See also 1nail
2nail ನೇಲ್‍
ಸಕರ್ಮಕ ಕ್ರಿಯಾಪದ
  1. ಮೊಳೆಹೊಡೆ; ಮೊಳೆ ಹೊಡೆದು – ಭದ್ರಪಡಿಸು, ಬಂಧಿಸು.
  2. (ವ್ಯಕ್ತಿ, ಗಮನ, ಮೊದಲಾದವನ್ನು) ಬಂಧಿಸು; ಚಲಿಸದಂತಿಡು; ನಾಟಿಸು: surpise nailed him to the spot ಆಶ್ಚರ್ಯದಿಂದ ಅವನು ನಿಶ್ಚಲನಾಗಿ ನಿಂತ.
  3. (ಮನುಷ್ಯ, ವಸ್ತು, ಮೊದಲಾದವನ್ನು) ಭದ್ರಪಡಿಸು; ಹಿಡಿ; ನಿಲ್ಲಿಸಿಕೊ.
ಪದಗುಚ್ಛ
  1. nail (a lie etc.) to counter(ಸುಳ್ಳು ಮೊದಲಾದವನ್ನು) ಬಹಿರಂಗಪಡಿಸು; ಸುಳ್ಳೆಂದು ತೋರಿಸು; ಸುಳ್ಳನ್ನು ಎತ್ತಿ ತೋರಿಸು.
  2. nail $^1$colours to the mast.
  3. nail down
    1. ಸ್ಪಷ್ಟವಾಗಿ ವಿವರಿಸು.
    2. (ಒಬ್ಬ ವ್ಯಕ್ತಿಯನ್ನು ಅವನು) ಕೊಟ್ಟ ವಚನ ಮೊದಲಾದವುಗಳಿಗೆ ಕಟ್ಟಿಹಾಕು, ಬಂಧಿಸು.
    3. ಕಟ್ಟ ಕಡೆಯದಾಗಿ ನಿಷ್ಕರ್ಷೆ ಮಾಡಿಬಿಡು.
    4. (ಒಂದು ವಸ್ತುವನ್ನು) ಮೊಳೆ ಹೊಡೆದು ಬಿಗಿ ಮಾಡು, ಭದ್ರಪಡಿಸು.
  4. nail up
    1. (ಬಾಗಿಲು ಮೊದಲಾದವನ್ನು) ಮೊಳೆಗಳಿಂದ ಮುಚ್ಚು.
    2. (ವಸ್ತುವನ್ನು) ಮೊಳೆಗಳ ಸಹಾಯದಿಂದ ಭದ್ರಪಡಿಸು, ನಿಲ್ಲಿಸು, ಕಟ್ಟು.