(ಕುದುರೆ ಮೊದಲಾದವನ್ನು) ಜೂಜುಬಿಡು; ಜೂಜೋಡಿಸು: raced his cycle against a car ತನ್ನ ಸೈಕಲನ್ನು ಕಾರಿನೊಡನೆ ಜೂಜು ಓಡಿಸಿದ.
(ವ್ಯಕ್ತಿಯನ್ನು, ವಸ್ತುವನ್ನು) ರಭಸದಿಂದ ಓಡಿಸು; ಅತಿವೇಗವಾಗಿ ಸಾಗುವಂತೆ ಮಾಡು: raced the bill through the House ಮಸೂದೆಯನ್ನು ಶಾಸನಸಭೆಯಲ್ಲಿ ಅತ್ಯಂತ ಶೀಘ್ರವಾಗಿ ಸಾಗಿಸಿದ. raced me along at 6 miles an hour ಗಂಟೆಗೆ ಆರು ಮೈಲಿಯ ವೇಗದಲ್ಲಿ ನನ್ನನ್ನು ಓಡಿಸಿದ.
(-ಒಡನೆ) ಪಂದ್ಯ ಓಡು; ಪೈಪೋಟಿ ನಡೆಸು.
ವೇಗದಲ್ಲಿ (ಇತರರನ್ನು) ಮೀರಿಸಲು ಯತ್ನಿಸು.
ಅಕರ್ಮಕ ಕ್ರಿಯಾಪದ
(-ಒಡನೆ) ವೇಗದಲ್ಲಿ ಸ್ಪರ್ಧಿಸು.
ಕುದುರೆ ಜೂಜಿನಲ್ಲಿ ಆಸಕ್ತನಾಗಿರು ಯಾ ಭಾಗವಹಿಸು: a racing man ಜೂಜಾಸಕ್ತ; ಕುದುರೆ ಜೂಜಿನಲ್ಲಿ ಆಸಕ್ತ. the racing world ಕುದುರೆ ಜೂಜಿನ ಪ್ರಪಂಚ, ಲೋಕ, ವೃತ್ತಿ, ವೃತ್ತಿಯವರು.
(ಹಡಗು ಮೊದಲಾದವುಗಳ ಚಾಲಕ ಚಕ್ರ, ಹುಟ್ಟುಗಾಲಿ ಮೊದಲಾದವುಗಳ ವಿಷಯದಲ್ಲಿ) ಪೂರ್ಣ ವೇಗದಲ್ಲಿ ಚಲಿಸು; ರಭಸದಿಂದ ನಡೆ, ತಿರುಗು.
(ಎಂಜಿನು, ನೋದಕ, ನಾಡಿ ಮೊದಲಾದವುಗಳ ವಿಷಯದಲ್ಲಿ) ಪೂರ್ಣ ವೇಗದಲ್ಲಿ ಯಾ ವಿಪರೀತ ವೇಗದಲ್ಲಿ – ಓಡು.
(ವಿಶಿಷ್ಟ ಲಕ್ಷಣಗಳುಳ್ಳ ಒಂದು) ಮಾನವ ವಿಭಾಗ; ಜನಾಂಗ; ವರ್ಗ: the Mongolian race ಮಂಗೋಲಿಯನ್ ಜನಾಂಗ.
(ಜೀವಿಗಳ ಯಾವುದೇ) ದೊಡ್ಡ ವಿಭಾಗ; ವರ್ಗ; ಕುಲ; ಜಾತಿ; ತಳಿ: the human race ಮಾನವ, ಮನುಷ್ಯ – ಕುಲ. the four-footed race ಚತುಷ್ಟಾದಿ ವರ್ಗ. the feathered race ಪಕ್ಷಿಜಾತಿ.
(ರಕ್ತಸಂಬಂಧಿಗಳ) ಕುಲಸಂತತಿ; ಅನ್ವಯ: of noble race ಉದಾತ್ತ ಕುಲದ.
(ಸಾಮನ್ಯ ಲಕ್ಷಣಗಳುಳ್ಳವರ) ವರ್ಗ; ಕುಲ; ಸಮುದಾಯ: the race of poets ಕವಿಕುಲ. the race of dandies ಷೋಕಿಲಾಲ ವರ್ಗ.
ಜನಾಂಗೀಯತೆ; ಜನಾಂಗದ ಆಧಾರದ ಮೇಲೆ ಮಾಡುವ ವಿಭಾಗ ಯಾ ಆ ಕಲ್ಪನೆಯನ್ನು ಆಧರಿಸಿದ ಭಾವನೆ: discrimination based on race ಜನಾಂಗೀಯತೆಯನ್ನು ಆಧರಿಸಿದ ತಾರತಮ್ಯ, ಭೇದಭಾವನೆ ಯಾ ವರ್ತನೆ.
ಪದಗುಚ್ಛ
race relations ಜನಾಂಗೀಯ ಸಂಬಂಧ; ಸಾಮಾನ್ಯವಾಗಿ ಒಂದೇ ದೇಶದೊಳಗಿನ ಬೇರೆ ಬೇರೆ ಬುಡಕಟ್ಟುಗಳ, ಜನಾಂಗಗಳ ಸದಸ್ಯರ ನಡುವಣ ಸಂಬಂಧ.
race riot ಜನಾಂಗೀಯ ದೊಂಬಿ, ಗಲಭೆ; ಜನಾಂಗ ದ್ವೇಷದಿಂದಾಗಿ ಹಿಂಸಾಚಾರದ ಸ್ಫೋಟ.