See also 2outside  3outside  4outside
1outside ಔಟ್‍ಸೈಡ್‍
ನಾಮವಾಚಕ
  1. ಹೊರಗಡೆ; ಹೊರಪಾರ್ಶ್ವ; ಹೊರಭಾಗ; ಬಹಿರ್ಭಾಗ; ಬಹಿರ್ಮುಖ; ಹೊರಮೈ; ಹೊರಗು: on the outside of the omnibus ಬಸ್ಸಿನ ಹೊರಭಾಗದಲ್ಲಿ. he knows only the outsides of books ಅವನು ಪುಸ್ತಕಗಳ ಹೊರಗನ್ನು ಮಾತ್ರ ಬಲ್ಲ.
  2. (ಹಾದಿಯ ವಿಷಯದಲ್ಲಿ) ಬದಿ; ಪಕ್ಕ:
    1. ಗೋಡೆಯ ಆಚೆ ಪಕ್ಕ, ಹೊರ ಬದಿ.
    2. ರಸ್ತೆಯ ಪಕ್ಕ, ಬದಿ.
  3. ಹೊರನೋಟ, ಹೊರರೂಪ; ತೋರ್ಕೆ; ಬಹಿರ್ದೃಶ್ಯ; ಬಹಿಃಸ್ವರೂಪ; ಬಹಿರ್ಲಕ್ಷಣ; ಬಾಹ್ಯ–ರೂಪ ಯಾ ದೃಷ್ಟಿ ಯಾ ಲಕ್ಷಣ: don’t judge a thing by the outside appearance ಒಂದು ವಸ್ತುವಿನ ಯೋಗ್ಯತೆಯನ್ನು ಅದರ ಹೊರನೋಟದಿಂದ, ಹೊರರೂಪದಿಂದ ನಿರ್ಣಯಿಸಬೇಡ.
  4. (ಜ್ಞಾತೃವಿನಿಂದ ಬೇರೆಯಾದ) ಬಾಹ್ಯ ಜಗತ್ತು; (ಅರಿಯುವವನ ಮನಸ್ಸಿನ ಹೊರಗೆ ವಸ್ತುತಃ ಇರುವ) ಹೊರಪ್ರಪಂಚ; ಹೊರಗಿರುವುದೆಲ್ಲವೂ: dreams may be said to come rather from within oneself than from outside ಕನಸುಗಳು ಬರುವುದು ಹೊರಗಿಂದ ಎನ್ನುವುದಕ್ಕಿಂತ ಒಳಗಿಂದ ಎನ್ನಬೇಕು. impressions from the outside ಹೊರಪ್ರಪಂಚವು ಮನಸ್ಸಿನ ಮೇಲೆ ಒತ್ತಿದ ಮುದ್ರೆಗಳು.
  5. ಹೊರಗು; ಹೊರಗಡೆ: open the door from the outside ಹೊರಗಿನಿಂದ ಕದವನ್ನು ತೆರೆ.
  6. (ಆಡುಮಾತು) (ಎಣಿಕೆಯಲ್ಲಿ, ಲೆಕ್ಕಾಚಾರದಲ್ಲಿ) ಪರಮಾವಧಿ; ಅತ್ಯಂತ ಹೆಚ್ಚಿನ ಪ್ರಮಾಣ: a hundred people at the outside ಪರಮಾವಧಿ ಎಂದರೆ ನೂರು ಮಂದಿ. it is a mile at the outside ಅತಿ ಹೆಚ್ಚೆಂದರೆ ಒಂದು ಮೈಲಿ ದೂರ.
  7. (ಬಹುವಚನದಲ್ಲಿ) (ಕಾಗದದ ಕಟ್ಟುಗಳಲ್ಲಿ, ರೀಮುಗಳಲ್ಲಿ) ಹೊರಹಾಳೆಗಳು.
  8. (ಬ್ರಿಟಿಷ್‍ ಪ್ರಯೋಗ) (ಕುದುರೆಗಾಡಿ ಮೊದಲಾದವುಗಳಲ್ಲಿ) ಹೊರ ಪ್ರಯಾಣಿಕ; ಗಾಡಿಯ ಹೊರಭಾಗದಲ್ಲಿ ಕುಳಿತು ಪ್ರಯಾಣ ಮಾಡುವವನು.
  9. (ಹುಟ್‍ಬಾಲ್‍ ಮೊದಲಾದ ಆಟಗಳಲ್ಲಿ) ಅಂಚಿನ ಆಟಗಾರ; ಮೈದಾನದ ಅಂಚಿನ ಪಕ್ಕದಲ್ಲಿ ಆಡುವ ಆಟಗಾರ.