(ನಡತೆ ಮೊದಲಾದವುಗಳ ವಿಷಯದಲ್ಲಿ) (ನೈತಿಕವಾಗಿ ಯಾ ವ್ಯಾವಹಾರಿಕವಾಗಿ) ಸರಿಯಾದ; ತಕ್ಕ; ಯೋಗ್ಯ; ಯುಕ್ತ; ಉಚಿತ; ನ್ಯಾಯವಾದ: he acted a right part ಅವನು ಸರಿಯಾದ ಪಾತ್ರವನ್ನು ವಹಿಸಿದ. it is only right to tell you, that you should know ನೀನು ತಿಳಿದುಕೊಳ್ಳಬೇಕು ಎಂದು ಹೇಳುವುದು ಕೇವಲ ನ್ಯಾಯವಾಗಿದೆ.
ಸರಿಯಾದ; ನಿರ್ದುಷ್ಟ: right use of words ಪದಗಳ ಸರಿಯಾದ ಬಳಕೆ.
ನಿಜವಾದ; ಸತ್ಯವಾದ; ಯಥಾರ್ಥವಾದ; ಖರೆ: did not give a right account of the matter ವಿಷಯದ ನಿಜವಾದ ವರದಿಯನ್ನು ಕೊಡಲಿಲ್ಲ.
ಹೆಚ್ಚು ಇಷ್ಟವಾದ, ಅಪೇಕ್ಷಣೀಯವಾದ; ಅತ್ಯಂತ ಯೋಗ್ಯವಾದ; ಅತ್ಯುಚಿತವಾದ; ಬಹಳ ಯುಕ್ತವಾದ: the right man in the right place ಯೋಗ್ಯವಾದ ಸ್ಥಾನದಲ್ಲಿ ಯೋಗ್ಯನಾದ ಮನುಷ್ಯ.
ಸರಿಯಾದ; ನ್ಯಾಯವಾದ: a fault on the right side ನ್ಯಾಯವಾದ ಕಡೆಯ ತಪ್ಪು.
ಸಮರ್ಪಕ; ಒಳ್ಳೆಯ ಸ್ಥಿತಿಯಲ್ಲಿರುವ; ಚೆನ್ನಾಗಿರುವ; ಸ್ವಸ್ಥ; ಆರೋಗ್ಯವಾದ: are you right now? ಈಗ ಕ್ಷೇಮವಾಗಿದ್ದೀಯಾ? ನೆಮ್ಮದಿಯಾಗಿದ್ದೀಯಾ? ನಿನ್ನ ಆರೋಗ್ಯ ಈಗ ಸುಧಾರಿಸಿದೆಯೇ?
ಸ್ವಸ್ಥಬುದ್ಧಿಯ; ಬುದ್ಧಿನೆಟ್ಟಗಿರುವ: is not right in his head ಅವನಿಗೆ ತಲೆ ನೆಟ್ಟಗಿಲ್ಲ, ತಲೆ ಕೆಟ್ಟಿದೆ.
ತೃಪ್ತಿಕರವಾದ; ಸಮಂಜಸ; ಹಿತಕರ; ಸರಿಯಾದ: all’s right with the world ಪ್ರಪಂಚದಲ್ಲಿ ಎಲ್ಲಾ ಸರಿಯಾಗಿದೆ, ತೃಪ್ತಿಕರವಾಗಿದೆ.
(ಪ್ರಾಚೀನ ಪ್ರಯೋಗ) ನಿಜವಾದ; ವಾಸ್ತವಿಕ; ಯಥಾರ್ಥವಾದ; ಸಾಕ್ಷಾತ್ತಾದ; ತದ್ವತ್ತಾದ; (ಹಾಗೆಂದು) ಕರೆಯುವುದು ಯುಕ್ತವಾಗಿರುವ: right cognac ನಿಜವಾದ ಹ್ರೆಂಚ್ ಬ್ರಾಂದಿ.
(ಸ್ಥಾನವನ್ನು ಸೂಚಿಸುವಾಗ) ದಕ್ಷಪಾರ್ಶ್ವದ; ಬಲಗಡೆಯ;
ಒಬ್ಬನು ಉತ್ತರಕ್ಕೆ ತಿರುಗಿ ನಿಂತುಕೊಂಡಾಗ ಅವನಿಗೆ ಪೂರ್ವದಿಕ್ಕಿನ ಸ್ಥಾನದಲ್ಲಿರುವ.
(ವಸ್ತುವಿನ ವಿಷಯದಲ್ಲಿ) ವ್ಯಕ್ತಿಯ ಬಲಗಡೆಗೆ ಸಂವಾದಿ ಯಾಗಿರುವ ಕಡೆಯ.
ನೋಡುವವನ ಬಲಗೈಗೆ ಹತ್ತಿರವಾಗಿರುವ.
ಬಲಗಡೆಯ; ಬಲಗಡೆಯಿರುವ; ದಕ್ಷಿಣಭಾಗದಲ್ಲಿನ: right side ಬಲಪಕ್ಕ. right eye ಬಲಗಣ್ಣು. right flank (of army etc.) ಸೈನ್ಯ ಮೊದಲಾದವುಗಳ ದಕ್ಷಿಣಪಾರ್ಶ್ವ; ಬಲಪಕ್ಕ.
(ಬಟ್ಟೆಯ ಪಕ್ಕದ ವಿಷಯದಲ್ಲಿ) ಸರಿಯಾದ; ಪ್ರದರ್ಶನಕ್ಕೆ ಯಾ ಬಳಕೆಗಾಗಿ ಇರುವ: turn it right side up ಸರಿಯಾದ ಪಕ್ಕವನ್ನು ಮೇಲೆ ತಿರುಗಿಸು.
(ಆಡುಮಾತು) ನಿಜವಾದ; ಯಥಾರ್ಥವಾದ; ಯುಕ್ತವಾಗಿ, ನ್ಯಾಯವಾಗಿ ಹಾಗೆ ಕರೆಯಲ್ಪಟ್ಟ: made a right mess of it ನಿಜವಾಗಿ ಅದನ್ನು ಅವ್ಯವಸ್ಥೆ ಮಾಡಿದ. a right royal welcome ನಿಜವಾದ ರಜಸ್ವಾಗತ; ನಿಜವಾಗಿ ರಾಜೋಚಿತ ಸ್ವಾಗತ.
ಪದಗುಚ್ಛ
all right (ಆಡುಮಾತು) (ಆಜ್ಞೆಗೆ ಯಾ ಸೂಚನೆಗೆ ಒಪ್ಪಿಗೆ ಕೊಡುವಲ್ಲಿ) ಓಹೋ; ಭೇಷಕ್; ಸರಿ.
a right one (ಬ್ರಿಟಿಷ್ ಪ್ರಯೋಗ) (ಆಡುಮಾತು) ಮೂರ್ಖ; ಮುಟ್ಠಾಳ.
at right angles ಲಂಬಕೋನದಲ್ಲಿ; ಲಂಬಕೋನವಾಗಿರುವಂತೆ ಇಟ್ಟ.
get right ಸರಿಯಾಗು ಯಾ ಸರಿಪಡಿಸು; ಸರಿಯಾದ ಸ್ಥಿತಿಗೆ ಬರು ಯಾ ತರು.
give the right hand of fellowship (ಹಸ್ತಲಾಘವ ಕೊಡುವ ಕೈಯಾದ ಕಾರಣದಿಂದ) ಸ್ನೇಹದ ಕೈನೀಡು.
in one’s right mind ಒಬ್ಬನ ಬುದ್ಧಿ ನೆಟ್ಟಗಿದ್ದು, ಸರಿಯಾಗಿದ್ದು.
is as right as a trivet, as rain ತುಂಬ ಸರಿಯಾಗಿದೆ; ತುಂಬ ಠೀಕಾಗಿದೆ.
on the right side of
(ಒಬ್ಬ ವ್ಯಕ್ತಿ ಮೊದಲಾದವರ) ಪರವಾಗಿ.
ಒಂದು ನಿರ್ದಿಷ್ಟ ವಯಸ್ಸಿಗಿಂತ ಕಡಮೆಯ: on the right side of forty ನಲವತ್ತರ ಒಳಗಿರುವ, ನಲವತ್ತು ವರ್ಷ ಆಗಿಲ್ಲದ.