See also 1race  3race  4race
2race ರೇಸ್‍
ಸಕರ್ಮಕ ಕ್ರಿಯಾಪದ
  1. (ಕುದುರೆ ಮೊದಲಾದವನ್ನು) ಜೂಜುಬಿಡು; ಜೂಜೋಡಿಸು: raced his cycle against a car ತನ್ನ ಸೈಕಲನ್ನು ಕಾರಿನೊಡನೆ ಜೂಜು ಓಡಿಸಿದ.
  2. (ವ್ಯಕ್ತಿಯನ್ನು, ವಸ್ತುವನ್ನು) ರಭಸದಿಂದ ಓಡಿಸು; ಅತಿವೇಗವಾಗಿ ಸಾಗುವಂತೆ ಮಾಡು: raced the bill through the House ಮಸೂದೆಯನ್ನು ಶಾಸನಸಭೆಯಲ್ಲಿ ಅತ್ಯಂತ ಶೀಘ್ರವಾಗಿ ಸಾಗಿಸಿದ. raced me along at 6 miles an hour ಗಂಟೆಗೆ ಆರು ಮೈಲಿಯ ವೇಗದಲ್ಲಿ ನನ್ನನ್ನು ಓಡಿಸಿದ.
  3. (-ಒಡನೆ) ಪಂದ್ಯ ಓಡು; ಪೈಪೋಟಿ ನಡೆಸು.
  4. ವೇಗದಲ್ಲಿ (ಇತರರನ್ನು) ಮೀರಿಸಲು ಯತ್ನಿಸು.
ಅಕರ್ಮಕ ಕ್ರಿಯಾಪದ
  1. (-ಒಡನೆ) ವೇಗದಲ್ಲಿ ಸ್ಪರ್ಧಿಸು.
  2. ಕುದುರೆ ಜೂಜಿನಲ್ಲಿ ಆಸಕ್ತನಾಗಿರು ಯಾ ಭಾಗವಹಿಸು: a racing man ಜೂಜಾಸಕ್ತ; ಕುದುರೆ ಜೂಜಿನಲ್ಲಿ ಆಸಕ್ತ. the racing world ಕುದುರೆ ಜೂಜಿನ ಪ್ರಪಂಚ, ಲೋಕ, ವೃತ್ತಿ, ವೃತ್ತಿಯವರು.
  3. (ಹಡಗು ಮೊದಲಾದವುಗಳ ಚಾಲಕ ಚಕ್ರ, ಹುಟ್ಟುಗಾಲಿ ಮೊದಲಾದವುಗಳ ವಿಷಯದಲ್ಲಿ) ಪೂರ್ಣ ವೇಗದಲ್ಲಿ ಚಲಿಸು; ರಭಸದಿಂದ ನಡೆ, ತಿರುಗು.
  4. (ಎಂಜಿನು, ನೋದಕ, ನಾಡಿ ಮೊದಲಾದವುಗಳ ವಿಷಯದಲ್ಲಿ) ಪೂರ್ಣ ವೇಗದಲ್ಲಿ ಯಾ ವಿಪರೀತ ವೇಗದಲ್ಲಿ – ಓಡು.