See also 2ill  3ill
1ill ಇಲ್‍
ಗುಣವಾಚಕ
( ತರರೂಪ worse, ತಮರೂಪ worst).
  1. (ಸಾಮಾನ್ಯವಾಗಿ ಆಖ್ಯಾತಕ ಪ್ರಯೋಗ) ಬೇನೆ ಬಿದ್ದ; ಅನಾರೋಗ್ಯದ; ಅಸ್ವಸ್ಥ; ಕಾಯಿಲೆಯ; ರೋಗಿಷ್ಠ; ರೋಗವುಳ್ಳ: he was ill ಅವನಿಗೆ ಕಾಯಿಲೆಯಾಯಿತು. he was taken ill with (of) disease ಅವನಿಗೆ ಆ ಬೇನೆಯಿಂದ ಅನಾರೋಗ್ಯವಾಯಿತು. ill with anxiety etc. ಚಿಂತೆ ಮೊದಲಾದವುಗಳಿಂದ ಬೇನೆ ಹಿಡಿದ.
  2. (ಆರೋಗ್ಯದ ವಿಷಯದಲ್ಲಿ) ನೆಟ್ಟಗಿಲ್ಲದ; ಸರಿಯಾಗಿಲ್ಲದ; ಕೆಟ್ಟುಹೋದ.
  3. ಅನೈತಿಕ; ನೀತಿಗೆಟ್ಟ; ಶೀಲಗೆಟ್ಟ; ಅನೀತಿಯ: ill fame ಕೆಟ್ಟ ಹೆಸರು; ದುರ್ಯಶಸ್ಸು.
  4. ದ್ವೇಷದ; ಹಗೆತನದಿಂದ ಕೂಡಿದ: ill blood, ill feeling, ill will ದ್ವೇಷ, ಹಗೆತನ.
  5. ಹಾನಿಕರ; ಅಪಾಯಕರ; ಕೆಡುಕು ಮಾಡುವ: ill effects ದುಷ್ಪರಿಣಾಮಗಳು.
  6. ಹಾಳಾದ; ಹೀನ; ಅನಿಷ್ಟ; ದರಿದ್ರ; ಅನರ್ಥದ; ಅನಾಹುತದ: ill fortune ಹೀನ ಅದೃಷ್ಟ.
  7. (ಪ್ರಾಚೀನ ಪ್ರಯೋಗ) ಕಷ್ಟವಾದ; ಪ್ರಯಾಸದ: ill to please ಮೆಚ್ಚಿಸಲು ಕಷ್ಟವಾದ.
  8. ದೋಷದಿಂದ ಕೂಡಿದ; ಲೋಪವುಳ್ಳ.
  9. ಜಾಣ್ಮೆಯಿಲ್ಲದ; ಚತುರತೆಯಿಲ್ಲದ; ಅನಿಪುಣ; ಅಕುಶಲ: ill taste ದುಷ್ಟಾಭಿರುಚಿ. ill management ಅಕುಶಲ ನಿರ್ವಹಣೆ.
  10. (ಮರ್ಯಾದೆ ಯಾ ನಡವಳಿಕೆಯ ವಿಷಯದಲ್ಲಿ) ತರವಲ್ಲದ; ತಗದ; ಸಲ್ಲದ; ಅಯೋಗ್ಯ; ಅಯುಕ್ತ; ಅನುಚಿತ.
ನುಡಿಗಟ್ಟು
  1. do an ill turn to (person) (ವ್ಯಕ್ತಿಗೆ ಯಾ ಅವನ ಹಿತಕ್ಕೆ) ಕೆಡುಕು ಮಾಡು; ಕೇಡು ಮಾಡು; ಹಾನಿ ತರು.
  2. fall (or be taken) ill ಕಾಯಿಲೆ ಬೀಳು.
  3. ill weeds grow apace ಕೆಟ್ಟ ಕಳೆ ಬಲು ಬೇಗ ಬೆಳೆಯುತ್ತದೆ; ಹಾನಿಕರವಾದುದು ಬಹಳ ಬೇಗ ಹರಡುತ್ತದೆ ಯಾ ಬೆಳೆಯುತ್ತದೆ.
  4. it’s an ill wind that blows nobody good ಯಾರಿಗೂ ಒಳ್ಳೆಯದನ್ನು ಮಾಡದ ಸಂಗತಿ ನಿಜವಾಗಿಯೂ ಬಹಳ ಕೆಟ್ಟದ್ದು.
  5. with an ill grace ಮುಖ ಗಂಟು ಹಾಕಿಕೊಂಡು; ಅಸಮಾಧಾನದಿಂದ; ಅಪ್ರಸನ್ನತೆಯಿಂದ.