See also 1rope
2rope ರೋಪ್‍
ಸಕರ್ಮಕ ಕ್ರಿಯಾಪದ
  1. ಹಗ್ಗದಿಂದ–ಕಟ್ಟು, ಬಿಗಿ, ಬಂಧಿಸು, ಭದ್ರಪಡಿಸು, ಹಿಡಿ.
  2. (ಬೆಟ್ಟ ಹತ್ತುವುದರಲ್ಲಿ, ಹತ್ತುವವರನ್ನು) ಒಂದೇ ಹಗ್ಗದಿಂದ ಪರಸ್ಪರ ಕಟ್ಟು, ಕಟ್ಟಿಕೊ; (ಒಬ್ಬನನ್ನು ಮತ್ತೊಬ್ಬನೊಡನೆ) ಹಗ್ಗದಿಂದ ಸೇರಿಸು.
  3. (ಎಳೆಯುವುದು ಮೊದಲಾದವಕ್ಕೆ) ಹಗ್ಗಗಳನ್ನು ಉಪಯೋಗಿಸು; ಹಗ್ಗಹಾಕು; ಹೊರಜಿ ಉಪಯೋಗಿಸು, ಕಟ್ಟು.
  4. (ಸ್ಥಳವನ್ನು) ಹಗ್ಗದಿಂದ ಸುತ್ತುಗಟ್ಟು; (ಜಾಗಕ್ಕೆ) ಸುತ್ತಲೂ ಹಗ್ಗಹಾಕು, ಕಟ್ಟು.
    1. (ಕುದುರೆಜೂಜಿನಲ್ಲಿ) ಕುದುರೆ ಗೆಲ್ಲುವುದನ್ನು ತಪ್ಪಿಸಲು ಅದನ್ನು ತಡೆ, ಹಿಂದಕ್ಕೆ ಎಳೆ.
    2. (ವ್ಯಾಯಾಮ ಮಲ್ಲನ, ಕ್ರೀಡಾಸ್ಪರ್ಧಿಯ ವಿಷಯದಲ್ಲಿ) (ಸೋಲಬೇಕೆಂಬ ಉದ್ದೇಶದಿಂದ) ಪೂರ್ಣ ಶಕ್ತಿ ಪ್ರಯೋಗಿಸದಿರು.
ಅಕರ್ಮಕ ಕ್ರಿಯಾಪದ
  1. (ದ್ರವ) ಲೋಳೆಗಟ್ಟು; ಬಂಕೆಯಾಗಿ ನೂಲಿನಂತೆ ಬರು; ಅಂಟಂಟಾಗು; ಜಿಗುಟಾಗು.
  2. ಹಗ್ಗ ಬಳಸಿ, ಹಿಡಿದು–ಇಳಿ ಯಾ ಏರು.
ಪದಗುಚ್ಛ
  1. rope in ಭಾಗವಹಿಸುವಂತೆ ಒತ್ತಾಯಿಸು ಯಾ ಮನವೊಲಿಸು.
  2. rope into (ಯಾವುದರಲ್ಲೇ) ಭಾಗವಹಿಸಲು ಒತ್ತಾಯಿಸು: was roped into doing the washing-up ಎಂಜಲು ತಟ್ಟೆ, ಪಾತ್ರೆಗಳನ್ನು ತೊಳೆಯಲು ಒತ್ತಾಯಿಸಲಾಯಿತು.