See also 1home  2home  4home
3home ಹೋಮ್‍
ಕ್ರಿಯಾವಿಶೇಷಣ
  1. (ತನ್ನ) ಮನೆಗೆ ಯಾ ಸ್ವದೇಶಕ್ಕೆ: come home (or go home) ಮನೆಗೆ ಯಾ ಸ್ವದೇಶಕ್ಕೆ – ಬಾ (ಯಾ ಹೋಗು).
  2. ಮನೆಗೆ, ನಾಡಿಗೆ, ಬಂದು – ಸೇರಿ, ತಲುಪಿ; ಮರಳಿ ಬಂದು: he is home ಮನೆಗೆ ಹಿಂತಿರುಗಿದ್ದಾನೆ; ಸ್ವದೇಶಕ್ಕೆ ಬಂದಿದ್ದಾನೆ.
  3. ಗುರಿಮುಟ್ಟುವಂತೆ; ನೇರವಾಗಿ ಒಳಕ್ಕೆ ನಾಟುವಂತೆ: the thrust went home (ಮಾತಿನ ಇರಿತ) ಚೆನ್ನಾಗಿ (ಮನಸ್ಸಿಗೆ, ಎದೆಗೆ) ನಾಟಿತು, ಚುಚ್ಚಿತು.
  4. ಸಾಧ್ಯವಾದಷ್ಟು; ಎಷ್ಟು ಒಳಕ್ಕೆ ಸಾಧ್ಯವೋ ಅಷ್ಟು: drive a nail home ಮೊಳೆಯನ್ನು ಸಾಧ್ಯವಾದಷ್ಟೂ ಒಳಕ್ಕೆ ಹೊಡೆ.
  5. (ಅಮೆರಿಕನ್‍ ಪ್ರಯೋಗ) ಮನೆಯಲ್ಲಿ: stay home ಮನೆಯಲ್ಲೇ ಇರು, ಉಳಿದುಕೊಂಡಿರು; ಮನೆಯಿಂದಾಚೆ ಹೋಗದಿರು.
ನುಡಿಗಟ್ಟು
  1. bring charge home to (person) (ಒಬ್ಬನಿಗೆ) ಅಪರಾಧವನ್ನು ಮನಗಾಣಿಸು, ಖಚಿತವಾಗಿ ರುಜುವಾತು ಪಡಿಸು.
  2. come home to ಮನಸ್ಸಿಗೆ – ನಾಟು, ಹಿಡಿ, ಅರ್ಥವಾಗು.
  3. come home to roost.
  4. home and dry ತನ್ನ ಉದ್ದೇಶವನ್ನು ಪೂರೈಸಿಕೊಂಡು, ಸಾಧಿಸಿಕೊಂಡು.
  5. nothing to write home about (ಆಡುಮಾತು) ರೆಯುವಂಧಥದ್ದು ಏನೂ ಇಲ್ಲ; ವಿಶೇಷವಾದದ್ದು, ಅಪೂರ್ವವಾದದ್ದು, ಅತಿಶಯವಾದದ್ದು – ಏನೂ ಇಲ್ಲ; ಹಾಡಿ ಹೊಗಳುವಂಥದ್ದು, ಪ್ರಶಂಸೆ ಮಾಡುವಂಥದ್ದು, ವಿಶೇಷವಾಗಿ ವರ್ಣಿಸುವಂಥದು – ಇಲ್ಲ: the town was nothing to write home about ಆ ಊರಿನ ವಿಷಯವಾಗಿ ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ (ಹಾಡಿ ಹೊಗಳುವಂಥದ್ದೇನೂ ಇರಲಿಲ್ಲ).
  6. press one’s advantage home (ಸ್ಪರ್ಧೆ, ವಾದ, ಮೊದಲಾದವುಗಳಲ್ಲಿ) ತಾನು ಮೇಲುಗೈ ಆಗಿರುವ ಅವಕಾಶವನ್ನು ಪೂರ್ತಿ ಬಳಸಿಕೊ.