಲಭ್ಯಗಳಿಲ್ಲದ ವಸತಿಗಳು. a rough welcome ಅಹಿತಕರ ಸ್ವಾಗತ.
  24. (ಲೇಖನ ಸಾಮಗ್ರಿ ಮೊದಲಾದವುಗಳ ವಿಷಯದಲ್ಲಿ) ಕಚ್ಚಾ; ಟಿಪ್ಪಣಿ ಮೊದಲಾದವನ್ನು ಬರೆಯಲು ಬಳಸುವ.
  25. (ಆಡುಮಾತು) ಮೈಸರಿಯಿಲ್ಲದ; ಮುಜುಗರದ; ಇರಸು ಮುರಸಿನ: am feeling rough ಮೈಸರಿಯಿಲ್ಲದಂತಿದೆ.
  26. (ಆಡುಮಾತು) ಖಿನ್ನ; ವಿಷಣ್ಣ; ಮನ ಕುಗ್ಗಿದ, ಮುದುಡಿದ.
ಪದಗುಚ್ಛ
  1. book with rough edges ತರಕಲಂಚಿನ ಹಾಳೆಗಳುಳ್ಳ ಪುಸ್ತಕ.
  2. have a rough time
    1. ಒರಟು ವರ್ತನೆಗೆ ಗುರಿಯಾಗು.
    2. ತೊಂದರೆಗೆ ಒಳಗಾಗಿರು; ಕಷ್ಟದೆಸೆ ಅನುಭವಿಸು.
  3. horse has rough paces ಕುದುರೆ ಸವಾರನನ್ನು ಕುಲಕಾಡಿಸುತ್ತದೆ, ಎತ್ತೆತ್ತಿ ಹಾಕುತ್ತದೆ; ಕುದುರೆಯ ಹೆಜ್ಜೆ ಯಾ ಓಟ ಒರಟಾಗಿದೆ.
  4. is rough of (or rough luck on) (person) ವ್ಯಕ್ತಿಯ ಅಷ್ಟ ಪ್ರತಿಕೂಲವಾಗಿದೆ; ಗ್ರಹಚಾರ ಚೆನ್ನಾಗಿಲ್ಲ; ಸ್ವಲ್ಪ ಹೆಚ್ಚಾಗಿಯೇ ದುರಷ್ಟದ ಪೆಟ್ಟು ಬಿದ್ದಿದೆ.
  5. ride rough shod over (ಮತ್ತೊಬ್ಬರ ಭಾವನೆಗಳನ್ನು ಗಣಿಸದೆ) ಒರಟಾಗಿ ನಡೆದುಕೊ, ವ್ಯವಹರಿಸು; ದರ್ಪದಿಂದ ವರ್ತಿಸು; ದಬ್ಬಾಳಿಕೆ ನಡೆಸು; ಮೆಟ್ಟಿ, ತುಳಿದು ಹಾಕು.
  6. in the rough leaf ಮೊದಲೆಲೆ ಒಡೆದು; ಮೊದಲೆಲೆ ಒಡೆದ ಹಂತದಲ್ಲಿ, ಸ್ಥಿತಿಯಲ್ಲಿ.
  7. the rough edge (or side) of one’s tongue ಕಟು ಮಾತುಗಳು; ನಿಷ್ಠುರ ಮಾತುಗಳು; ಕಠೋರವಾಕ್ಕು.