See also 2outside  3outside  4outside
1outside ಔಟ್‍ಸೈಡ್‍
ನಾಮವಾಚಕ
  1. ಹೊರಗಡೆ; ಹೊರಪಾರ್ಶ್ವ; ಹೊರಭಾಗ; ಬಹಿರ್ಭಾಗ; ಬಹಿರ್ಮುಖ; ಹೊರಮೈ; ಹೊರಗು: on the outside of the omnibus ಬಸ್ಸಿನ ಹೊರಭಾಗದಲ್ಲಿ. he knows only the outsides of books ಅವನು ಪುಸ್ತಕಗಳ ಹೊರಗನ್ನು ಮಾತ್ರ ಬಲ್ಲ.
  2. (ಹಾದಿಯ ವಿಷಯದಲ್ಲಿ) ಬದಿ; ಪಕ್ಕ:
    1. ಗೋಡೆಯ ಆಚೆ ಪಕ್ಕ, ಹೊರ ಬದಿ.
    2. ರಸ್ತೆಯ ಪಕ್ಕ, ಬದಿ.
  3. ಹೊರನೋಟ, ಹೊರರೂಪ; ತೋರ್ಕೆ; ಬಹಿರ್ದೃಶ್ಯ; ಬಹಿಃಸ್ವರೂಪ; ಬಹಿರ್ಲಕ್ಷಣ; ಬಾಹ್ಯ–ರೂಪ ಯಾ ದೃಷ್ಟಿ ಯಾ ಲಕ್ಷಣ: don’t judge a thing by the outside appearance ಒಂದು ವಸ್ತುವಿನ ಯೋಗ್ಯತೆಯನ್ನು ಅದರ ಹೊರನೋಟದಿಂದ, ಹೊರರೂಪದಿಂದ ನಿರ್ಣಯಿಸಬೇಡ.
  4. (ಜ್ಞಾತೃವಿನಿಂದ ಬೇರೆಯಾದ) ಬಾಹ್ಯ ಜಗತ್ತು; (ಅರಿಯುವವನ ಮನಸ್ಸಿನ ಹೊರಗೆ ವಸ್ತುತಃ ಇರುವ) ಹೊರಪ್ರಪಂಚ; ಹೊರಗಿರುವುದೆಲ್ಲವೂ: dreams may be said to come rather from within oneself than from outside ಕನಸುಗಳು ಬರುವುದು ಹೊರಗಿಂದ ಎನ್ನುವುದಕ್ಕಿಂತ ಒಳಗಿಂದ ಎನ್ನಬೇಕು. impressions from the outside ಹೊರಪ್ರಪಂಚವು ಮನಸ್ಸಿನ ಮೇಲೆ ಒತ್ತಿದ ಮುದ್ರೆಗಳು.
  5. ಹೊರಗು; ಹೊರಗಡೆ: open the door from the outside ಹೊರಗಿನಿಂದ ಕದವನ್ನು ತೆರೆ.
  6. (ಆಡುಮಾತು) (ಎಣಿಕೆಯಲ್ಲಿ, ಲೆಕ್ಕಾಚಾರದಲ್ಲಿ) ಪರಮಾವಧಿ; ಅತ್ಯಂತ ಹೆಚ್ಚಿನ ಪ್ರಮಾಣ: a hundred people at the outside ಪರಮಾವಧಿ ಎಂದರೆ ನೂರು ಮಂದಿ. it is a mile at the outside ಅತಿ ಹೆಚ್ಚೆಂದರೆ ಒಂದು ಮೈಲಿ ದೂರ.
  7. (ಬಹುವಚನದಲ್ಲಿ) (ಕಾಗದದ ಕಟ್ಟುಗಳಲ್ಲಿ, ರೀಮುಗಳಲ್ಲಿ) ಹೊರಹಾಳೆಗಳು.
  8. (ಬ್ರಿಟಿಷ್‍ ಪ್ರಯೋಗ) (ಕುದುರೆಗಾಡಿ ಮೊದಲಾದವುಗಳಲ್ಲಿ) ಹೊರ ಪ್ರಯಾಣಿಕ; ಗಾಡಿಯ ಹೊರಭಾಗದಲ್ಲಿ ಕುಳಿತು ಪ್ರಯಾಣ ಮಾಡುವವನು.
  9. (ಹುಟ್‍ಬಾಲ್‍ ಮೊದಲಾದ ಆಟಗಳಲ್ಲಿ) ಅಂಚಿನ ಆಟಗಾರ; ಮೈದಾನದ ಅಂಚಿನ ಪಕ್ಕದಲ್ಲಿ ಆಡುವ ಆಟಗಾರ.
See also 1outside  3outside  4outside
2outside ಔಟ್‍ಸೈಡ್‍
ಗುಣವಾಚಕ
  1. ಹೊರಗಡೆಯ; ಹೊರಗಣ; ಹೊರತುದಿಯ ಯಾ ಹೊರತುದಿಗೆ ಹತ್ತಿರದ: outside seat ಹೊರತುದಿಯ ಆಸನ.
  2. ಹೊರ; ಬಾಹ್ಯ; ಯಾವುದೇ ವಲಯ ಸಂಘ ಯಾ ಸಂಸ್ಥೆಗೆ ಸೇರಿಲ್ಲದ: outside work ಹೊರಕೆಲಸ; (ಸಂಸ್ಥೆಯಲ್ಲಿ ಆಗಿರದೆ) ಬೇರೆಯವರು ಯಾ ಬೇರೆ ಕಡೆ ಮಾಡಿದ ಕೆಲಸ. outside help ಹೊರಸಹಾಯ; (ಸಂಸ್ಥೆಯಿಂದ ಆಗಿರದೆ) ಬೇರೆಯವರು ನೀಡಿದ ಸಹಾಯ, ನೆರವು. outside opinion ಹೊರಜನರ ಅಭಿಪ್ರಾಯ; (ಮುಖ್ಯವಾಗಿ ಪಾರ್ಲಿಮೆಂಟಿನ ಸದಸ್ಯರಲ್ಲದ) ಹೊರಜನರ ಅಭಿಪ್ರಾಯ.
  3. (ಅಂದಾಜು ಮೊದಲಾದವುಗಳ ವಿಷಯದಲ್ಲಿ) ಅತಿ ಹೆಚ್ಚಿನ; ಪರಮಾವಧಿ: quote the outside prices ಪರಮಾವಧಿ ಬೆಲೆಗಳನ್ನು ಹೇಳು.
  4. (ಅವಕಾಶದ ವಿಷಯದಲ್ಲಿ) ಅಪರೂಪದ; ಅಸಂಭವನೀಯ.
  5. (ಹುಟ್‍ಬಾಲ್‍ ಮೊದಲಾದ ಆಟಗಳ ಆಟಗಾರರ ವಿಷಯದಲ್ಲಿ) ಅಂಚಿನ ಪಕ್ಕದ; ಮೈದಾನದ ಪಕ್ಕದ ಅಂಚಿಗೆ ಬಹಳ ಹತ್ತಿರ ನಿಲ್ಲುವ, ನಿಲ್ಲಿಸಿರುವ.
  6. (ಷೇರು ದಲ್ಲಾಳಿಯ ವಿಷಯದಲ್ಲಿ) ಸ್ಟಾಕು ಮಾರುಕಟ್ಟೆಯ ಸದಸ್ಯನಲ್ಲದ: outside broker ಹೊರದಲ್ಲಾಳಿ; ಸ್ಟಾಕ್‍ ಎಕ್ಸ್‍ಛೇಂಜಿನ ಸದಸ್ಯನಲ್ಲದ ದಲ್ಲಾಳಿ.
See also 1outside  2outside  4outside
3outside ಔಟ್‍ಸೈಡ್‍
ಕ್ರಿಯಾವಿಶೇಷಣ
  1. ಹೊರಕ್ಕೆ; ಹೊರಗಡೆಗೆ; ಮನೆಯಿಂದಾಚೆಯ ಬಯಲು, ರೇವಿನಿಂದಾಚೆಯ ಸಮುದ್ರ, ಮೊದಲಾದವಕ್ಕೆ: come outside (ಮುಖ್ಯವಾಗಿ ಜಗಳಕ್ಕೆ ಸವಾಲು ಮಾಡುವಲ್ಲಿ) ಹೊರಕ್ಕೆ ಬಾ; (ಮನೆಯಿಂದ) ಈಚೆ ಬಾ.
  2. ಬಾಹ್ಯವಾಗಿ; ಸೇರಿರದೆ; (ಯಾವುದರದೇ) ಒಳಗಿರದೆ.
  3. ಹೊರಗಡೆ; ಹೊರಗಡೆಯಲ್ಲಿ.
  4. (ಅಶಿಷ್ಟ) ಸೆರೆಮನೆಯಿಂದ ಹೊರಗೆ, ಆಚೆ.
ಪದಗುಚ್ಛ
  1. at the outside (ಅಂದಾಜು ಮೊದಲಾದವುಗಳ ವಿಷಯದಲ್ಲಿ) ಹೆಚ್ಚೆಂದರೆ; ಬಹಳವೆಂದರೆ.
  2. get outside of (ಅಶಿಷ್ಟ) ತಿನ್ನು ಯಾ ಕುಡಿ.
  3. outside and in ಹೊರಗೂ ಒಳಗೂ; ಹೊರಗೆ ಮತ್ತು ಒಳಗೆ.
  4. outside in ತಿರುಗಮುರುಗ; ಉಲ್ಟಾಪಲ್ಟಾ; ಒಳಭಾಗ ಹೊರಭಾಗವಾಗಿ; ಒಳಭಾಗ ಹೊರಬರುವಂತೆ.
  5. outside of = 3outside\((3)\).
See also 1outside  2outside  3outside
4outside ಔಟ್‍ಸೈಡ್‍
ಉತ್ತರಪ್ರತ್ಯಯ
  1. ಹೊರಗೆ; ಹೊರಗಡೆ; ಹೊರಗಡೆಯಲ್ಲಿ: meet me outside the post office ಅಂಚೆ ಕಚೇರಿಯ ಹೊರಗೆ ನನ್ನನ್ನು ಭೇಟಿ ಮಾಡು.
  2. (ವಿಷಯ, ಕ್ಷೇತ್ರ, ಮೊದಲಾದವುಗಳ) ಎಲ್ಲೆಯಾಚೆ; ವ್ಯಾಪ್ತಿಯ ಹೊರಗೆ; ಬಾಹಿರವಾಗಿ; ಹೊರತಾಗಿ: natural forces are outside morality ನೈಸರ್ಗಿಕ ಶಕ್ತಿಗಳು ನೀತಿಯ ವ್ಯಾಪ್ತಿಗೆ ಹೊರತಾದವು. I cannot go outside the evidence ಸಾಕ್ಷ್ಯದ ಎಲ್ಲೆ ಮೀರಿ ಹೋಗಲಾರೆ.