See also 2jam  3jam  4jam  5jam
1jam ಜ್ಯಾಮ್‍
ಕ್ರಿಯಾಪದ
(ವರ್ತಮಾನ ಕೃದಂತ jamming, ಭೂತರೂಪ ಮತ್ತು ಭೂತಕೃದಂತ jammed).
ಸಕರ್ಮಕ ಕ್ರಿಯಾಪದ
  1. (ಎರಡು ತಲಗಳ ಮಧ್ಯೆ ವಸ್ತುವನ್ನು) ಅಮುಕು; ಜಡಿ; ತುರುಕು; ಇರುಕು; ಅಡಕು.
  2. (ಯಂತ್ರ ಭಾಗವನ್ನು) ಕೆಲಸಕ್ಕೆ ಬಾರದಂತೆ – ಇರುಕಿಸು, ಅದುಮಿ ಬಿಡು, ಜಜ್ಜಿ ಬಿಡು.
  3. ಯಂತ್ರವನ್ನು ಅದುಮಿ ಬಿಟ್ಟು ಕೆಲಸ ಮಾಡದಂತೆ ಮಾಡು.
  4. (ವಸ್ತುಗಳು ಒತ್ತಾಗಿ ಮುದ್ದೆಯಾಗುವಂತೆ) ಅದುಮು; ಗಿಡಿ.
  5. (ವಸ್ತುವನ್ನು, ಇಕ್ಕಟ್ಟು ಜಾಗ ಮೊದಲಾದವುಗಳ ಒಳಕ್ಕೆ) ಬಲವಾಗಿ – ತಳ್ಳು, ತುರುಕು, ನೂಕು, ಗಿಡಿ, ಜಡಿ.
  6. (ಮಾರ್ಗ ಮೊದಲಾದವನ್ನು) ಕಿಕ್ಕಿರಿದು ತುಂಬಿ, ನೆರೆದು, ಸೇರಿ – ಅಡಚಿಬಿಡು, ಬಂದ್‍ ಮಾಡಿ ಬಿಡು. 7 (ರೇಡಿಯೋ) ಅದುಮು; ಇರುಕು; ಸಂಮರ್ದಿಸು (ಸಮಾನ ತರಂಗಾಂತರದಲ್ಲಿ ರೇಡಿಯೋ ಅಲೆಗಳನ್ನು ಪ್ರಸಾರ ಮಾಡಿ ಅನ್ಯರ ರೇಡಿಯೋ ಅಥವಾ ರೇಡಾರ್‍ ಸಂಕೇತಗಳನ್ನು) ಗಜಿಬಿಜಿ ಮಾಡು.
  7. ನಿರ್ಗಮನವನ್ನು – ತಡೆ, ನಿರೋಧಿಸು: we were jammed in ಹೊರಬರದಂತೆ ನಮ್ಮನ್ನು ತಡೆಯಲಾಯಿತು.
  8. (ಸಾಮಾನ್ಯವಾಗಿ jam on) (ಬ್ರೇಕುಗಳು ಮೊದಲಾದವುಗಳನ್ನು) ಬಲವಂತವಾಗಿ ಅಥವಾ ಇದ್ದಕ್ಕಿದ್ದಂತೆ – ಅಮುಕು, ಹಾಕು, ಒತ್ತು.
ಅಕರ್ಮಕ ಕ್ರಿಯಾಪದ
  1. (ಬೆಣೆ ಹಾಕಿದಂತೆ) ಬಿಗಿಯಾಗಿ ಸಿಕ್ಕಿಕೊ, ಇರುಕಿಕೊ, ಅಡಚಿಕೊ.
  2. (ಯಂತ್ರದ ವಿಷಯದಲ್ಲಿ) ಯಂತ್ರದ ಭಾಗವು ಅಡಚಿ(ಕೊಂಡಿರುವುದರಿಂದ) ಕೆಲಸ ಮಾಡದಂತೆ ಆಗಿರು.
  3. (ಜ್ಯಾಸ್‍ ಸಂಗೀತ). (ಆಡುಮಾತು) (ಹೊಸ ಲಯಗತಿಗಳನ್ನು ಸೇರಿಸಿಕೊಳ್ಳುತ್ತಾ) ಸಮಯ ಸ್ಫೂರ್ತಿಯಿಂದ ಹಾಡು; ತತ್ಕಾಲದ ಉತ್ಸಾಹದಿಂದ ಹಾಡು.