See also 2home  3home  4home
1home ಹೋಮ್‍
ನಾಮವಾಚಕ
  1. ಬಿಡಾರ; ನಿವಾಸ; ಬೀಡು; ವಸತಿ; ವಾಸಸ್ಥಾನ.
  2. ತಾಯಿನಾಡು; ಸ್ವದೇಶ; ಜನ್ಮಭೂಮಿ.
  3. ಮನೆ; ಹ.
  4. ಆಗರ; ನೆಲೆ; ತವರು; ಯಾವುದೇ ವಸ್ತುವಿನ ನೆಲೆಯಾದ ಯಾ ಅದು ವಿಶೇಷವಾಗಿ ದೊರೆಯುವ ಸ್ಥಳ.
  5. ಅನಾಥಾಶ್ರಮ; ಅಶಕ್ತರ ಪೋಷಣಾಲಯ; ಅನಾಥರ ಯಾ ಅಶಕ್ತರ ಪೋಷಣಾಲಯ: children’s home ಶಿಶುಹ; ಬಾಲಭವನ; ಮಕ್ಕಳನ್ನು ನೋಡಿಕೊಳ್ಳುವ ಸ್ಥಳ.
  6. (ಆಡುಮಾತು) ಹುಚ್ಚಾಸ್ಪತ್ರೆ; ಮನೋರೋಗಾಲಯ; ಮನೋರೋಗಿಗಳನ್ನು ನೋಡಿಕೊಳ್ಳುವ, ಚಿಕಿತ್ಸೆ ಮಾಡುವ ಸ್ಥಳ:you ought to be in a home ನೀನು ಹುಚ್ಚಾಸ್ಪತ್ರೆಯಲ್ಲಿರಬೇಕಾಗಿತ್ತು.
  7. (ಓಟದ ಪಂದ್ಯ, ರೇಸು, ಮೊದಲಾದ ಆಟಗಳಲ್ಲಿ) ಗುರಿ (ದಾಣ); ತಲುಪಬೇಕಾದ ಜಾಗ; ಪ್ರಾಪ್ಯಸ್ಥಾನ; ತಲುಪುದಾಣ.
  8. (ಲಕ್ರೋಸ್‍ ಆಟದಲ್ಲಿ) ಎದುರಾಳಿಗಳ ಗೋಲಿನ ಬಳಿ ಗೋಲು ಹೊಡೆಯಬಹುದಾದ ಮೂರು ಸ್ಥಾನಗಳಲ್ಲಿ ಒಂದು ಯಾ ಅದರಲ್ಲಿರುವ ಆಟಗಾರ.
  9. ಸ್ವಸ್ಥಳ – ಪಂದ್ಯ ಯಾ ವಿಜಯ; ಸ್ವಸ್ಥಳದ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ಯಾ ಅದರಲ್ಲಿ ಗಳಿಸಿದ ವಿಜಯ.
ಪದಗುಚ್ಛ
  1. a home from home ಮನೆಯೆನಿಸುವ ಮನೆ; ಸ್ವಂತ ಮನೆಯೆಂದೇ ಭಾವಿಸಬಹುದಾದ, ಮನೆಯ ಅನುಕೂಲಗಳನ್ನೆಲ್ಲ ಒದಗಿಸುವ ಬೇರೊಬ್ಬರ ಮನೆ, ವಸತಿ.
  2. at-home
    1. ಭೇಟಿ ವೇಳೆ; ಮನೆಯ ಯಜಮಾನ ಯಾ ಯಜಮಾನತಿ ಭೇಟಿಗಾರರನ್ನು ನೋಡಲು ಸಿದ್ಧವಾಗಿರುವುದಾಗಿ ತಿಳಿಸಿದ, ಗೊತ್ತುಪಡಿಸಿದ ಕಾಲ.
    2. ಉಪಾಹಾರ ಯಾ ಭೋಜನ – ಕೂಟ, ಸಮಾರಂಭ; ಒಂದು ನಿರ್ದಿಷ್ಟ ಸಮಯಕ್ಕೆ ಬರುವಂತೆ ಅತಿಥಿಗಳನ್ನು ಮನೆಗೆ ಆಹ್ವಾನಿಸಿರುವ ಉಪಾಹಾರ ಯಾ ಭೋಜನ ಕೂಟ.
  3. home of lost causes (ಇಂಗ್ಲೆಂಡಿನ) ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯ.
  4. long (or last) home ಗೋರಿ; ಸಮಾಧಿ.
  5. not at home (to) ಭೇಟಿ ಮಾಡಲಾಗುವುದಿಲ್ಲ; ಭೇಟಿಗೆ ಸಿದ್ಧವಿಲ್ಲ; ನೋಡಲು ಅವಕಾಶವಿಲ್ಲ.
ನುಡಿಗಟ್ಟು
  1. at home:
    1. (ತನ್ನ) ಮನೆಯಲ್ಲಿ ನೋಡಲು ಯಾ ಭೇಟಿ ನೀಡಲು ಸಿದ್ಧರಾಗಿ; ಭೇಟೆಗಾರರಿಗೆ ದೊರೆಯುವವನಾಗಿ: tell him I am not at home ನಾನು ಭೇಟಿ ಕೊಡಲು ಆಗುವುದಿಲ್ಲ ಎಂದು ಅವನಿಗೆ ತಿಳಿಸು.
    2. ತಾಯಿನಾಡಿನಲ್ಲಿ; ಸ್ವದೇಶದಲ್ಲಿ.
    3. (ಸ್ವಂತ ಮನೆಯಲ್ಲಿರುವಂತೆಯೇ) ಹಾಯಾಗಿ; ಆರಾಮಾಗಿ; ನಿಸ್ಸಂಕೋಚವಾಗಿ; ನಿರಾತಂಕವಾಗಿ: she makes every one feel at home ಅವಳು ಪ್ರತಿಯೊಬ್ಬರೂ ಸಂಕೋಚ ಪಟ್ಟುಕೊಳ್ಳದೆ ಇರುವಂತೆ ಮಾಡುತ್ತಾಳೆ.
    4. (ವಿಷಯ ಮೊದಲಾದವುಗಳಲ್ಲಿ) ಒಳ್ಳೆಯ ವ್ಯಾಪ್ತಿ ಪಡೆದವನಾಗಿ; ಚೆನ್ನಾಗಿ ತಿಳಿದವನಾಗಿ; ಬಲ್ಲವನಾಗಿ; ಪರಿಶ್ರಮವುಳ್ಳವನಾಗಿ; ಪರಿಣತಿಯುಳ್ಳವನಾಗಿ: at home in the languages ಭಾಷೆಗಳಲ್ಲಿ ಒಳ್ಳೆಯ ಪರಿಣತಿಯುಳ್ಳವನಾಗಿ.
  2. near home
    1. ತನ್ನ ಮನೆಗೆ ಯಾ ದೇಶಕ್ಕೆ ಹತ್ತಿರವಾಗಿರುವ.
    2. ತನಗೆ ಹತ್ತಿರ ಸಂಬಂಧದ, ನಿಕಟವಾಗಿ ಸಂಬಂಧಿಸಿದ; ತನ್ನ ಮೇಲೆ ನಿಕಟ ಪರಿಣಾಮ ಉಂಟುಮಾಡುವ.
See also 1home  3home  4home
2home ಹೋಮ್‍
ಗುಣವಾಚಕ
  1. ಮನೆಯ; ಹದ; ಮನೆಗೆ ಸಂಬಂಧಿಸಿದ: home necessities ಮನೆಯ ಆವಶ್ಯಕತೆಗಳು.
  2. ಮನೆಯಲ್ಲಿ – ನಡೆಸುವ, ಮಾಡುವ, ತಯಾರಿಸುವ; ಹೋತ್ಪನ್ನ; ಮನೆಯಲ್ಲಿ ಉತ್ಪನ್ನವಾದ: home sports ಹ ಕ್ರೀಡೆಗಳು; ಮನೆಯಾಟಗಳು; ಮನೆಯೊಳಗೆ ಆಡುವ ಆಟಗಳು.
  3. ತವರಿನ; ಸ್ವಂತ ಊರಿನ ಯಾ ಪ್ರದೇಶದ: home team ಸ್ಥಳೀಯ, ತನ್ನೂರಿನ, ತವರೂರಿನ – ತಂಡ.
  4. (ಮನೆಯ) ಅಕ್ಕಪಕ್ಕದಲ್ಲಿಯ: home meadow ಮನೆಯ ಬಳಿಯ, ಮಗ್ಗುಲಿನ ಹುಲ್ಲುಗಾವಲು.
  5. ಸ್ವದೇಶಿ; ಸ್ವದೇಶದಲ್ಲಿ – ನಡೆಯುವ, ತಯಾರಾದ: home products ಸ್ವದೇಶಿ ಉತ್ಪನ್ನಗಳುhome industries ಸ್ವದೇಶಿ ಕೈಗಾರಿಕೆಗಳು.
  6. (ದೇಶದ) ಹಾಡಳಿತದ; ಒಳಾಡಳಿತಕ್ಕೆ ಸಂಬಂಧಿಸಿದ; ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿದ.
  7. ಹತ್ಯದ; ವ್ಯಕ್ತಿಯ ಮನೆಯ ವ್ಯವಹಾರಕ್ಕೆ ಸಂಬಂಧಿಸಿದ.
  8. ಮನಸ್ಸಿಗೆ ತಟ್ಟುವ; ಮನನಾಟುವ; ಮನ ಚುಚ್ಚುವ: home question ಮನಸ್ಸಿಗೆ ತಟ್ಟುವ ಪ್ರಶ್ನೆhome truth ಸತ್ಯಾಂಶ; ತೀಕ್ಷ್ಣವಾಗಿ ಮನತಾಕುವ ಸತ್ಯವಚನhome thrust ಮನ ಚುಚ್ಚುವ ಮಾತು; ಚುಚ್ಚುನುಡಿ; ಕೂರ್ನುಡಿ.
  9. (ಆಟಗಳ ವಿಷಯದಲ್ಲಿ) ಸ್ವಂತ ಊರು, ಸ್ಥಳ, ಮೈದಾನ, ಮೊದಲಾದವುಗಳಲ್ಲಿ ಆಡಿದ ಪಂದ್ಯhome win ಸ್ವಂತ ಊರಿನಲ್ಲಿ ಪಡೆದ ವಿಜಯ.
ಪದಗುಚ್ಛ

the home trade (or market) ಅಂತರ್ದೇಶೀಯ, ಒಳದೇಶದ – ವ್ಯಾಪಾರ ಯಾ ಗಿರಾಕಿ.

See also 1home  2home  4home
3home ಹೋಮ್‍
ಕ್ರಿಯಾವಿಶೇಷಣ
  1. (ತನ್ನ) ಮನೆಗೆ ಯಾ ಸ್ವದೇಶಕ್ಕೆ: come home (or go home) ಮನೆಗೆ ಯಾ ಸ್ವದೇಶಕ್ಕೆ – ಬಾ (ಯಾ ಹೋಗು).
  2. ಮನೆಗೆ, ನಾಡಿಗೆ, ಬಂದು – ಸೇರಿ, ತಲುಪಿ; ಮರಳಿ ಬಂದು: he is home ಮನೆಗೆ ಹಿಂತಿರುಗಿದ್ದಾನೆ; ಸ್ವದೇಶಕ್ಕೆ ಬಂದಿದ್ದಾನೆ.
  3. ಗುರಿಮುಟ್ಟುವಂತೆ; ನೇರವಾಗಿ ಒಳಕ್ಕೆ ನಾಟುವಂತೆ: the thrust went home (ಮಾತಿನ ಇರಿತ) ಚೆನ್ನಾಗಿ (ಮನಸ್ಸಿಗೆ, ಎದೆಗೆ) ನಾಟಿತು, ಚುಚ್ಚಿತು.
  4. ಸಾಧ್ಯವಾದಷ್ಟು; ಎಷ್ಟು ಒಳಕ್ಕೆ ಸಾಧ್ಯವೋ ಅಷ್ಟು: drive a nail home ಮೊಳೆಯನ್ನು ಸಾಧ್ಯವಾದಷ್ಟೂ ಒಳಕ್ಕೆ ಹೊಡೆ.
  5. (ಅಮೆರಿಕನ್‍ ಪ್ರಯೋಗ) ಮನೆಯಲ್ಲಿ: stay home ಮನೆಯಲ್ಲೇ ಇರು, ಉಳಿದುಕೊಂಡಿರು; ಮನೆಯಿಂದಾಚೆ ಹೋಗದಿರು.
ನುಡಿಗಟ್ಟು
  1. bring charge home to (person) (ಒಬ್ಬನಿಗೆ) ಅಪರಾಧವನ್ನು ಮನಗಾಣಿಸು, ಖಚಿತವಾಗಿ ರುಜುವಾತು ಪಡಿಸು.
  2. come home to ಮನಸ್ಸಿಗೆ – ನಾಟು, ಹಿಡಿ, ಅರ್ಥವಾಗು.
  3. come home to roost.
  4. home and dry ತನ್ನ ಉದ್ದೇಶವನ್ನು ಪೂರೈಸಿಕೊಂಡು, ಸಾಧಿಸಿಕೊಂಡು.
  5. nothing to write home about (ಆಡುಮಾತು) ರೆಯುವಂಧಥದ್ದು ಏನೂ ಇಲ್ಲ; ವಿಶೇಷವಾದದ್ದು, ಅಪೂರ್ವವಾದದ್ದು, ಅತಿಶಯವಾದದ್ದು – ಏನೂ ಇಲ್ಲ; ಹಾಡಿ ಹೊಗಳುವಂಥದ್ದು, ಪ್ರಶಂಸೆ ಮಾಡುವಂಥದ್ದು, ವಿಶೇಷವಾಗಿ ವರ್ಣಿಸುವಂಥದು – ಇಲ್ಲ: the town was nothing to write home about ಆ ಊರಿನ ವಿಷಯವಾಗಿ ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ (ಹಾಡಿ ಹೊಗಳುವಂಥದ್ದೇನೂ ಇರಲಿಲ್ಲ).
  6. press one’s advantage home (ಸ್ಪರ್ಧೆ, ವಾದ, ಮೊದಲಾದವುಗಳಲ್ಲಿ) ತಾನು ಮೇಲುಗೈ ಆಗಿರುವ ಅವಕಾಶವನ್ನು ಪೂರ್ತಿ ಬಳಸಿಕೊ.
See also 1home  2home  3home
4home ಹೋಮ್‍
ಸಕರ್ಮಕ ಕ್ರಿಯಾಪದ
  1. ಮನೆಗೆ ಹಿಂದಿರುಗಿಸು; ವಾಪಸು ತರು.
  2. (ಒಬ್ಬನಿಗೆ) ಮನೆ, ವಸತಿ – ಒದಗಿಸು, ಮಾಡಿಕೊಡು.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ತರಬೇತಾದ ಪಾರಿವಾಳದ ವಿಷಯದಲ್ಲಿ) ಮನೆಗೆ ವಾಪಸಾಗು; ಹಿಂದಿರುಗಿ ಮನೆಗೆ ಹೋಗು.
  2. (ಹಡಗು, ಕ್ಷಿಪಣಿ, ಮೊದಲಾದವುಗಳ ವಿಷಯದಲ್ಲಿಗುರುತು ನೆಲ, ರೇಡಿಯೋ ತರಂಗ, ಮೊದಲಾದವುಗಳಿಂದ) ಗುರಿಗೆ ನಿರ್ದೇಶಿತವಾಗು; ಗುರಿ – ತಲುಪು(ವಂತಾಗು), ಮುಟ್ಟು(ವಂತಾಗು).
ಪದಗುಚ್ಛ