ಈರುಳ್ಳಿಗಳ, ಅಂಡಾಣುಗಳ ಯಾ ಮುತ್ತುಗಳ–ಸರ, ಮಾಲೆ: rope of onions ಈರುಳ್ಳಿಗಳ ಸರ. rope of pearls ಮುತ್ತುಗಳ ಮಾಲೆ.
ಪದಗುಚ್ಛ
give a person enough rope to hang himself = ಪದಗುಚ್ಛ\((2)\).
give a person plenty of rope (to hang himself) (ಮುಖ್ಯವಾಗಿ ಅವನೇ ಸಿಕ್ಕಿಕೊಳ್ಳುವಂತೆ, ಕೇಡು ತಂದುಕೊಳ್ಳುವಂತೆ, ಪರಾಭವ ಹೊಂದುವಂತೆ) ಸ್ವೇಚ್ಛೆಯಾಗಿ ಬಿಡು, ತಡೆಯಬೇಡ; ಅವನ ಅವಿವೇಕಕ್ಕೆ, ಕೇಡಿಗೆ ಅವನನ್ನು ಬಿಟ್ಟುಬಿಡು; ತನ್ನ ಕೊರಳಿಗೆ ತಾನೇ ಉರಲು ಹಾಕಿಕೊಳ್ಳಲು ಬಿಡು.
know the ropes ಯಾವುದಾದರೂ ಒಂದು ಕಾರ್ಯಕ್ಷೇತ್ರದ ಪರಿಸ್ಥಿತಿಯನ್ನು, ವಿದ್ಯಮಾನಗಳನ್ನು ತಿಳಿದಿರು; (ಕೈಕೊಂಡ ಕೆಲಸದ ಯಾ ವಿಷಯದ) ವಿವರಗಳ ಯಾ ವಿದ್ಯಮಾನಗಳ ಪೂರ್ಣ ಪರಿಚಯ ಹೊಂದಿರು; ಒಂದು ಕೆಲಸ ಮಾಡುವ ರೀತಿಯನ್ನು ತಿಳಿದಿರು.
learn the ropes(ಕಾರ್ಯಕ್ಷೇತ್ರದ, ಕೆಲಸದ ಯಾ ವಿಷಯದ ಬಗ್ಗೆ) ಪೂರ್ಣ ಪರಿಚಯ ಪಡೆ; ಮಾಹಿತಿ ಸಂಪಾದಿಸು; ವಿವರಗಳನ್ನು ತಿಳಿದುಕೊ.
on the rope (ಬೆಟ್ಟ ಹತ್ತುವವರ ವಿಷಯದಲ್ಲಿ) ಪ್ರತಿಯೊಬ್ಬರೂ ಒಂದೇ ಹಗ್ಗದಿಂದ ಪರಸ್ಪರ ಬಿಗಿದುಕೊಂಡು.
on the ropes
(ಬಾಕ್ಸಿಂಗ್) ಹಗ್ಗಕ್ಕೊರಗಿದ; ಎದುರಾಳಿಯ ಹೊಡೆತದಿಂದ ಕಟಕಟೆಯ ಹಗ್ಗದ ಮೇಲೆ ತಳ್ಳಲ್ಪಟ್ಟ.
ಸೋಲಿನ ಅಂಚಿನಲ್ಲಿರುವ.
put one up to the ropes ಒಂದು ಕೆಲಸ ಹೇಗೆ ಮಾಡಬೇಕೆಂಬುದನ್ನು (ಒಬ್ಬನಿಗೆ) ಹೇಳಿಕೊಡು; (ಯಾವುದಾದರೂ ಕೆಲಸದ) ವಿವರಗಳ ಯಾ (ಕಾರ್ಯಕ್ಷೇತ್ರದ) ವಿದ್ಯಮಾನಗಳ ಪರಿಚಯವನ್ನು ಪೂರ್ತಿಯಾಗಿ ಮಾಡಿಸು.