See also 2root  3root
1root ರೂಟ್‍
ನಾಮವಾಚಕ
  1. Figure: roots
    1. ಬೇರು; ಮೂಲ.
    2. (ಬಹುವಚನದಲ್ಲಿ) ಬೇರುಗಳು; ಕವಲು ಬೇರು.
    3. ಎಪಿಹೈಟ್‍ ಸಸ್ಯದ ಬೇರು.
    4. ಐವಿ ಎಂಬ ಹಬ್ಬುಬಳ್ಳಿಯನ್ನು ಅದರ ಆಸರೆಗೆ ಬಂಧಿಸಿರುವ ಭಾಗ, ಬೇರು
    5. ಕಂದಮೂಲ; ಗೆಡ್ಡೆ (ಗೆಣಸು); ತಿನ್ನಬಹುದಾದ ಬೇರು (ಮೂಲಂಗಿ, ಟರ್ನಿಪ್‍ ಗೆಡ್ಡೆ ಮೊದಲಾದವು).
    6. ನಾಟಿಹಾಕಲು ಬರುವ ಬೇರುಳ್ಳ ಸಣ್ಣ ಸಸ್ಯ.
  2. (ಬೈಬ್‍ಲ್‍) ಶಾಖೆ; ವಂಶಜ; ಸಂತತಿಯವನು: there shall be a root of Jesse ಜೆಸೀ ವಂಶದ ಶಾಖೆ ಬೆಳೆಯುತ್ತದೆ.
  3. (ಅವಯವ, ಅಂಗ, ಉದಾಹರಣೆಗೆ ಕೂದಲು, ಹಲ್ಲು, ಉಗುರು ಮೊದಲಾದವುಗಳ) ಬುಡ: root of tongue ನಾಲಿಗೆಯ ಬುಡ.
  4. (ಹೆಚ್ಚು ಪ್ರಧಾನವಾದ ಯಾ ದೊಡ್ಡದಾದ ಪೂರ್ಣ ವಸ್ತುವಿನೊಂದಿಗೆ) ಕೂಡಿಕೊಂಡಿರುವ, ಅಂಟಿಕೊಂಡಿರುವ ಭಾಗ: root of a gem ರತ್ನ (ಮುಖ್ಯವಾಗಿ ಪಚ್ಚೆಮಣಿ) ಕಲ್ಲಿಗೆ ಅಂಟಿದ್ದ ಮಣ್ಣುಭಾಗ.
  5. ಮೂಲ; ಮೂಲಕಾರಣ: love of money is the root of all evil ಹಣದ ಪ್ರೇಮವೇ ಎಲ್ಲ ಕೆಡುಕಿಗೂ ಮೂಲ.
  6. ಆಧಾರ; ಬುಡ; ಅವಲಂಬ; ನೆಲೆ; ಕಾರಣ: has its root(s) in selfishness ಸ್ವಾರ್ಥದಲ್ಲಿ ನೆಲೆಗೊಂಡಿದೆ; ಅದರ ಕಾರಣ ಸ್ವಾರ್ಥದಲ್ಲಿದೆ.
  7. ಅಡಿ; ಬುಡ; ತಳ; ಸಾರಭೂತ ಪದಾರ್ಥ ಯಾ ಸಹಜ ಗುಣ, ಲಕ್ಷಣ: get at the roots of things ಬುಡಮಟ್ಟ ಹೋಗು, ಶೋಧಿಸು.
  8. (ಬಹುವಚನದಲ್ಲಿ) (ಪರ್ವತ, ಬೆಟ್ಟ ಮೊದಲಾದವುಗಳ) ಬುಡ; ಮೂಲ
  9. (ವಿಶೇಷಣವಾಗಿ ಪ್ರಯೋಗ) (ಭಾವನೆ ಮೊದಲಾದವುಗಳ ವಿಷಯದಲ್ಲಿ) ಮೂಲ; ಕಾರಣ; ಜನ್ಮಸ್ಥಾನ.
  10. ಒಂದು ಸ್ಥಳ, ಸಮುದಾಯ ಮೊದಲಾದವುಗಳ ಬಗ್ಗೆ ಒಬ್ಬನಿಗೆ ಇರುವ ದೀರ್ಘಕಾಲೀನವಾದ ಭಾವುಕ ಆಸಕ್ತಿ, ಅನುರಾಗ, ಮಮತೆಗಳಿಗೆ ಇರುವ ಮೂಲಗಳು ಯಾ ಕಾರಣಗಳು.
  11. (ಭಾಷಾಶಾಸ್ತ್ರ) ಧಾತು ಯಾ ಪ್ರಕೃತಿ; ಭಾಷೆಯ ಶಬ್ದಗಳಲ್ಲಿ ಪ್ರತ್ಯಯಗಳನ್ನೆಲ್ಲ ತೆಗೆದಮೇಲೆ ಕಡೆಯಲ್ಲಿ ವಿಭಜನೀಯವಾಗದೆ ನಿಲ್ಲುವ ಮೂಲಾಂಶ. ಉದಾಹರಣೆಗೆ danced, dancer ಎಂಬ ಪದಗಳಲ್ಲಿ ಧಾತು ‘dance’.
  12. (ಸಂಗೀತ) ಸ್ವರಮೇಳದ ಮೂಲಸ್ವರ, ಮೂಲ ನಾದ.
  13. (ಗಣಿತ) ಮೂಲ:
    1. ಸಂಖ್ಯೆ ಯಾ ಮೊತ್ತವೊಂದನ್ನು ಅದರಿಂದಲೇ ನಿರ್ದಿಷ್ಟ ಸಲ ಗುಣಿಸಿದರೆ ಗೊತ್ತಾದ ಸಂಖ್ಯೆ ಯಾ ಮೊತ್ತವನ್ನು ನೀಡುವಂಥ ಸಂಖ್ಯೆ ಯಾ ಮೊತ್ತ: the cube root of eight is two ಎಂಟರ ಘನಮೂಲ ಎರಡು.
    2. ವರ್ಗಮೂಲ.
    3. ಅಜ್ಞಾತ ಮೊತ್ತವೊಂದನ್ನು ಒಳಗೊಂಡಿರುವ ಸಮೀಕರಣವನ್ನು ಸಿಂಧುವಾಗಿ ಮಾಡಬಲ್ಲ ಆ ಮೊತ್ತದ ಮೌಲ್ಯ.
  14. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) (ಅಶಿಷ್ಟ)
    1. ಸಂಭೋಗ; ಮೈಥುನ.
    2. ಮೈಥುನದಲ್ಲಿ ಜೊತೆಗಾರ್ತಿ.
ಪದಗುಚ್ಛ
  1. a root of bitterness ಕಹಿಯ ಮೂಲ.
  2. has the root of the matter in him (ಬೈಬಲ್‍ ಪ್ರಯೋಗ) ಅವನು ಮೂಲತಃ ಸರಿಯಾಗಿದ್ದಾನೆ (Job XIX -28).
  3. lay axe to root of(tree or institution) (ಮರದ ಯಾ ಸಂಸ್ಥೆಯ) ಬುಡಕ್ಕೆ ಕೊಡಲಿ ಹಾಕು; ನಾಶಮಾಡಲು ಯತ್ನಿಸು.
  4. pull up by the roots
    1. ಬೇರು ಸಮೇತ ಕಿತ್ತುಹಾಕು.
    2. (ರೂಪಕವಾಗಿ) ನಿರ್ಮೂಲಮಾಡು; ನಾಶ ಮಾಡು.
  5. put down roots = ಪದಗುಚ್ಛ\((7)\).
  6. root and branch
    1. ತುದಿಬುಡವೆಲ್ಲ; ಬುಡಮಟ್ಟ; ಪೂರ್ತಿಯಾಗಿ; ಸಂಪೂರ್ಣವಾಗಿ.
    2. ಆಮೂಲಾಗ್ರ(ವಾಗಿ).
  7. strike (or take) root
    1. ಬೇರು ಬಿಡು; ಭೂಮಿಯಿಂದ ಸತ್ವವನ್ನು ಹೀರಲು ಮೊದಲುಮಾಡು.
    2. (ರೂಪಕವಾಗಿ) ಬೇರೂರು; ಭದ್ರವಾಗಿ ನೆಲಸು.
  8. ಬುಡಕ್ಕೆ ಕೊಡಲಿಪೆಟ್ಟು ಹಾಕು; ನಾಶಮಾಡಲಾರಂಭಿಸು.
See also 1root  3root
2root ರೂಟ್‍
ಸಕರ್ಮಕ ಕ್ರಿಯಾಪದ
  1. ಬೇರೂರಿಸು; ನಾಟಿಸು; ನೆಲೆಗೊಳಿಸು; ದೃಢವಾಗಿ ಸ್ಥಾಪಿಸು: fear rooted him to the ground ಭಯ ಅವನನ್ನು ನೆಲಕ್ಕೆ ನಾಟುವಂತೆ ಮಾಡಿತು. (ಮುಖ್ಯವಾಗಿ ಭೂತಕೃದಂತದಲ್ಲಿ) her affection was deeply rooted ಅವಳ ಪ್ರೀತಿ ಆಳವಾಗಿ ಬೇರೂರಿತ್ತು, ನೆಲೆಗೊಂಡಿತ್ತು. obedience rooted in fear ಭಯದಲ್ಲಿ ಬೇರೂರಿದ ವಿಧೇಯತೆ.
  2. ಬೇರು ಬಿಡುವಂತೆ ಮಾಡು.
  3. ಬೇರು ಹಿಡಿದು ಎಳೆ; ಬೇರುಸಹಿತ ಅಗೆದುಹಾಕು.
  4. (ಆಸ್ಟ್ರೇಲಿಯ) (ಅಶಿಷ್ಟ)
    1. (ಹೆಂಗಸನ್ನು) ಸಂಭೋಗಿಸು.
    2. ಸುಸ್ತು ಮಾಡಿಸು; ನಿರಾಶೆಗೊಳಿಸು.
ಅಕರ್ಮಕ ಕ್ರಿಯಾಪದ

ಬೇರು ಬಿಡು; ಬೇರುಗಳು ಬೆಳೆ.

ಪದಗುಚ್ಛ

root out (or up) = 2root\((3)\).

See also 1root  2root
3root ರೂಟ್‍
ಸಕರ್ಮಕ ಕ್ರಿಯಾಪದ

(ನೆಲವನ್ನು) ಮುಸುಡಿಯಿಂದ–ಕೆದಕು, ತೋಡು, ಅಗೆ, ತಿರುವಿಹಾಕು.

ಅಕರ್ಮಕ ಕ್ರಿಯಾಪದ
  1. (ಹಂದಿ ಮೊದಲಾದವುಗಳ ವಿಷಯದಲ್ಲಿ) ಆಹಾರವನ್ನು ಹುಡುಕಿಕೊಂಡು ಮುಸುಡಿಯಿಂದ ನೆಲವನ್ನು ಕೆದಕು, ತೋಡು, ತಿರುವಿಹಾಕು.
  2. (ರೂಪಕವಾಗಿ) ಹುಡುಕು; ಶೋಧಿಸು; ಜಾಲಿಸಿ ನೋಡು; ಹುಡುಕಿ ತೆಗೆ ( ಸಕರ್ಮಕ ಕ್ರಿಯಾಪದ ಸಹ): root around in a box for loose coins ಚಿಲ್ಲರೆ ನಾಣ್ಯಗಳಿಗಾಗಿ ಪೆಟ್ಟಿಗೆಯಲ್ಲಿ ಹುಡುಕಾಡು.
  3. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) (ಮೆಚ್ಚಿಗೆಯ ಮೂಲಕ ಪ್ರೋತ್ಸಾಹಿಸಿ ಯಾ ಬೆಂಬಲನೀಡಿ) ವ್ಯಕ್ತಿಯ ಪರವಾಗಿ ಆಸಕ್ತಿ ವಹಿಸು; ವ್ಯಕ್ತಿಗೆ ಉತ್ತೇಜನಕೊಡು.