See also 2home  3home  4home
1home ಹೋಮ್‍
ನಾಮವಾಚಕ
  1. ಬಿಡಾರ; ನಿವಾಸ; ಬೀಡು; ವಸತಿ; ವಾಸಸ್ಥಾನ.
  2. ತಾಯಿನಾಡು; ಸ್ವದೇಶ; ಜನ್ಮಭೂಮಿ.
  3. ಮನೆ; ಹ.
  4. ಆಗರ; ನೆಲೆ; ತವರು; ಯಾವುದೇ ವಸ್ತುವಿನ ನೆಲೆಯಾದ ಯಾ ಅದು ವಿಶೇಷವಾಗಿ ದೊರೆಯುವ ಸ್ಥಳ.
  5. ಅನಾಥಾಶ್ರಮ; ಅಶಕ್ತರ ಪೋಷಣಾಲಯ; ಅನಾಥರ ಯಾ ಅಶಕ್ತರ ಪೋಷಣಾಲಯ: children’s home ಶಿಶುಹ; ಬಾಲಭವನ; ಮಕ್ಕಳನ್ನು ನೋಡಿಕೊಳ್ಳುವ ಸ್ಥಳ.
  6. (ಆಡುಮಾತು) ಹುಚ್ಚಾಸ್ಪತ್ರೆ; ಮನೋರೋಗಾಲಯ; ಮನೋರೋಗಿಗಳನ್ನು ನೋಡಿಕೊಳ್ಳುವ, ಚಿಕಿತ್ಸೆ ಮಾಡುವ ಸ್ಥಳ:you ought to be in a home ನೀನು ಹುಚ್ಚಾಸ್ಪತ್ರೆಯಲ್ಲಿರಬೇಕಾಗಿತ್ತು.
  7. (ಓಟದ ಪಂದ್ಯ, ರೇಸು, ಮೊದಲಾದ ಆಟಗಳಲ್ಲಿ) ಗುರಿ (ದಾಣ); ತಲುಪಬೇಕಾದ ಜಾಗ; ಪ್ರಾಪ್ಯಸ್ಥಾನ; ತಲುಪುದಾಣ.
  8. (ಲಕ್ರೋಸ್‍ ಆಟದಲ್ಲಿ) ಎದುರಾಳಿಗಳ ಗೋಲಿನ ಬಳಿ ಗೋಲು ಹೊಡೆಯಬಹುದಾದ ಮೂರು ಸ್ಥಾನಗಳಲ್ಲಿ ಒಂದು ಯಾ ಅದರಲ್ಲಿರುವ ಆಟಗಾರ.
  9. ಸ್ವಸ್ಥಳ – ಪಂದ್ಯ ಯಾ ವಿಜಯ; ಸ್ವಸ್ಥಳದ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ಯಾ ಅದರಲ್ಲಿ ಗಳಿಸಿದ ವಿಜಯ.
ಪದಗುಚ್ಛ
  1. a home from home ಮನೆಯೆನಿಸುವ ಮನೆ; ಸ್ವಂತ ಮನೆಯೆಂದೇ ಭಾವಿಸಬಹುದಾದ, ಮನೆಯ ಅನುಕೂಲಗಳನ್ನೆಲ್ಲ ಒದಗಿಸುವ ಬೇರೊಬ್ಬರ ಮನೆ, ವಸತಿ.
  2. at-home
    1. ಭೇಟಿ ವೇಳೆ; ಮನೆಯ ಯಜಮಾನ ಯಾ ಯಜಮಾನತಿ ಭೇಟಿಗಾರರನ್ನು ನೋಡಲು ಸಿದ್ಧವಾಗಿರುವುದಾಗಿ ತಿಳಿಸಿದ, ಗೊತ್ತುಪಡಿಸಿದ ಕಾಲ.
    2. ಉಪಾಹಾರ ಯಾ ಭೋಜನ – ಕೂಟ, ಸಮಾರಂಭ; ಒಂದು ನಿರ್ದಿಷ್ಟ ಸಮಯಕ್ಕೆ ಬರುವಂತೆ ಅತಿಥಿಗಳನ್ನು ಮನೆಗೆ ಆಹ್ವಾನಿಸಿರುವ ಉಪಾಹಾರ ಯಾ ಭೋಜನ ಕೂಟ.
  3. home of lost causes (ಇಂಗ್ಲೆಂಡಿನ) ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯ.
  4. long (or last) home ಗೋರಿ; ಸಮಾಧಿ.
  5. not at home (to) ಭೇಟಿ ಮಾಡಲಾಗುವುದಿಲ್ಲ; ಭೇಟಿಗೆ ಸಿದ್ಧವಿಲ್ಲ; ನೋಡಲು ಅವಕಾಶವಿಲ್ಲ.
ನುಡಿಗಟ್ಟು
  1. at home:
    1. (ತನ್ನ) ಮನೆಯಲ್ಲಿ ನೋಡಲು ಯಾ ಭೇಟಿ ನೀಡಲು ಸಿದ್ಧರಾಗಿ; ಭೇಟೆಗಾರರಿಗೆ ದೊರೆಯುವವನಾಗಿ: tell him I am not at home ನಾನು ಭೇಟಿ ಕೊಡಲು ಆಗುವುದಿಲ್ಲ ಎಂದು ಅವನಿಗೆ ತಿಳಿಸು.
    2. ತಾಯಿನಾಡಿನಲ್ಲಿ; ಸ್ವದೇಶದಲ್ಲಿ.
    3. (ಸ್ವಂತ ಮನೆಯಲ್ಲಿರುವಂತೆಯೇ) ಹಾಯಾಗಿ; ಆರಾಮಾಗಿ; ನಿಸ್ಸಂಕೋಚವಾಗಿ; ನಿರಾತಂಕವಾಗಿ: she makes every one feel at home ಅವಳು ಪ್ರತಿಯೊಬ್ಬರೂ ಸಂಕೋಚ ಪಟ್ಟುಕೊಳ್ಳದೆ ಇರುವಂತೆ ಮಾಡುತ್ತಾಳೆ.
    4. (ವಿಷಯ ಮೊದಲಾದವುಗಳಲ್ಲಿ) ಒಳ್ಳೆಯ ವ್ಯಾಪ್ತಿ ಪಡೆದವನಾಗಿ; ಚೆನ್ನಾಗಿ ತಿಳಿದವನಾಗಿ; ಬಲ್ಲವನಾಗಿ; ಪರಿಶ್ರಮವುಳ್ಳವನಾಗಿ; ಪರಿಣತಿಯುಳ್ಳವನಾಗಿ: at home in the languages ಭಾಷೆಗಳಲ್ಲಿ ಒಳ್ಳೆಯ ಪರಿಣತಿಯುಳ್ಳವನಾಗಿ.
  2. near home
    1. ತನ್ನ ಮನೆಗೆ ಯಾ ದೇಶಕ್ಕೆ ಹತ್ತಿರವಾಗಿರುವ.
    2. ತನಗೆ ಹತ್ತಿರ ಸಂಬಂಧದ, ನಿಕಟವಾಗಿ ಸಂಬಂಧಿಸಿದ; ತನ್ನ ಮೇಲೆ ನಿಕಟ ಪರಿಣಾಮ ಉಂಟುಮಾಡುವ.