See also 1right  3right  4right  5right
2right ರೈಟ್‍
ಸಕರ್ಮಕ ಕ್ರಿಯಾಪದ
  1. ನೆಟ್ಟಗೆ ಮಾಡು; ನೇರಮಾಡು; ನೆಟ್ಟಗೆ ನಿಲ್ಲಿಸು ಯಾ ಅದರ ಸರಿಯಾದ ಸ್ಥಾನಕ್ಕೆ ಮತ್ತೆ ಬರುವಂತೆ ಮಾಡು: boat rights herself ದೋಣಿ ಮೊದಲಿದ್ದ ಹಾಗೆ ನೆಟ್ಟಗೆ ನಿಲ್ಲುತ್ತದೆ.
  2. (ಅನ್ಯಾಯಕ್ಕೆ, ಅನ್ಯಾಯವಾದವನಿಗೆ) ಪರಿಹಾರಕೊಡು; ನ್ಯಾಯ ದೊರಕಿಸು; ನಷ್ಟ ಭರ್ತಿಮಾಡು; ಹಕ್ಕನ್ನು ಮತ್ತೆ ಕೊಡು.
  3. (ಅನ್ಯಾಯಕ್ಕೆ, ಅನ್ಯಾಯಕ್ಕೊಳಗಾದವನ ಪರವಾಗಿ) ಸೇಡು ತೀರಿಸಿಕೊ; ನ್ಯಾಯ ದೊರಕಿಸು: right all wrongs ಎಲ್ಲ ಅನ್ಯಾಯಗಳಿಗೂ ಸೇಡು ತೀರಿಸಿಕೊ.
  4. (ನ್ಯಾಯವೆಂದು) ಸಮರ್ಥಿಸು; ಎತ್ತಿಹಿಡಿ; ಸ್ಥಾಪಿಸು: felt the need to right himself at court ನ್ಯಾಯಾಲಯದಲ್ಲಿ ತಾನು ನಿರ್ದೋಷಿಯೆಂದು ಸಮರ್ಥಿಸಿಕೊಳ್ಳುವ ಆವಶ್ಯಕತೆ ಕಂಡ.
  5. ಮೊದಲಿನ ಸ್ಥಿತಿಗೆ, ಸ್ಥಾನಮಾನಕ್ಕೆ ಬರುವಂತೆ ಮಾಡು; ಪೂರ್ವಸ್ಥಿತಿಗೆ ತರು; ಮೊದಲಿನ ಸ್ಥಿತಿಯಲ್ಲಿ ಸ್ಥಾಪಿಸು.
  6. (ತಪ್ಪುನ್ನು) ಸರಿಮಾಡು; ತಿದ್ದು; ನಿವಾರಿಸು; ಸರಿಪಡಿಸು; ನೇರ್ಪಡಿಸು: a fault that will right itself ತಾನಾಗಿಯೇ ಸರಿಹೋಗುವ ತಪ್ಪು.
  7. ಕ್ರಮಗೊಳಿಸು; ವ್ಯವಸ್ಥೆಗೆ ತರು.
ಪದಗುಚ್ಛ
  1. right helm ಚುಕ್ಕಾಣಿಯನ್ನು ಹಡಗಿನ ನಿಡುದಿಮ್ಮಿಯ ಅಡಿಗಟ್ಟಿಗೆ, ನೇರವಾಗಿ ತಿರುಗಿಸು.
  2. right oneself.
    1. ನೆಟ್ಟಗೆ ನಿಲ್ಲು.
    2. ಸ್ತಿಮಿತಕ್ಕೆ ಬರು; ಸಮತೂಕ ಪಡೆ.
    3. (ಹಡಗಿನ ವಿಷಯದಲ್ಲಿ) ಓಲಿದ್ದ ಸ್ಥಿತಿಯಿಂದ ನೆಟ್ಟಗಾಗು, ನೆಟ್ಟಗೆ ನಿಲ್ಲು.