See also 1right  2right  4right  5right
3right ರೈಟ್‍
ನಾಮವಾಚಕ
  1. ನ್ಯಾಯ; ಸರಿ; ನೈತಿಕವಾಗಿ ಯಾ ಸಾಮಾಜಿಕವಾಗಿ ನ್ಯಾಯವಾದುದು: right and wrong ನ್ಯಾಯಾನ್ಯಾಯ; ಸರಿತಪ್ಪುಗಳು.
  2. (ನ್ಯಾಯ) ಸಮರ್ಥನೆ: claims in right of his wife ಅವನ ಹೆಂಡತಿಯ ಸಮರ್ಥನೆಯಲ್ಲಿ ಹೂಡುವ ವಾದಗಳು.
  3. ನ್ಯಾಯವಾದ ಹಕ್ಕು, ಅಧಿಕಾರ ಯಾ ವಿನಾಯಿತಿ; ಹಕ್ಕುಬಾಧ್ಯತೆ; has no right of search ಶೋಧನೆಯ ಹಕ್ಕಿಲ್ಲ.
  4. (ಬಹುವಚನದಲ್ಲಿ) ನಿರ್ದಿಷ್ಟ ರೀತಿಯಲ್ಲಿ ವರ್ತಿಸುವ, ಕೆಲಸಮಾಡುವ-ಅಧಿಕಾರ, ಹಕ್ಕು.
  5. ಬಲಗಡೆ; ದಕ್ಷಿಣಪಾರ್ಶ್ವ; ಬಲಗೈ ಯಾ ಬಲಗಡೆಯ–ಪ್ರದೇಶ, ದಿಕ್ಕು.
  6. (ಮುಷ್ಟಿಕಾಳಗ)
    1. ಬಲಗೈ.
    2. ಬಲಗೈ(ಯಿಂದ ಹೊಡೆದ) ಹೊಡೆತ.
  7. (ಅನೇಕವೇಳೆ Right) (ರಾಜ್ಯನೀತಿ)
    1. ಬಲಪಕ್ಷ; ಬಲಪಂಥ; ಸಂಪ್ರದಾಯ ಪಕ್ಷದವರು; ಸಂಪ್ರದಾಯವಾದವನ್ನು ಬೆಂಬಲಿಸುವ ಗುಂಪು ಯಾ ತಂಡ.
    2. (ಹಿಂದೆ) ಅಧ್ಯಕ್ಷರ ಬಲಗಡೆ ಕೂರುತ್ತಿದ್ದ, ಯೂರೋಪು ಖಂಡದ ಶಾಸನಸಭೆಯ ಸಂಪ್ರದಾಯವಾದಿಗಳ ವಿಭಾಗ.
    3. ಬಲಪಂಥೀಯರು; ಅಂಥ ಸಂಪ್ರದಾಯವಾದಿಗಳು.
  8. (ರಂಗಸ್ಥಳದ) ಬಲಭಾಗ; ದಕಿಣಪಾರ್ಶ್ವ; ಪ್ರೇಕ್ಷಕರ ಎದುರು ನಿಂತ ವ್ಯಕ್ತಿಯ ಬಲಗಡೆ ಇರುವ ರಂಗಸ್ಥಳದ ಭಾಗ.
  9. (ಮುಖ್ಯವಾಗಿ ಶಿಸ್ತಿನ ನಡಗೆಯಲ್ಲಿ) ಬಲುಗಾಲು; ದಕ್ಷಿಣಪಾದ.
  10. ಸೇನೆಯ ಬಲಭಾಗ.
  11. (ಬಹುವಚನದಲ್ಲಿ)
    1. ಸರಿಯಾದ, ಸತ್ಯವಾದ ಪರಿಸ್ಥಿತಿ; ನಿಜಸ್ಥಿತಿ: do not know the rights of the case ವಿಷಯದ ನಿಜಸ್ಥಿತಿ ಗೊತ್ತಿಲ್ಲ.
    2. ನಿಜವಾದ–ವರದಿ, ನಿರೂಪಣೆ: have not heard the rights of the case ವಿಷಯದ ನಿಜವಾದ ವರದಿ ಕೇಳಿಲ್ಲ.
ಪದಗುಚ್ಛ
  1. assert one’s right ತನ್ನ ಹಕ್ಕನ್ನು ಬಿಟ್ಟುಕೊಡದಿರು; ತನ್ನ ಹಕ್ಕಿಗೋಸ್ಕರ ಒತ್ತಾಯಮಾಡು.
  2. in the right ನ್ಯಾಯಪಕ್ಷದಲ್ಲಿರುವ; ಸತ್ಯ, ನ್ಯಾಯ ತನ್ನ ಕಡೆ ಇರುವ; ತನ್ನದು ನ್ಯಾಯವಾಗಿರುವ, ಸತ್ಯವಾಗಿರುವ.
  3. Declaration (or Bill) of Rights (ಇಂಗ್ಲೆಂಡಿನ ಚರಿತ್ರೆ) ಹಕ್ಕುಗಳ ಘೋಷಣೆ; 1689ರಲ್ಲಿ ಪರಸ್ಪರ ಒಪ್ಪಂದದಿಂದ ಆದ ಪ್ರಜಾಧಿಕಾರದ ಮಸೂದೆ.
  4. do one right
    1. ಒಬ್ಬನೊಡನೆ ನ್ಯಾಯವಾಗಿ ವರ್ತಿಸು.
    2. ಒಬ್ಬನ ವಿಷಯದಲ್ಲಿನ್ಯಾಯವಾಗಿ ಯೋಚಿಸು, ಎಣಿಸು, ಭಾವಿಸು.
  5. do right by one = ಪದಗುಚ್ಛ \((4)\).
  6. by right(s) ನ್ಯಾಯವಾಗಿ; ನ್ಯಾಯವಾದುದನ್ನು ಮಾಡುವುದಾದರೆ.
  7. in one’s own right (ಮದುವೆ ಅನುಸರಣೆ ಮೊದಲಾದವುಗಳಿಂದ ಆಗಿರದೆ) ಸ್ವಂತ ಹಕ್ಕಿನಿಂದ: peeress in her own right ತನ್ನ ಸ್ವಂತ ಹಕ್ಕಿನಿಂದ ಶ್ರೀಮಂತೆ (ಮದುವೆಯಿಂದಲ್ಲ).
  8. put (or set) to rights ಸರಿಯಾಗಿ, ಕ್ರಮವಾಗಿ ಜೋಡಿಸು; ಕ್ರಮಗೊಳಿಸು.
  9. right of way
    1. ಮಾರ್ಗದ ಹಕ್ಕು; ದಾರಿಹಕ್ಕು; (ಮತ್ತೊಬ್ಬನ ಭೂಮಿಯ ಮೇಲೆ) ಹಾದುಹೋಗಲು ಮಾಮೂಲಿನ ಹಕ್ಕು.
    2. ಇಂಥ ಹಕ್ಕಿನ ದಾರಿ; ಅಂಥ ಹಕ್ಕುಗಳಿಗೊಳಪಟ್ಟ ಮಾರ್ಗ.
    3. ದಾರಿಹಕ್ಕು; ಅಗ್ರತೆಯ ಹಕ್ಕು; ಒಂದು ವಾಹನವನ್ನು ಹಿಂದಕ್ಕೆ ಹಾಕಿ ಮತ್ತೊಂದು ವಾಹನ ಹೆಚ್ಚು ವೇಗದಿಂದ ಮುಂದಕ್ಕೆ ಹೋಗುವ ಹಕ್ಕು.
    4. (ಅಮೆರಿಕನ್‍ ಪ್ರಯೋಗ) ಸಾರ್ವಜನಿಕ ಬಳಕೆಗಾಗಿ ಯಾ ಸೇವೆಗಾಗಿ ವಶಪಡಿಸಿಕೊಂಡ–ಜಾಗ, ಭೂಮಿ, ಜಮೀನು.
  10. stand on one’s rights ತನ್ನ ಹಕ್ಕಿನ ಮೇಲೆ ನಿಂತುಕೊ; ತನ್ನ ಹಕ್ಕನ್ನು ಬಿಟ್ಟುಕೊಡಲು ನಿರಾಕರಿಸು.
  11. the right ನ್ಯಾಯವಾದುದು; ಸರಿಯಾದುದು; ಸಾಧುವಾದುದು; ನ್ಯಾಯಪಕ್ಷ; ನ್ಯಾಯವಿರುವ ಕಡೆ: God defend the right ದೇವರು ನ್ಯಾಯ(ಪಕ್ಷ)ವನ್ನು ಕಾಪಾಡಲಿ.
  12. within one’s rights ತನ್ನ ಹಕ್ಕನ್ನು ಯಾ ಅಧಿಕಾರವನ್ನು ಮೀರದೆ; ತನ್ನ ಹಕ್ಕಿನ ಯಾ ಅಧಿಕಾರದ ವ್ಯಾಪ್ತಿಯೊಳಗೇ.
  13. woman’s rights (ಗಂಡಸರೊಡನೆ) ಹೆಂಗಸರ ಸಮಾನಾಧಿಕಾರ, ಸಮಹಕ್ಕು.