See also 2nail
1nail ನೇಲ್‍
ನಾಮವಾಚಕ
  1. ಉಗುರು; ನಖ.
  2. (ಮೃಗಗಳ, ಹಕ್ಕಿಗಳ ಕಾಲಿನ) ಮೊನೆಯುಗುರು.
  3. (ಮೃದು ಕೊಕ್ಕಿನ ಹಕ್ಕಿಗಳ) ಕೊಕ್ಕಿನ ಮೇಲ್ಭಾಗದಲ್ಲಿನ ಉಗುರು ಪದಾರ್ಥದ ಗಟ್ಟಿಗಂತಿ.
  4. ಮೊಳೆ; ಆಣಿ.
  5. ಗಜದ 1/16 ಭಾಗ; $2\frac{ 1} { 4}$ ಅಂಗುಲ (ಹಿಂದೆ ಬಳಸುತ್ತಿದ್ದ ಬಟ್ಟೆಯ ಒಂದು ಅಳತೆ).
ಪದಗುಚ್ಛ
  1. bite one’s nail (ಅಭ್ಯಾಸಬಲದಿಂದ ಯಾ ತಾಳ್ಮೆಗೆಟ್ಟು) ಉಗುರು ಕಡಿ.
  2. drive nail in one’s $^1$coffin.
  3. hard as nails
    1. ದೃಢಕಾಯನಾಗಿ; ಗಟ್ಟಿಮುಟ್ಟಾಗಿ.
    2. ಕಲ್ಲೆದೆಯ; ನಿರ್ದಯ; ಕಠಿಣ.
  4. hit the nail on the head
    1. ಸರಿಯಾದ ಸ್ಪಷ್ಟನೆ ಕೊಡು.
    2. ಯಾವುದು ಸರಿಯೋ ಆ ಕೆಲಸ ಮಾಡು.
    3. ಗುರಿಮುಟ್ಟು.
  5. hit the right nail= ಪದಗುಚ್ಛ\((4)\).
  6. nail – biting ತೀವ್ರ ಆತಂಕವನ್ನುಂಟುಮಾಡುವ.
  7. on the nail (ಮುಖ್ಯವಾಗಿ ಹಣ ಪಾವತಿಯ ವಿಷಯದಲ್ಲಿ) ತಕ್ಷಣ; ಕೂಡಲೇ; ತಡವಿಲ್ಲದೆ.
  8. right as nails ಸರಿ; ನಿಜ; ಖರೆ; ಖಂಡಿತ ಸರಿ.
  9. tooth and nail ಶಕ್ತಿಯನ್ನೆಲ್ಲಾ ಬಿಟ್ಟು; ಬಲವಾಗಿ ಪಟ್ಟು ಹಿಡಿದು: fight tooth and nail ಬಲವಾಗಿ ಪಟ್ಟು ಹಿಡಿದು ಹೋರಾಡು.
See also 1nail
2nail ನೇಲ್‍
ಸಕರ್ಮಕ ಕ್ರಿಯಾಪದ
  1. ಮೊಳೆಹೊಡೆ; ಮೊಳೆ ಹೊಡೆದು – ಭದ್ರಪಡಿಸು, ಬಂಧಿಸು.
  2. (ವ್ಯಕ್ತಿ, ಗಮನ, ಮೊದಲಾದವನ್ನು) ಬಂಧಿಸು; ಚಲಿಸದಂತಿಡು; ನಾಟಿಸು: surpise nailed him to the spot ಆಶ್ಚರ್ಯದಿಂದ ಅವನು ನಿಶ್ಚಲನಾಗಿ ನಿಂತ.
  3. (ಮನುಷ್ಯ, ವಸ್ತು, ಮೊದಲಾದವನ್ನು) ಭದ್ರಪಡಿಸು; ಹಿಡಿ; ನಿಲ್ಲಿಸಿಕೊ.
ಪದಗುಚ್ಛ
  1. nail (a lie etc.) to counter(ಸುಳ್ಳು ಮೊದಲಾದವನ್ನು) ಬಹಿರಂಗಪಡಿಸು; ಸುಳ್ಳೆಂದು ತೋರಿಸು; ಸುಳ್ಳನ್ನು ಎತ್ತಿ ತೋರಿಸು.
  2. nail $^1$colours to the mast.
  3. nail down
    1. ಸ್ಪಷ್ಟವಾಗಿ ವಿವರಿಸು.
    2. (ಒಬ್ಬ ವ್ಯಕ್ತಿಯನ್ನು ಅವನು) ಕೊಟ್ಟ ವಚನ ಮೊದಲಾದವುಗಳಿಗೆ ಕಟ್ಟಿಹಾಕು, ಬಂಧಿಸು.
    3. ಕಟ್ಟ ಕಡೆಯದಾಗಿ ನಿಷ್ಕರ್ಷೆ ಮಾಡಿಬಿಡು.
    4. (ಒಂದು ವಸ್ತುವನ್ನು) ಮೊಳೆ ಹೊಡೆದು ಬಿಗಿ ಮಾಡು, ಭದ್ರಪಡಿಸು.
  4. nail up
    1. (ಬಾಗಿಲು ಮೊದಲಾದವನ್ನು) ಮೊಳೆಗಳಿಂದ ಮುಚ್ಚು.
    2. (ವಸ್ತುವನ್ನು) ಮೊಳೆಗಳ ಸಹಾಯದಿಂದ ಭದ್ರಪಡಿಸು, ನಿಲ್ಲಿಸು, ಕಟ್ಟು.