See also 1outside  3outside  4outside
2outside ಔಟ್‍ಸೈಡ್‍
ಗುಣವಾಚಕ
  1. ಹೊರಗಡೆಯ; ಹೊರಗಣ; ಹೊರತುದಿಯ ಯಾ ಹೊರತುದಿಗೆ ಹತ್ತಿರದ: outside seat ಹೊರತುದಿಯ ಆಸನ.
  2. ಹೊರ; ಬಾಹ್ಯ; ಯಾವುದೇ ವಲಯ ಸಂಘ ಯಾ ಸಂಸ್ಥೆಗೆ ಸೇರಿಲ್ಲದ: outside work ಹೊರಕೆಲಸ; (ಸಂಸ್ಥೆಯಲ್ಲಿ ಆಗಿರದೆ) ಬೇರೆಯವರು ಯಾ ಬೇರೆ ಕಡೆ ಮಾಡಿದ ಕೆಲಸ. outside help ಹೊರಸಹಾಯ; (ಸಂಸ್ಥೆಯಿಂದ ಆಗಿರದೆ) ಬೇರೆಯವರು ನೀಡಿದ ಸಹಾಯ, ನೆರವು. outside opinion ಹೊರಜನರ ಅಭಿಪ್ರಾಯ; (ಮುಖ್ಯವಾಗಿ ಪಾರ್ಲಿಮೆಂಟಿನ ಸದಸ್ಯರಲ್ಲದ) ಹೊರಜನರ ಅಭಿಪ್ರಾಯ.
  3. (ಅಂದಾಜು ಮೊದಲಾದವುಗಳ ವಿಷಯದಲ್ಲಿ) ಅತಿ ಹೆಚ್ಚಿನ; ಪರಮಾವಧಿ: quote the outside prices ಪರಮಾವಧಿ ಬೆಲೆಗಳನ್ನು ಹೇಳು.
  4. (ಅವಕಾಶದ ವಿಷಯದಲ್ಲಿ) ಅಪರೂಪದ; ಅಸಂಭವನೀಯ.
  5. (ಹುಟ್‍ಬಾಲ್‍ ಮೊದಲಾದ ಆಟಗಳ ಆಟಗಾರರ ವಿಷಯದಲ್ಲಿ) ಅಂಚಿನ ಪಕ್ಕದ; ಮೈದಾನದ ಪಕ್ಕದ ಅಂಚಿಗೆ ಬಹಳ ಹತ್ತಿರ ನಿಲ್ಲುವ, ನಿಲ್ಲಿಸಿರುವ.
  6. (ಷೇರು ದಲ್ಲಾಳಿಯ ವಿಷಯದಲ್ಲಿ) ಸ್ಟಾಕು ಮಾರುಕಟ್ಟೆಯ ಸದಸ್ಯನಲ್ಲದ: outside broker ಹೊರದಲ್ಲಾಳಿ; ಸ್ಟಾಕ್‍ ಎಕ್ಸ್‍ಛೇಂಜಿನ ಸದಸ್ಯನಲ್ಲದ ದಲ್ಲಾಳಿ.