See also 2right  3right  4right  5right
1right ರೈಟ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ನೇರ; ಸರಳ; ಋಜು: right line ಸರಳರೇಖೆ. right-lined ನೇರಗೆರೆಗಳುಳ್ಳ.
  2. ಸರಿಯಾದ; ನಿಜವಾದ; ತಪ್ಪಾಗಿರದ: the right time ಸರಿಯಾದ ಕಾಲ. the right way ಸರಿಯಾದ (ತಪ್ಪಾಗಿರದ) ದಾರಿ.
  3. (ಕೋನದ ವಿಷಯದಲ್ಲಿ) ಲಂಬ; 90 ಡಿಗ್ರಿಗಿಂತ ಹೆಚ್ಚಾಗಲಿ ಕಡಿಮೆಯಾಗಲಿ ಇರದ.
  4. (ನಡತೆ ಮೊದಲಾದವುಗಳ ವಿಷಯದಲ್ಲಿ) (ನೈತಿಕವಾಗಿ ಯಾ ವ್ಯಾವಹಾರಿಕವಾಗಿ) ಸರಿಯಾದ; ತಕ್ಕ; ಯೋಗ್ಯ; ಯುಕ್ತ; ಉಚಿತ; ನ್ಯಾಯವಾದ: he acted a right part ಅವನು ಸರಿಯಾದ ಪಾತ್ರವನ್ನು ವಹಿಸಿದ. it is only right to tell you, that you should know ನೀನು ತಿಳಿದುಕೊಳ್ಳಬೇಕು ಎಂದು ಹೇಳುವುದು ಕೇವಲ ನ್ಯಾಯವಾಗಿದೆ.
  5. ಸರಿಯಾದ; ನಿರ್ದುಷ್ಟ: right use of words ಪದಗಳ ಸರಿಯಾದ ಬಳಕೆ.
  6. ನಿಜವಾದ; ಸತ್ಯವಾದ; ಯಥಾರ್ಥವಾದ; ಖರೆ: did not give a right account of the matter ವಿಷಯದ ನಿಜವಾದ ವರದಿಯನ್ನು ಕೊಡಲಿಲ್ಲ.
  7. ಹೆಚ್ಚು ಇಷ್ಟವಾದ, ಅಪೇಕ್ಷಣೀಯವಾದ; ಅತ್ಯಂತ ಯೋಗ್ಯವಾದ; ಅತ್ಯುಚಿತವಾದ; ಬಹಳ ಯುಕ್ತವಾದ: the right man in the right place ಯೋಗ್ಯವಾದ ಸ್ಥಾನದಲ್ಲಿ ಯೋಗ್ಯನಾದ ಮನುಷ್ಯ.
  8. ಸರಿಯಾದ; ನ್ಯಾಯವಾದ: a fault on the right side ನ್ಯಾಯವಾದ ಕಡೆಯ ತಪ್ಪು.
  9. ಸಮರ್ಪಕ; ಒಳ್ಳೆಯ ಸ್ಥಿತಿಯಲ್ಲಿರುವ; ಚೆನ್ನಾಗಿರುವ; ಸ್ವಸ್ಥ; ಆರೋಗ್ಯವಾದ: are you right now? ಈಗ ಕ್ಷೇಮವಾಗಿದ್ದೀಯಾ? ನೆಮ್ಮದಿಯಾಗಿದ್ದೀಯಾ? ನಿನ್ನ ಆರೋಗ್ಯ ಈಗ ಸುಧಾರಿಸಿದೆಯೇ?
  10. ಸ್ವಸ್ಥಬುದ್ಧಿಯ; ಬುದ್ಧಿನೆಟ್ಟಗಿರುವ: is not right in his head ಅವನಿಗೆ ತಲೆ ನೆಟ್ಟಗಿಲ್ಲ, ತಲೆ ಕೆಟ್ಟಿದೆ.
  11. ತೃಪ್ತಿಕರವಾದ; ಸಮಂಜಸ; ಹಿತಕರ; ಸರಿಯಾದ: all’s right with the world ಪ್ರಪಂಚದಲ್ಲಿ ಎಲ್ಲಾ ಸರಿಯಾಗಿದೆ, ತೃಪ್ತಿಕರವಾಗಿದೆ.
  12. (ಪ್ರಾಚೀನ ಪ್ರಯೋಗ) ನಿಜವಾದ; ವಾಸ್ತವಿಕ; ಯಥಾರ್ಥವಾದ; ಸಾಕ್ಷಾತ್ತಾದ; ತದ್ವತ್ತಾದ; (ಹಾಗೆಂದು) ಕರೆಯುವುದು ಯುಕ್ತವಾಗಿರುವ: right cognac ನಿಜವಾದ ಹ್ರೆಂಚ್‍ ಬ್ರಾಂದಿ.
  13. (ಸ್ಥಾನವನ್ನು ಸೂಚಿಸುವಾಗ) ದಕ್ಷಪಾರ್ಶ್ವದ; ಬಲಗಡೆಯ;
    1. ಒಬ್ಬನು ಉತ್ತರಕ್ಕೆ ತಿರುಗಿ ನಿಂತುಕೊಂಡಾಗ ಅವನಿಗೆ ಪೂರ್ವದಿಕ್ಕಿನ ಸ್ಥಾನದಲ್ಲಿರುವ.
    2. (ವಸ್ತುವಿನ ವಿಷಯದಲ್ಲಿ) ವ್ಯಕ್ತಿಯ ಬಲಗಡೆಗೆ ಸಂವಾದಿ ಯಾಗಿರುವ ಕಡೆಯ.
    3. ನೋಡುವವನ ಬಲಗೈಗೆ ಹತ್ತಿರವಾಗಿರುವ.
    4. ಬಲಗಡೆಯ; ಬಲಗಡೆಯಿರುವ; ದಕ್ಷಿಣಭಾಗದಲ್ಲಿನ: right side ಬಲಪಕ್ಕ. right eye ಬಲಗಣ್ಣು. right flank (of army etc.) ಸೈನ್ಯ ಮೊದಲಾದವುಗಳ ದಕ್ಷಿಣಪಾರ್ಶ್ವ; ಬಲಪಕ್ಕ.
  14. (ಬಟ್ಟೆಯ ಪಕ್ಕದ ವಿಷಯದಲ್ಲಿ) ಸರಿಯಾದ; ಪ್ರದರ್ಶನಕ್ಕೆ ಯಾ ಬಳಕೆಗಾಗಿ ಇರುವ: turn it right side up ಸರಿಯಾದ ಪಕ್ಕವನ್ನು ಮೇಲೆ ತಿರುಗಿಸು.
  15. (ಆಡುಮಾತು) ನಿಜವಾದ; ಯಥಾರ್ಥವಾದ; ಯುಕ್ತವಾಗಿ, ನ್ಯಾಯವಾಗಿ ಹಾಗೆ ಕರೆಯಲ್ಪಟ್ಟ: made a right mess of it ನಿಜವಾಗಿ ಅದನ್ನು ಅವ್ಯವಸ್ಥೆ ಮಾಡಿದ. a right royal welcome ನಿಜವಾದ ರಜಸ್ವಾಗತ; ನಿಜವಾಗಿ ರಾಜೋಚಿತ ಸ್ವಾಗತ.
ಪದಗುಚ್ಛ
  1. all right (ಆಡುಮಾತು) (ಆಜ್ಞೆಗೆ ಯಾ ಸೂಚನೆಗೆ ಒಪ್ಪಿಗೆ ಕೊಡುವಲ್ಲಿ) ಓಹೋ; ಭೇಷಕ್‍; ಸರಿ.
  2. a right one (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಮೂರ್ಖ; ಮುಟ್ಠಾಳ.
  3. at right angles ಲಂಬಕೋನದಲ್ಲಿ; ಲಂಬಕೋನವಾಗಿರುವಂತೆ ಇಟ್ಟ.
  4. get right ಸರಿಯಾಗು ಯಾ ಸರಿಪಡಿಸು; ಸರಿಯಾದ ಸ್ಥಿತಿಗೆ ಬರು ಯಾ ತರು.
  5. give the right hand of fellowship (ಹಸ್ತಲಾಘವ ಕೊಡುವ ಕೈಯಾದ ಕಾರಣದಿಂದ) ಸ್ನೇಹದ ಕೈನೀಡು.
  6. in one’s right mind ಒಬ್ಬನ ಬುದ್ಧಿ ನೆಟ್ಟಗಿದ್ದು, ಸರಿಯಾಗಿದ್ದು.
  7. is as right as a trivet, as rain ತುಂಬ ಸರಿಯಾಗಿದೆ; ತುಂಬ ಠೀಕಾಗಿದೆ.
  8. on the right side of
    1. (ಒಬ್ಬ ವ್ಯಕ್ತಿ ಮೊದಲಾದವರ) ಪರವಾಗಿ.
    2. ಒಂದು ನಿರ್ದಿಷ್ಟ ವಯಸ್ಸಿಗಿಂತ ಕಡಮೆಯ: on the right side of forty ನಲವತ್ತರ ಒಳಗಿರುವ, ನಲವತ್ತು ವರ್ಷ ಆಗಿಲ್ಲದ.
  9. put right = ಪದಗುಚ್ಛ \((13)\).
  10. right about (or about-turn or about-face)
    1. (ನಿಂತಿದ್ದ ಸ್ಥಾನದಿಂದ, ದಿಕ್ಕಿನಿಂದ) ಬಲಗಡೆ 180 ಡಿಗ್ರಿ ಸುತ್ತ ತಿರುಗು(ವುದು); ಬಲಕ್ಕೆ ತಿರುಗಿ ಹಿಂದು ಮುಂದಾಗುವುದು ಯಾ ಹಾಗಾಗುವವರೆಗೆ ಬಲಕ್ಕೆ ತಿರುಗುತ್ತಾ ಹೋಗುವುದು.
    2. ಕಾರ್ಯ ನೀತಿಯ ತಿರುಗುಮುರುಗು; ಪೂರ್ತಿ ವಿರುದ್ಧ ದಿಕ್ಕಿನಲ್ಲಿ ಪ್ರವರ್ತಿಸುವುದು.
    3. ಅವಸರದ ಹಿನ್‍ಸರಿತ; ಆತುರದ ಹಿಂದೆಗೆತ.
  11. right oh!(or ho!) = righto.
  12. right you are! (ಆಡುಮಾತು) ಸರಿ, ನೀನು ಹೇಳುವುದು ಸರಿ (ಅನುಮೋದನೆಯನ್ನು ಸೂಚಿಸುವ ಮಾತು).
  13. set right
    1. (ಕ್ರಮ, ಆರೋಗ್ಯ ಮೊದಲಾದವನ್ನು) ಸರಿಪಡಿಸು; ಪುನಃ ಮೊದಲಿನ ಸುಸ್ಥಿತಿಗೆ ತರು.
    2. (ವ್ಯಕ್ತಿಯ ತಪ್ಪಭಿಪ್ರಾಯ ಮೊದಲಾದವನ್ನು) ತಿದ್ದಿ ಸರಿಪಡಿಸು.
    3. (ಇನ್ನೊಬ್ಬರೊಡನೆ ತನ್ನನ್ನು) ಸಮರ್ಥಿಸಿಕೊ.
  14. of (or as of) right ಕಾನೂನಿನ ಯಾ ನೈತಿಕ ಮೊದಲಾದ ಹಕ್ಕುಳ್ಳ.
  15. she’s (or she’ll be) right (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) (ಆಡುಮಾತು) ಎಲ್ಲಾ ಸರಿಯಾಗಿದೆ.
  16. too right (ಅಶಿಷ್ಟ) ಸಮ್ಮತ; ಒಪ್ಪಿಗೆ; ಒಪ್ಪಿಗೆಯನ್ನು ಸೂಚಿಸುವ ಮಾತು.