See also 2root  3root
1root ರೂಟ್‍
ನಾಮವಾಚಕ
  1. Figure: roots
    1. ಬೇರು; ಮೂಲ.
    2. (ಬಹುವಚನದಲ್ಲಿ) ಬೇರುಗಳು; ಕವಲು ಬೇರು.
    3. ಎಪಿಹೈಟ್‍ ಸಸ್ಯದ ಬೇರು.
    4. ಐವಿ ಎಂಬ ಹಬ್ಬುಬಳ್ಳಿಯನ್ನು ಅದರ ಆಸರೆಗೆ ಬಂಧಿಸಿರುವ ಭಾಗ, ಬೇರು
    5. ಕಂದಮೂಲ; ಗೆಡ್ಡೆ (ಗೆಣಸು); ತಿನ್ನಬಹುದಾದ ಬೇರು (ಮೂಲಂಗಿ, ಟರ್ನಿಪ್‍ ಗೆಡ್ಡೆ ಮೊದಲಾದವು).
    6. ನಾಟಿಹಾಕಲು ಬರುವ ಬೇರುಳ್ಳ ಸಣ್ಣ ಸಸ್ಯ.
  2. (ಬೈಬ್‍ಲ್‍) ಶಾಖೆ; ವಂಶಜ; ಸಂತತಿಯವನು: there shall be a root of Jesse ಜೆಸೀ ವಂಶದ ಶಾಖೆ ಬೆಳೆಯುತ್ತದೆ.
  3. (ಅವಯವ, ಅಂಗ, ಉದಾಹರಣೆಗೆ ಕೂದಲು, ಹಲ್ಲು, ಉಗುರು ಮೊದಲಾದವುಗಳ) ಬುಡ: root of tongue ನಾಲಿಗೆಯ ಬುಡ.
  4. (ಹೆಚ್ಚು ಪ್ರಧಾನವಾದ ಯಾ ದೊಡ್ಡದಾದ ಪೂರ್ಣ ವಸ್ತುವಿನೊಂದಿಗೆ) ಕೂಡಿಕೊಂಡಿರುವ, ಅಂಟಿಕೊಂಡಿರುವ ಭಾಗ: root of a gem ರತ್ನ (ಮುಖ್ಯವಾಗಿ ಪಚ್ಚೆಮಣಿ) ಕಲ್ಲಿಗೆ ಅಂಟಿದ್ದ ಮಣ್ಣುಭಾಗ.
  5. ಮೂಲ; ಮೂಲಕಾರಣ: love of money is the root of all evil ಹಣದ ಪ್ರೇಮವೇ ಎಲ್ಲ ಕೆಡುಕಿಗೂ ಮೂಲ.
  6. ಆಧಾರ; ಬುಡ; ಅವಲಂಬ; ನೆಲೆ; ಕಾರಣ: has its root(s) in selfishness ಸ್ವಾರ್ಥದಲ್ಲಿ ನೆಲೆಗೊಂಡಿದೆ; ಅದರ ಕಾರಣ ಸ್ವಾರ್ಥದಲ್ಲಿದೆ.
  7. ಅಡಿ; ಬುಡ; ತಳ; ಸಾರಭೂತ ಪದಾರ್ಥ ಯಾ ಸಹಜ ಗುಣ, ಲಕ್ಷಣ: get at the roots of things ಬುಡಮಟ್ಟ ಹೋಗು, ಶೋಧಿಸು.
  8. (ಬಹುವಚನದಲ್ಲಿ) (ಪರ್ವತ, ಬೆಟ್ಟ ಮೊದಲಾದವುಗಳ) ಬುಡ; ಮೂಲ
  9. (ವಿಶೇಷಣವಾಗಿ ಪ್ರಯೋಗ) (ಭಾವನೆ ಮೊದಲಾದವುಗಳ ವಿಷಯದಲ್ಲಿ) ಮೂಲ; ಕಾರಣ; ಜನ್ಮಸ್ಥಾನ.
  10. ಒಂದು ಸ್ಥಳ, ಸಮುದಾಯ ಮೊದಲಾದವುಗಳ ಬಗ್ಗೆ ಒಬ್ಬನಿಗೆ ಇರುವ ದೀರ್ಘಕಾಲೀನವಾದ ಭಾವುಕ ಆಸಕ್ತಿ, ಅನುರಾಗ, ಮಮತೆಗಳಿಗೆ ಇರುವ ಮೂಲಗಳು ಯಾ ಕಾರಣಗಳು.
  11. (ಭಾಷಾಶಾಸ್ತ್ರ) ಧಾತು ಯಾ ಪ್ರಕೃತಿ; ಭಾಷೆಯ ಶಬ್ದಗಳಲ್ಲಿ ಪ್ರತ್ಯಯಗಳನ್ನೆಲ್ಲ ತೆಗೆದಮೇಲೆ ಕಡೆಯಲ್ಲಿ ವಿಭಜನೀಯವಾಗದೆ ನಿಲ್ಲುವ ಮೂಲಾಂಶ. ಉದಾಹರಣೆಗೆ danced, dancer ಎಂಬ ಪದಗಳಲ್ಲಿ ಧಾತು ‘dance’.
  12. (ಸಂಗೀತ) ಸ್ವರಮೇಳದ ಮೂಲಸ್ವರ, ಮೂಲ ನಾದ.
  13. (ಗಣಿತ) ಮೂಲ:
    1. ಸಂಖ್ಯೆ ಯಾ ಮೊತ್ತವೊಂದನ್ನು ಅದರಿಂದಲೇ ನಿರ್ದಿಷ್ಟ ಸಲ ಗುಣಿಸಿದರೆ ಗೊತ್ತಾದ ಸಂಖ್ಯೆ ಯಾ ಮೊತ್ತವನ್ನು ನೀಡುವಂಥ ಸಂಖ್ಯೆ ಯಾ ಮೊತ್ತ: the cube root of eight is two ಎಂಟರ ಘನಮೂಲ ಎರಡು.
    2. ವರ್ಗಮೂಲ.
    3. ಅಜ್ಞಾತ ಮೊತ್ತವೊಂದನ್ನು ಒಳಗೊಂಡಿರುವ ಸಮೀಕರಣವನ್ನು ಸಿಂಧುವಾಗಿ ಮಾಡಬಲ್ಲ ಆ ಮೊತ್ತದ ಮೌಲ್ಯ.
  14. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) (ಅಶಿಷ್ಟ)
    1. ಸಂಭೋಗ; ಮೈಥುನ.
    2. ಮೈಥುನದಲ್ಲಿ ಜೊತೆಗಾರ್ತಿ.
ಪದಗುಚ್ಛ
  1. a root of bitterness ಕಹಿಯ ಮೂಲ.
  2. has the root of the matter in him (ಬೈಬಲ್‍ ಪ್ರಯೋಗ) ಅವನು ಮೂಲತಃ ಸರಿಯಾಗಿದ್ದಾನೆ (Job XIX -28).
  3. lay axe to root of(tree or institution) (ಮರದ ಯಾ ಸಂಸ್ಥೆಯ) ಬುಡಕ್ಕೆ ಕೊಡಲಿ ಹಾಕು; ನಾಶಮಾಡಲು ಯತ್ನಿಸು.
  4. pull up by the roots
    1. ಬೇರು ಸಮೇತ ಕಿತ್ತುಹಾಕು.
    2. (ರೂಪಕವಾಗಿ) ನಿರ್ಮೂಲಮಾಡು; ನಾಶ ಮಾಡು.
  5. put down roots = ಪದಗುಚ್ಛ\((7)\).
  6. root and branch
    1. ತುದಿಬುಡವೆಲ್ಲ; ಬುಡಮಟ್ಟ; ಪೂರ್ತಿಯಾಗಿ; ಸಂಪೂರ್ಣವಾಗಿ.
    2. ಆಮೂಲಾಗ್ರ(ವಾಗಿ).
  7. strike (or take) root
    1. ಬೇರು ಬಿಡು; ಭೂಮಿಯಿಂದ ಸತ್ವವನ್ನು ಹೀರಲು ಮೊದಲುಮಾಡು.
    2. (ರೂಪಕವಾಗಿ) ಬೇರೂರು; ಭದ್ರವಾಗಿ ನೆಲಸು.
  8. ಬುಡಕ್ಕೆ ಕೊಡಲಿಪೆಟ್ಟು ಹಾಕು; ನಾಶಮಾಡಲಾರಂಭಿಸು.