(ವರ್ತಮಾನ ಕೃದಂತ jamming, ಭೂತರೂಪ ಮತ್ತು ಭೂತಕೃದಂತ jammed).
ಸಕರ್ಮಕ ಕ್ರಿಯಾಪದ
(ಎರಡು ತಲಗಳ ಮಧ್ಯೆ ವಸ್ತುವನ್ನು) ಅಮುಕು; ಜಡಿ; ತುರುಕು; ಇರುಕು; ಅಡಕು.
(ಯಂತ್ರ ಭಾಗವನ್ನು) ಕೆಲಸಕ್ಕೆ ಬಾರದಂತೆ – ಇರುಕಿಸು, ಅದುಮಿ ಬಿಡು, ಜಜ್ಜಿ ಬಿಡು.
ಯಂತ್ರವನ್ನು ಅದುಮಿ ಬಿಟ್ಟು ಕೆಲಸ ಮಾಡದಂತೆ ಮಾಡು.
(ವಸ್ತುಗಳು ಒತ್ತಾಗಿ ಮುದ್ದೆಯಾಗುವಂತೆ) ಅದುಮು; ಗಿಡಿ.
(ವಸ್ತುವನ್ನು, ಇಕ್ಕಟ್ಟು ಜಾಗ ಮೊದಲಾದವುಗಳ ಒಳಕ್ಕೆ) ಬಲವಾಗಿ – ತಳ್ಳು, ತುರುಕು, ನೂಕು, ಗಿಡಿ, ಜಡಿ.
(ಮಾರ್ಗ ಮೊದಲಾದವನ್ನು) ಕಿಕ್ಕಿರಿದು ತುಂಬಿ, ನೆರೆದು, ಸೇರಿ – ಅಡಚಿಬಿಡು, ಬಂದ್ ಮಾಡಿ ಬಿಡು. 7 (ರೇಡಿಯೋ) ಅದುಮು; ಇರುಕು; ಸಂಮರ್ದಿಸು (ಸಮಾನ ತರಂಗಾಂತರದಲ್ಲಿ ರೇಡಿಯೋ ಅಲೆಗಳನ್ನು ಪ್ರಸಾರ ಮಾಡಿ ಅನ್ಯರ ರೇಡಿಯೋ ಅಥವಾ ರೇಡಾರ್ ಸಂಕೇತಗಳನ್ನು) ಗಜಿಬಿಜಿ ಮಾಡು.
ನಿರ್ಗಮನವನ್ನು – ತಡೆ, ನಿರೋಧಿಸು: we were jammed in ಹೊರಬರದಂತೆ ನಮ್ಮನ್ನು ತಡೆಯಲಾಯಿತು.
(ಸಾಮಾನ್ಯವಾಗಿ jam on) (ಬ್ರೇಕುಗಳು ಮೊದಲಾದವುಗಳನ್ನು) ಬಲವಂತವಾಗಿ ಅಥವಾ ಇದ್ದಕ್ಕಿದ್ದಂತೆ – ಅಮುಕು, ಹಾಕು, ಒತ್ತು.
ಜ್ಯಾಮು; ಮುರಬ್ಬ; ಸಕ್ಕರೆಪಾಕದಲ್ಲಿ ಕುದಿಸಿ ರಸಾಯನದಂತೆ ಮಾಡಿದ ಹಣ್ಣು.
(ಬ್ರಿಟಿಷ್ ಪ್ರಯೋಗ) (ಆಡುಮಾತು) ಸವಿದಿನಿಸು; ಅಹಿತವಾದುದನ್ನು ಮರೆಸುವ, ಹಿತಕರವೂ ಸುಲಭವೂ ಆದ ವಸ್ತು (ರೂಪಕವಾಗಿ ಸಹ): this job is not all jam ಈ ಕೆಲಸ ಸಂಪೂರ್ಣವಾಗಿ ಹಿತಕರವಾದುದೇನಲ್ಲ.
ನುಡಿಗಟ್ಟು
real jam ಸ್ವಾರಸ್ಯ; ಸವಿ; ಸುಖವನ್ನೂ ಮಾಧುರ್ಯವನ್ನೂ ಕೊಡುವಂಥದ್ದು: without real jam, cash and kisses, the world is a bitter pill ಕಾಂಚನ ಮತ್ತು ಚುಂಬನದಂಥ ಸ್ವಾರಸ್ಯಗಳಿಲ್ಲದಿದ್ದರೆ, ಈ ಲೋಕವೊಂದು ಕಹಿ ಗುಳಿಗೆ.