See also 2race  3race  4race
1race ರೇಸ್‍
ನಾಮವಾಚಕ
  1. ರಭಸದ ಒಳಪ್ರವಾಹ; ಮುಖ್ಯವಾಗಿ ಸಮುದ್ರದ ಯಾ ನದಿಯ ಒಳಗಡೆ ಕಿರು ಓಣಿಯಲ್ಲಿ ಹರಿಯುವ ಪ್ರಬಲ ಪ್ರವಾಹ: tide set with a strong race ಪ್ರಬಲ ಪ್ರವಾಹದಿಂದ ಕೂಡಿದ ಭರತ.
  2. (ಪ್ರಾಚೀನ ಪ್ರಯೋಗ)
    1. (ಸೂರ್ಯ, ಚಂದ್ರ ಮೊದಲಾದವುಗಳ ) ಗತಿ; ಚಲನೆ.
    2. ಜೀವನದ, ಕಾಲದ ಗತಿ; ಕಾಲಗತಿ; ಆಯುಷ್ಯ: ere he had run half his race ಅವನ ಆಯುಷ್ಯದ ಅರ್ಧ ಸಹ ಕಳೆಯುವ ಮುನ್ನ.
  3. (ಹೊಳೆಯಿಂದ ತೋಡಿದ ) ಕಾಲುವೆ; ಸ್ರೋತ (ಮುಖ್ಯವಾಗಿ ಸಂಯುಕ್ತಪದಗಳಲ್ಲಿ ) mill-race ಗಿರಣಿಕಾಲುವೆ.
  4. (ನೇಯ್ಗೆ) ಲಾಳಿಯು ಹರಿಯುವ ಗಾಡಿ, ವೆಜ್ಜ, ದಾರಿ, ಪಥ.
    1. ರೇಸು; ಓಟದ ಪಂದ್ಯ; (ಓಟಗಾರರು, ಕುದುರೆಗಳು, ಹಡಗು ಯಾ ದೋಣಿಗಳು ಮೊದಲಾದವುಗಳ ) ಪಂಥದ ಓಟ; ಜೂಜು.
    2. (ಯಾವುದೇ ಕೆಲಸದಲ್ಲಿ, ಒಬ್ಬರ ಮೇಲೊಬ್ಬರ) ಮೇಲಾಟ; ಪಂದ್ಯ; ಪೈಪೋಟಿ; ಸ್ಪರ್ಧೆ.
  5. (ಬಹುವಚನದಲ್ಲಿ) (ಕ್ಲುಪ್ತ ಕಾಲದಲ್ಲಿ ನಿರ್ದಿಷ್ಟ ವೈಹಾಳಿ ಪಥದಲ್ಲಿ ನಡೆಸುವ) ರೇಸುಗಳು; ಕುದುರೆ, ನಾಯಿ ಮೊದಲಾದವುಗಳ ಪಂದ್ಯಗಳು, ಜೂಜುಗಳು.
  6. ಬಾಲ್‍ಬೇರಿಂಗ್‍ ಯಾ ರೋಲರ್‍ ಬೇರಿಂಗ್‍ನಲ್ಲಿ ಗಾಡಿಯಿರುವ ಎರಡು ಉಂಗುರಗಳಲ್ಲೊಂದು.
  7. (ಆಸ್ಟ್ರೇಲಿಯ) ಕುರಿ ಮೊದಲಾದವುಗಳನ್ನು ಆರಿಸಿಕೊಳ್ಳಲು ಮಾಡಿದ ಬೇಲಿ ಹಾಕಿದ ಓಣಿ, ಕಿರುದಾರಿ.
ಪದಗುಚ್ಛ

not in the race (ಆಸ್ಟ್ರೇಲಿಯ) (ಅಶಿಷ್ಟ) ಸಾಧ್ಯತೆ, ಅವಕಾಶ ಇಲ್ಲದಿರುವ.