See also 2ill  3ill
1ill ಇಲ್‍
ಗುಣವಾಚಕ
( ತರರೂಪ worse, ತಮರೂಪ worst).
  1. (ಸಾಮಾನ್ಯವಾಗಿ ಆಖ್ಯಾತಕ ಪ್ರಯೋಗ) ಬೇನೆ ಬಿದ್ದ; ಅನಾರೋಗ್ಯದ; ಅಸ್ವಸ್ಥ; ಕಾಯಿಲೆಯ; ರೋಗಿಷ್ಠ; ರೋಗವುಳ್ಳ: he was ill ಅವನಿಗೆ ಕಾಯಿಲೆಯಾಯಿತು. he was taken ill with (of) disease ಅವನಿಗೆ ಆ ಬೇನೆಯಿಂದ ಅನಾರೋಗ್ಯವಾಯಿತು. ill with anxiety etc. ಚಿಂತೆ ಮೊದಲಾದವುಗಳಿಂದ ಬೇನೆ ಹಿಡಿದ.
  2. (ಆರೋಗ್ಯದ ವಿಷಯದಲ್ಲಿ) ನೆಟ್ಟಗಿಲ್ಲದ; ಸರಿಯಾಗಿಲ್ಲದ; ಕೆಟ್ಟುಹೋದ.
  3. ಅನೈತಿಕ; ನೀತಿಗೆಟ್ಟ; ಶೀಲಗೆಟ್ಟ; ಅನೀತಿಯ: ill fame ಕೆಟ್ಟ ಹೆಸರು; ದುರ್ಯಶಸ್ಸು.
  4. ದ್ವೇಷದ; ಹಗೆತನದಿಂದ ಕೂಡಿದ: ill blood, ill feeling, ill will ದ್ವೇಷ, ಹಗೆತನ.
  5. ಹಾನಿಕರ; ಅಪಾಯಕರ; ಕೆಡುಕು ಮಾಡುವ: ill effects ದುಷ್ಪರಿಣಾಮಗಳು.
  6. ಹಾಳಾದ; ಹೀನ; ಅನಿಷ್ಟ; ದರಿದ್ರ; ಅನರ್ಥದ; ಅನಾಹುತದ: ill fortune ಹೀನ ಅದೃಷ್ಟ.
  7. (ಪ್ರಾಚೀನ ಪ್ರಯೋಗ) ಕಷ್ಟವಾದ; ಪ್ರಯಾಸದ: ill to please ಮೆಚ್ಚಿಸಲು ಕಷ್ಟವಾದ.
  8. ದೋಷದಿಂದ ಕೂಡಿದ; ಲೋಪವುಳ್ಳ.
  9. ಜಾಣ್ಮೆಯಿಲ್ಲದ; ಚತುರತೆಯಿಲ್ಲದ; ಅನಿಪುಣ; ಅಕುಶಲ: ill taste ದುಷ್ಟಾಭಿರುಚಿ. ill management ಅಕುಶಲ ನಿರ್ವಹಣೆ.
  10. (ಮರ್ಯಾದೆ ಯಾ ನಡವಳಿಕೆಯ ವಿಷಯದಲ್ಲಿ) ತರವಲ್ಲದ; ತಗದ; ಸಲ್ಲದ; ಅಯೋಗ್ಯ; ಅಯುಕ್ತ; ಅನುಚಿತ.
ನುಡಿಗಟ್ಟು
  1. do an ill turn to (person) (ವ್ಯಕ್ತಿಗೆ ಯಾ ಅವನ ಹಿತಕ್ಕೆ) ಕೆಡುಕು ಮಾಡು; ಕೇಡು ಮಾಡು; ಹಾನಿ ತರು.
  2. fall (or be taken) ill ಕಾಯಿಲೆ ಬೀಳು.
  3. ill weeds grow apace ಕೆಟ್ಟ ಕಳೆ ಬಲು ಬೇಗ ಬೆಳೆಯುತ್ತದೆ; ಹಾನಿಕರವಾದುದು ಬಹಳ ಬೇಗ ಹರಡುತ್ತದೆ ಯಾ ಬೆಳೆಯುತ್ತದೆ.
  4. it’s an ill wind that blows nobody good ಯಾರಿಗೂ ಒಳ್ಳೆಯದನ್ನು ಮಾಡದ ಸಂಗತಿ ನಿಜವಾಗಿಯೂ ಬಹಳ ಕೆಟ್ಟದ್ದು.
  5. with an ill grace ಮುಖ ಗಂಟು ಹಾಕಿಕೊಂಡು; ಅಸಮಾಧಾನದಿಂದ; ಅಪ್ರಸನ್ನತೆಯಿಂದ.
See also 1ill  3ill
2ill ಇಲ್‍
ನಾಮವಾಚಕ
  1. ಕೇಡು; ಕೆಡುಕು; ಅನಿಷ್ಟ; ಅನರ್ಥ: the various ills of life ಬದುಕಿನ ಬಗೆಬಗೆಯ ಅನಿಷ್ಟಗಳು.
  2. ಹಾನಿ; ಕೆಡುಕು; ಅಪಾಯ: do ill ಹಾನಿಮಾಡು; ಕೇಡೆಣಿಸು; ಕೇಡು ಬಗೆ.
  3. (ಬಹುವಚನದಲ್ಲಿ) ಕೇಡುಗಳು; ಆಪತ್ತುಗಳು; ದುರದೃಷ್ಟಗಳು.
  4. (ಬಹುವಚನದಲ್ಲಿ) ರೋಗ; ಪಿಡುಗು (ರೂಪಕವಾಗಿ ಸಹ): social ills ಸಾಮಾಜಿಕ ಪಿಡುಗುಗಳು. ills of childhood ಬಾಲ್ಯದ ರೋಗರುಜಿನಗಳು.
ನುಡಿಗಟ್ಟು

speak ill of (ಯಾವುದೇ ವಿಷಯದಲ್ಲಿ) ಕೆಟ್ಟದ್ದನ್ನು ಆಡು, ನುಡಿ; ದೂಷಣೆಯ ಮಾತನಾಡು.

See also 1ill  2ill
3ill ಇಲ್‍
ಕ್ರಿಯಾವಿಶೇಷಣ
  1. ಕೆಟ್ಟದ್ದಾಗಿ; ಅಯೋಗ್ಯವಾಗಿ: behaved ill ಕೆಟ್ಟದಾಗಿ ವರ್ತಿಸಿದ.
  2. ಪ್ರತಿಕೂಲವಾಗಿ; ವಿರೋಧವಾಗಿ: it would have gone ill with him ಅವನಿಗೆ ಪ್ರತಿಕೂಲವಾಗುವುದರಲ್ಲಿತ್ತು.
  3. ಅತೃಪ್ತಿಕರವಾಗಿ; ಅಸಮರ್ಪಕವಾಗಿ.
  4. ಸಾಕಾಗದಂತೆ; ಸಾಲದಂತೆ: ill provided ಸಾಕಾದಷ್ಟು ಒದಗಿಸದ.
  5. ಅನುಚಿತವಾಗಿ; ತಕ್ಕದ್ದಲ್ಲದೆ; ಸರಿಯಾಗಿರದೆ; ಯುಕ್ತವಾಗಿರದೆ; ಯೋಗ್ಯವಲ್ಲದ ರೀತಿಯಲ್ಲಿ: it ill becomes him to speak ಅವನು ಮಾತನಾಡುವುದು ಅವನಿಗೆ ತಕ್ಕುದಲ್ಲ.
  6. ಸುಲಭಸಾಧ್ಯವಲ್ಲದೆ; ಪ್ರಯಾಸದಿಂದ; ಕಷ್ಟದಿಂದ; ದುಷ್ಕರವಾಗಿ; ದುಶ್ಶಕ್ಯವಾಗಿ: can ill afford to do it ಅದನ್ನು ಮಾಡುವುದು ಸುಲಭ ಸಾಧ್ಯವಿಲ್ಲ, ದುಷ್ಕರ.
ನುಡಿಗಟ್ಟು

ill at ease ಮುಜುಗರಗೊಂಡು; ಸಂಕೋಚದಿಂದ; ಕಸಿವಿಸಿಯಿಂದ; ಮನಸ್ಸಮಾಧಾನವಿಲ್ಲದೆ; ನೆಮ್ಮದಿಯಿಲ್ಲದೆ: they were ill at ease among strangers ಅಪರಿಚಿತರ ನಡುವೆ ಅವರು ಮುಜುಗರಪಟ್ಟುಕೊಂಡರು.

Ill
ಸಂಕ್ಷಿಪ್ತ

Illinois.