See also 2rope
1rope ರೋಪ್‍
ನಾಮವಾಚಕ
    1. (ನೂಲು, ಸಣಬು, ತೊಗಲು, ನೈಲಾನ್‍, ತಂತಿ ಮೊದಲಾದವುಗಳ ಎಳೆಗಳನ್ನು ಹೊಸೆದು ಮಾಡಿದ) ಹಗ್ಗ; ನೇಣು; ಮಿಣಿ; ರಜ್ಜು; ಪಾಶ.
    2. ಹಗ್ಗದ ತುಂಡು.
    3. (ಅಮೆರಿಕನ್‍ ಪ್ರಯೋಗ) = $^1$lasso.
  1. ಈರುಳ್ಳಿಗಳ, ಅಂಡಾಣುಗಳ ಯಾ ಮುತ್ತುಗಳ–ಸರ, ಮಾಲೆ: rope of onions ಈರುಳ್ಳಿಗಳ ಸರ. rope of pearls ಮುತ್ತುಗಳ ಮಾಲೆ.
ಪದಗುಚ್ಛ
  1. give a person enough rope to hang himself = ಪದಗುಚ್ಛ\((2)\).
  2. give a person plenty of rope (to hang himself) (ಮುಖ್ಯವಾಗಿ ಅವನೇ ಸಿಕ್ಕಿಕೊಳ್ಳುವಂತೆ, ಕೇಡು ತಂದುಕೊಳ್ಳುವಂತೆ, ಪರಾಭವ ಹೊಂದುವಂತೆ) ಸ್ವೇಚ್ಛೆಯಾಗಿ ಬಿಡು, ತಡೆಯಬೇಡ; ಅವನ ಅವಿವೇಕಕ್ಕೆ, ಕೇಡಿಗೆ ಅವನನ್ನು ಬಿಟ್ಟುಬಿಡು; ತನ್ನ ಕೊರಳಿಗೆ ತಾನೇ ಉರಲು ಹಾಕಿಕೊಳ್ಳಲು ಬಿಡು.
  3. know the ropes ಯಾವುದಾದರೂ ಒಂದು ಕಾರ್ಯಕ್ಷೇತ್ರದ ಪರಿಸ್ಥಿತಿಯನ್ನು, ವಿದ್ಯಮಾನಗಳನ್ನು ತಿಳಿದಿರು; (ಕೈಕೊಂಡ ಕೆಲಸದ ಯಾ ವಿಷಯದ) ವಿವರಗಳ ಯಾ ವಿದ್ಯಮಾನಗಳ ಪೂರ್ಣ ಪರಿಚಯ ಹೊಂದಿರು; ಒಂದು ಕೆಲಸ ಮಾಡುವ ರೀತಿಯನ್ನು ತಿಳಿದಿರು.
  4. learn the ropes(ಕಾರ್ಯಕ್ಷೇತ್ರದ, ಕೆಲಸದ ಯಾ ವಿಷಯದ ಬಗ್ಗೆ) ಪೂರ್ಣ ಪರಿಚಯ ಪಡೆ; ಮಾಹಿತಿ ಸಂಪಾದಿಸು; ವಿವರಗಳನ್ನು ತಿಳಿದುಕೊ.
  5. on the $^1$high ropes.
  6. on the rope (ಬೆಟ್ಟ ಹತ್ತುವವರ ವಿಷಯದಲ್ಲಿ) ಪ್ರತಿಯೊಬ್ಬರೂ ಒಂದೇ ಹಗ್ಗದಿಂದ ಪರಸ್ಪರ ಬಿಗಿದುಕೊಂಡು.
  7. on the ropes
    1. (ಬಾಕ್ಸಿಂಗ್‍) ಹಗ್ಗಕ್ಕೊರಗಿದ; ಎದುರಾಳಿಯ ಹೊಡೆತದಿಂದ ಕಟಕಟೆಯ ಹಗ್ಗದ ಮೇಲೆ ತಳ್ಳಲ್ಪಟ್ಟ.
    2. ಸೋಲಿನ ಅಂಚಿನಲ್ಲಿರುವ.
  8. put one up to the ropes ಒಂದು ಕೆಲಸ ಹೇಗೆ ಮಾಡಬೇಕೆಂಬುದನ್ನು (ಒಬ್ಬನಿಗೆ) ಹೇಳಿಕೊಡು; (ಯಾವುದಾದರೂ ಕೆಲಸದ) ವಿವರಗಳ ಯಾ (ಕಾರ್ಯಕ್ಷೇತ್ರದ) ವಿದ್ಯಮಾನಗಳ ಪರಿಚಯವನ್ನು ಪೂರ್ತಿಯಾಗಿ ಮಾಡಿಸು.
  9. rope of sand ಹುಸಿ ನೆಚ್ಚಿಕೆ; ಭ್ರಾಂತಿ ಭರವಸೆ; ಹುಸಿ ಭದ್ರತೆ; ನೆಚ್ಚಿಕೆಗೆ ಅನರ್ಹವಾದ ರಕ್ಷಣೆ, ಭರವಸೆ.
  10. show a person the ropes = ಪದಗುಚ್ಛ\((8)\).
  11. the rope
    1. ನೇಣು; ಉರಲು ಹಗ್ಗ; ಗಲ್ಲು ಹಗ್ಗ.
    2. ನೇಣು ಹಾಕಿ ಸಾಯಿಸುವುದು; ಗಲ್ಲು ಶಿಕ್ಷೆ.
  12. the ropes
    1. (ಮುಷ್ಟಿಕಾಳಗದ ಯಾ ಇತರ ಸ್ಪರ್ಧೆಯ) ಕಟಾಂಜನದ, ಅಖಾಡದ ಸುತ್ತಣ ಬಿಗಿ ಹಗ್ಗ.
    2. ಯಾವುದೇ ಕಾರ್ಯಕ್ಷೇತ್ರದ–ಪರಿಸ್ಥಿತಿಗಳು, ವಿದ್ಯಮಾನಗಳು.
    3. ಯಾವುದೇ ಕಾರ್ಯದ ರೀತಿನೀತಿಗಳು, ವಿವರಗಳು.