See also 1race  2race  4race
3race ರೇಸ್‍
ನಾಮವಾಚಕ
  1. (ವ್ಯಕ್ತಿ, ಪ್ರಾಣಿ ಯಾ ಸಸ್ಯಗಳ)
    1. ಕುಲ; ಬುಡಕಟ್ಟು.
    2. ಸಂತತಿ; ಪೀಳಿಗೆ; ವಂಶ.
    3. (ಒಂದೇ ಮೂಲದವರೆಂದು ಭಾವಿಸಲಾದವರ) ಸಂತತಿ; ಅನ್ವಯ; ಮನೆತನ; ಗೋತ್ರ; ಕುಟುಂಬ.
  2. (ನಿರ್ದಿಷ್ಟ ಮೂಲದವೆಂದು ಭಾವಿತವಾದ) ಬುಡಕಟ್ಟು; ಕುಲ; ಬಣ; ರಾಷ್ಟ್ರ; ಜನಾಂಗ.
  3. (ವಿಶಿಷ್ಟ ಲಕ್ಷಣಗಳುಳ್ಳ ಒಂದು) ಮಾನವ ವಿಭಾಗ; ಜನಾಂಗ; ವರ್ಗ: the Mongolian race ಮಂಗೋಲಿಯನ್‍ ಜನಾಂಗ.
  4. (ಜೀವಿಗಳ ಯಾವುದೇ) ದೊಡ್ಡ ವಿಭಾಗ; ವರ್ಗ; ಕುಲ; ಜಾತಿ; ತಳಿ: the human race ಮಾನವ, ಮನುಷ್ಯ – ಕುಲ. the four-footed race ಚತುಷ್ಟಾದಿ ವರ್ಗ. the feathered race ಪಕ್ಷಿಜಾತಿ.
  5. (ರಕ್ತಸಂಬಂಧಿಗಳ) ಕುಲಸಂತತಿ; ಅನ್ವಯ: of noble race ಉದಾತ್ತ ಕುಲದ.
  6. (ಸಾಮನ್ಯ ಲಕ್ಷಣಗಳುಳ್ಳವರ) ವರ್ಗ; ಕುಲ; ಸಮುದಾಯ: the race of poets ಕವಿಕುಲ. the race of dandies ಷೋಕಿಲಾಲ ವರ್ಗ.
  7. ಜನಾಂಗೀಯತೆ; ಜನಾಂಗದ ಆಧಾರದ ಮೇಲೆ ಮಾಡುವ ವಿಭಾಗ ಯಾ ಆ ಕಲ್ಪನೆಯನ್ನು ಆಧರಿಸಿದ ಭಾವನೆ: discrimination based on race ಜನಾಂಗೀಯತೆಯನ್ನು ಆಧರಿಸಿದ ತಾರತಮ್ಯ, ಭೇದಭಾವನೆ ಯಾ ವರ್ತನೆ.
ಪದಗುಚ್ಛ
  1. race relations ಜನಾಂಗೀಯ ಸಂಬಂಧ; ಸಾಮಾನ್ಯವಾಗಿ ಒಂದೇ ದೇಶದೊಳಗಿನ ಬೇರೆ ಬೇರೆ ಬುಡಕಟ್ಟುಗಳ, ಜನಾಂಗಗಳ ಸದಸ್ಯರ ನಡುವಣ ಸಂಬಂಧ.
  2. race riot ಜನಾಂಗೀಯ ದೊಂಬಿ, ಗಲಭೆ; ಜನಾಂಗ ದ್ವೇಷದಿಂದಾಗಿ ಹಿಂಸಾಚಾರದ ಸ್ಫೋಟ.