See also 2head  3head
1head ಹೆಡ್‍
ನಾಮವಾಚಕ
  1. (ಮನುಷ್ಯ ಯಾ ಪ್ರಾಣಿಯ) ತಲೆ; ಮಂಡೆ; ಶಿರ; ಶಿರಸ್ಸು; ರುಂಡ.
  2. ತಲೆ; ಬುದ್ಧಿ; ಬುದ್ಧಿಯ, ಕಲ್ಪನೆಯ – ನೆಲೆ: created out of his own head ಅವನ ಸ್ವಂತ ತಲೆಯಿಂದಲೇ, ಕಲ್ಪನೆಯಿಂದಲೇ ಸೃಷ್ಟಿಸಿದ್ದು.
  3. ತಲೆ; ಸಹಜವಾದ ಮನಃಪ್ರವೃತ್ತಿ ಯಾ ಬುದ್ಧಿಕೌಶಲ: a good head for business ವ್ಯವಹಾರ ನಡೆಸುವುದರಲ್ಲಿ ಚುರುಕಾದ ತಲೆ, ಬುದ್ಧಿ.
  4. (ಆಡುಮಾತು) (ಮುಖ್ಯವಾಗಿ ಏಟಿನ ಯಾ ಕುಡಿದು ಅಮಲೇರಿದ್ದರ ಫಲವಾಗಿ ಬರುವ) ತಲೆ – ನೋವು, ಶೂಲೆ.
  5. (ಆಕಾರ, ಸ್ಥಾನ ಯಾ ರಚನೆಯಲ್ಲಿ) ಶಿರ; ತಲೆ; ತಲೆಯಂಥ ಭಾಗ, ಮುಖ್ಯವಾಗಿ:
    1. ಆಯುಧದ ಕತ್ತರಿಸುವ ಯಾ ಹೊಡೆಯುವ ಭಾಗ.
    2. ಮೊಳೆಯ ತಲೆ; ಮೊಳೆಯ ಚಪ್ಪಟೆ ಭಾಗ.
    3. ಕಂಬ ಯಾ ಸ್ತಂಭದ ಆಲಂಕಾರಿಕ ಮೇಲ್ಭಾಗ ಯಾ ಅಗ್ರ.
    4. (ಸಸ್ಯಗಳ ವಿಷಯದಲ್ಲಿ) ತಲೆ; ಗೊಂಡೆ; ಗುಚ್ಛ; ಗೊಂಚಲು; ಕಾಂಡದ ಮೇಲ್ತುದಿಯಲ್ಲಿರುವ ಎಲೆ ಯಾ ಹೂಗಳ ಒತ್ತಾದ ಗುಂಪು: a fine head of cabbage ಎಲೆಕೋಸಿಸ ಒಳ್ಳೆಯ ಗೊಂಡೆa flower head ಹೂಗೊಂಡೆ; ಪುಷ್ಪಗುಚ್ಛ.
    5. ಪೀಪಾಯಿ ಮೊದಲಾದವುಗಳ ತಲೆ, ಚಪ್ಪಟೆಯ ಭಾಗ.
    6. ಬಿಯರು ಮೊದಲಾದವುಗಳ (ಲೋಟದ ಮೇಲ್ಭಾಗದಲ್ಲಿ ಕಟ್ಟಿಕೊಳ್ಳುವ) ನೊರೆ, ಬುರುಗು.
    7. (ಕಿಟಕಿ, ಬಾಗಿಲು, ಮೊದಲಾದವುಗಳ) ಚೌಕಟ್ಟುಗಳ ಮೇಲಿನ ಅಡ್ಡಪಟ್ಟಿ.
  6. ಪ್ರಾಣ; ಜೀವ; ತಲೆ; ಶಿರ: it cost him his head ಅದು ಅವನ ತಲೆಗೆ, ಪ್ರಾಣಕ್ಕೆ ಸಂಚಕಾರ ತಂದಿತು.
  7. ಅಧಿಪತಿ; ರಾಜ; ನಾಯಕ; ಯಜಮಾನ: head of the family ಕುಟುಂಬದ ಯಜಮಾನhead of the state ರಾಜ; ರಾಜ್ಯಾಧಿಪತಿ.
  8. ಮುಖಂಡ; ನಾಯಕ; ತಲೆಯಾಳು; ಮುಖ್ಯಸ್ಥ; ಮುಂದಾಳು.
  9. (ಕಾಲೇಜಿನ) ಅಧ್ಯಕ್ಷ; ಪ್ರಧಾನಾಧಿಕಾರಿ; ಪ್ರಾಂಶುಪಾಲ.
  10. (ಶಾಲೆಯ) ಮುಖ್ಯೋಪಾಧ್ಯಾಯ.
  11. ನಾಯಕ ಸ್ಥಾನ; ಅಧಿಪತಿ: at the head of ಅಧಿಪತಿಯಾಗಿ; ನಾಯಕನಾಗಿ; ತಲೆಯಾಳಾಗಿ.
  12. (ಮೆರವಣಿಗೆ, ಸೈನ್ಯ, ಸಾಲು, ಮೊದಲಾದವುಗಳ) ಮುಂಭಾಗ: ಮುಂಚೂಣಿ; ಅಗ್ರ(ಭಾಗ).
  13. (ಹಾಸಿಗೆ, ಮಂಚ, ಗೋರಿ ಮೊದಲಾದವುಗಳ) ತಲೆಭಾಗ; ತಲೆಯಿಡುವ ಭಾಗ.
  14. (ಮೇಜಿನ) ಅಗ್ರಭಾಗ; ಮೇಲ್ಭಾಗ.
  15. (ಮೆಟ್ಟಿಲು ಸಾಲು, ಪುಸ್ತಕದ ಪುಟ, ಧ್ವಜ ಸ್ತಂಭ, ಕೂವೆಮರ, ಯಾದಿ, ಮೊದಲಾದವುಗಳ) ತುದಿ; ತಲೆ; ಶಿರ; ಅಗ್ರ; ಮೇಲುಭಾಗ: at the head of staircase ಮೆಟ್ಟಿಲು ಸಾಲಿನ ಮೇಲ್ತುದಿಯಲ್ಲಿ.
  16. ತಲೆ; (ಒಬ್ಬ) ವ್ಯಕ್ತಿ, ಮನುಷ್ಯ: two rupees a (or per) head ತಲಾ ಎರಡು ರೂಪಾಯಿ; ತಲೆಗೆರಡು ರೂಪಾಯಿ; ಒಬ್ಬ ವ್ಯಕ್ತಿಗೆ ಎರಡು ರೂಪಾಯಿ.
  17. (ಬಹುವಚನ ಅದೇ) ತಲೆ; (ಒಂದು ಯಾ ಬಿಡಿ) ಪ್ರಾಣಿ.
  18. (ಬಹುವಚನದಲ್ಲಿ) ಸಂಖ್ಯೆ; ಪ್ರಮಾಣ: large head of game ತುಂಬು ಬೇಟೆ; ಅಧಿಕ ಸಂಖೆಯ ಬೇಟೆ(ಯ ಮೃಗಗಳು) good head of shell ಅಧಿಕ ಸಂಖೆಯ (ಚಿಪ್ಪು) ಕವಡೆ, ಶಂಖ.
  19. (ಸಾಮೂಹಿಕವಾಗಿ) ದನಗಳು ಯಾ ಬೇಟೆ ಪ್ರಾಣಿಗಳು: twenty head ಇಪ್ಪತ್ತು ದನಗಳು ಯಾ ಬೇಟೆಮೃಗಗಳು.
  20. (ನಾಣ್ಯದ ಒಂದು ಮುಖದಲ್ಲಿರುವ) ತಲೆಯ ಚಿತ್ರ.
  21. (ಸಾಮಾನ್ಯವಾಗಿ ಬಹುವಚನದಲ್ಲಿ) ನಾಣ್ಯದ ತಲೆ ಚಿಮ್ಮಿದಾಗ ಮೇಲ್ಮುಖವಾಗಿ ಬೀಳುವ ತಲೆಯ ಭಾಗ, ಪಕ್ಕ.
  22. (ನದಿ, ಹೊಳೆ, ಮೊದಲಾದವುಗಳ) ಮೂಲ; ಉಗಮಸ್ಥಾನ.
  23. ಸರೋಮುಖ; ನದಿಯು ಬಂದು ಸೇರುವ ಸರೋವರದ ಶಿರೋಭಾಗ, ಮೇಲ್ತುದಿ.
  24. (ಅಳತೆಯ ಮಾನವಾಗಿ) ತಲೆ; ತಲೆಯುದ್ದ: taller by a head ಒಂದು ತಲೆ ಹೆಚ್ಚು ಎತ್ತರhorse won by a head ಕುದುರೆ ಒಂದು ತಲೆಯಷ್ಟು ಉದ್ದದಿಂದ, ಅಂತರದಿಂದ ಗೆದ್ದಿತು.
  25. ಹೆಡ್‍; ತಲೆ:
    1. ಟೇಪ್‍ರಿಕಾರ್ಡರನ್ನು ಚಾಲೂ ಮಾಡಿದಾಗ (‘ಪ್ೇ’ ಗುಂಡಿಯನ್ನು ಒತ್ತಿದಾಗ) ಸುತ್ತುತ್ತಿರುವ ಟೇಪಿನೊಡನೆ ಸಂಪರ್ಕ ಉಂಟಾಗಿ ಸಂಕೇತಗಳನ್ನು ಪರಿವರ್ತಿಸುವ ಸಾಧನ.
    2. ರೆಕಾರ್ಡ್‍ ಪ್ಲೇಯರ್‍ನಲ್ಲಿ ಕಾರ್ಟ್‍ರಿಡ್ಜ್‍ ಮತ್ತು ಸ್ಟೈಲಸ್‍ ಅನ್ನು ಹೊತ್ತಿರುವ ಭಾಗ.
    3. = printhead.
  26. (ಸುತ್ತುವ ಯಂತ್ರ ಮೊದಲಾದವುಗಳ ಚಾಲನೆಗೆ ಒದಗಿಸುವ) ಜಲ ಯಾ ಹಬೆಯ ರಾಶಿ, ಸಂಗ್ರಹ; ಎತ್ತರದಲ್ಲಿಟ್ಟ ನೀರಿನ ಯಾ ಹಬೆಯ ರಾಶಿ, ಮೊತ್ತ.
  27. (ಸುತ್ತುವ ಯಂತ್ರ ಮೊದಲಾದವುಗಳ ಚಾಲನೆಗೆ ನೀರೊದಗಿಸುವ) ಹಬೆಯ ಯಾ ಜಲರಾಶಿಯ ಒತ್ತಡ.
  28. (ಮುಖ್ಯವಾಗಿ ಅಂಕಿತನಾಮಗಳಲ್ಲಿ) ಭೂಶಿರ; ಭೂಚಾಚು; ಸಮುದ್ರದೊಳಕ್ಕೆ ಚಾಚಿಕೊಂಡಿರುವ ಗುಡ್ಡನಾಡಿನ ಭಾಗ: Beachy Head (ಇಂಗ್ಲಂಡಿನ) ಬೀಚಿಯಲ್ಲಿರುವ ಭೂಚಾಚು.
  29. (ನೌಕಾಯಾನ):
    1. ಹಡಗಿನ ಮುಂಗೋಟು, ಮೂತಿ.
    2. (ಹಡಗಿನ ಮೂತಿಯ ಭಾಗದಲ್ಲಿರುವ) ನಾವಿಕರ – ಕಕ್ಕಸು, ಶೌಚಾಲಯ.
  30. (ನಿರೂಪಿಸಿದ ಯಾ ರಚಿಸಿದ ಪ್ರಬಂಧ, ಪ್ರಸಂಗ, ಮೊದಲಾದವುಗಳಲ್ಲಿ) ಪ್ರಧಾನ – ಪ್ರಕರಣ, ಅಧಿಕರಣ, ವಿಭಾಗ.
  31. (ಪತ್ರಿಕೋದ್ಯಮ) = headline.
  32. ತುದಿಗಟ್ಟು; ಬಿಕ್ಕಟ್ಟು; ಉತ್ಕಟಾವಸ್ಥೆ; ತುದಿಗೇರಿದ ಸ್ಥಿತಿ.
  33. (ಕುರು ಮೊದಲಾದವುಗಳ) ಮೂತಿ; ತುದಿ; ಪಕ್ವ ಸ್ಥಿತಿಗೆ ಬಂದು ಒಡೆಯುವ ಯಾ ಬಿರಿಯುವ ಭಾಗ.
  34. (ಅಶಿಷ್ಟ) ಮಾದಕ ವ್ಯಸನಿ; ಮಾದಕ ವಸ್ತುಗಳ ಚಟಕ್ಕೆ ಬಿದ್ದವನು.
  35. ಜಿಂಕೆಯ ಕವಲುಗೊಂಬು: deer of the first head ಹೊಸದಾಗಿ ಕೊಂಬೊಡೆದ ಜಿಂಕೆ.
  36. (ನಿರ್ದಿಷ್ಟ ರೀತಿಯ, ಅಂತಹ ತಲೆಯುಳ್ಳ) ಮನುಷ್ಯ; ವ್ಯಕ್ತಿ: crowned heads ರಾಜರು; ಕಿರೀಟಧಾರಿಗಳುsome hot head ಯಾವನೋ ಬಿಸಿತಲೆಯವನು; ದುಡುಕು ಮನುಷ್ಯ.
  37. ಹಾಲಿನ (ಮೇಲಿನ) ಕೆನೆ.
  38. (ಗುಳ ಸೇರಿದ ನೇಗಿಲಿನ) ಮುಂಭಾಗ; ನೇಗಿಲ ತುದಿ.
  39. (ಕಲ್ಲಿದ್ದಲ ಗಣಿಯಲ್ಲಿ ಕೆಲಸ ಮಾಡಲು ನಿರ್ಮಿಸಿದ) ಸುರಂಗಮಾರ್ಗ.
  40. (ಸಂಗೀತ) (ಸ್ವರಪ್ರಸ್ತಾರ ಪಟದ ದಂಡದ ತುದಿಯಲ್ಲಿನ) ತಲೆ; ತಲೆಯಂಥ ದುಂಡು ಯಾ ಅಂಡಾಕಾರದ ಭಾಗ.
  41. (ಬ್ರಿಟಿಷ್‍ ಪ್ರಯೋಗ) ಮೋಟಾರುಕಾರಿನ ಚಾವಣಿ, ಮಾಡ.
  42. (ಪಂಪು ಯಾ ಎಂಜಿನ್ನಿನಲ್ಲಿ) ಸಿಲಿಂಡರಿನ ತಲೆ, ಮುಚ್ಚಿದ ತುದಿ.
  43. ಕೇಶ; ತಲೆಗೂದಲು.
  44. (ಆಡುಮಾತು) = headlight.
ಪದಗುಚ್ಛ
  1. above one’s head = ಪದಗುಚ್ಛ \((17e)\).
  2. at the head of:
    1. (ಸೇನೆ, ಮೆರವಣಿಗೆ, ಮೊದಲಾದವುಗಳ) ತಲೆಯಾಳಾಗಿ; ಮುಂಭಾಗದಲ್ಲಿ; ಮುಂಚೂಣಿಯಲ್ಲಿ.
    2. ಮುಖ್ಯ, ಅಗ್ರ, ಪ್ರಮುಖ, ಪ್ರಚಂಡ, ಪ್ರಧಾನ, ನಾಯಕ – ಸ್ಥಾನದಲ್ಲಿ: at the head of the administration ಆಡಳಿತದ ಮುಖಂಡ ಸ್ಥಾನದಲ್ಲಿ.
  3. by the head:
    1. (ನೌಕಾಯಾನ) (ಹಿಂಭಾಗಕ್ಕಿಂತ) ಮೂತಿಯು ಹೆಚ್ಚಾಗಿ ನೀರಿನಲ್ಲಿ ಮುಳುಗಿ.
    2. ಸ್ವಲ್ಪ ಅಮಲೇರಿ.
  4. count heads (ಸುಮ್ಮನೆ) ತಲೆ ಎಣಿಸು; (ಹಾಜರಿವವರು, ಓಟು ಮಾಡುವವರು, ಮೊದಲಾದವರ) ಸಂಖ್ಯೆ ಎಣಿಸು; ಲೆಕ್ಕ ಹಾಕು.
  5. head and shoulders.
    1. ಬಲವಂತವಾಗಿ; ಬಲಾತ್ಕಾರದಿಂದ: drag in (irrelevant topic) by the head and shoulders (ಅಸಂಬದ್ಧ ಪ್ರಸಂಗವನ್ನು ಮಧ್ಯೆ) ಎಳೆದು ತರು.
    2. (ಆಕಾರದಲ್ಲಿ) ಭುಜ ಮತ್ತು ತಲೆಯಷ್ಟು ಹೆಚ್ಚು ಎತ್ತರವಾಗಿ.
    3. (ಬುದ್ಧಿ ಯಾ ಸಾಮರ್ಥದಲ್ಲಿ) ತಲೆಮುಟ್ಟಿ; ಈರಿ; ಉನ್ನತವಾಗಿ; ಸಾಕಷ್ಟು ಹೆಚ್ಚಾಗಿ: in intelligence he was head and shoulders above the others ಬುದ್ಧಿಯಲ್ಲಿ ಅವನು ಇತರರನ್ನು ಈರಿಸಿದ್ದ.
  6. head first or foremost:
    1. (ಮುಳುಗುವಾಗ) ತಲೆ – ಮೊದಲು, ಮುಂದಾಗಿ.
    2. ದುಡುಮ್ಮನೆ; ಹಠಾತ್ತಾಗಿ; ದಿಢೀರನೆ; ಹಿಂದುಮುಂದು ಆಲೋಚಿಸದೆ.
  7. head for heights ಎತ್ತರವಾದ ಪ್ರಪಾತ, ಬೆಟ್ಟದ ಕೋಡು, ಕಟ್ಟಡದ ಚಾವಣಿ, ಮೊದಲಾದವುಗಳ ಅಂಚಿನ ಹತ್ತಿರ ನಿಲ್ಲುವ ಯಾ ಇರಬಲ್ಲ ಶಕ್ತಿ.
  8. head of hair (ಸಾಮಾನ್ಯವಾಗಿ ತುಂಬ ಇರುವ) ತಲೆಗೂದಲು; (ವಿಪುಲ) ಕೇಶರಾಶಿ.
  9. head of the river (ಬ್ರಿಟಿಷ್‍ ಪ್ರಯೋಗ) ಮುಂದಿನ ದೋಣಿಯನ್ನು ಮುಟ್ಟಿ ಹಾದುಹೋಗುವ ದೋಣುಪಂದ್ಯದಲ್ಲಿ ಅಗ್ರಸ್ಠಾನ.
  10. head over ears (or heels) ಆಳವಾಗಿ ಯಾ ಸಂಪೂರ್ಣವಾಗಿ ಮುಳುಗಿ (ರೂಪಕವಾಗಿ ಸಹ): head over ears (or heels) in debt or love ಸಾಲದಲ್ಲಿ ಯಾ ಪ್ರೇಮದಲ್ಲಿ ಆಳವಾಗಿ ಯಾ ಸಂಪೂರ್ಣವಾಗಿ ಮುಳುಗಿ.
  11. head over heels:
    1. ತಲೆಕೆಳಗಾಗಿ; ಅಡಿಮೇಲಾಗುವಂತೆ.
    2. ಪಲ್ಟಿ, ಲಾಗ – ಹಾಕುತ್ತ; ದೊಂಬರಾಟದಲ್ಲಿ.
    3. ಸಂಫೂರ್ಣವಾಗಿ; ಪೂರಾ.
  12. heads up! (ಆಡುಮಾತು) ಜೋಕೆ! ಜೋಪಾನ! ಹುಷಾರು!
  13. from head to foot (or toe):
    1. ತಲೆಯಿಂದ ಕಾಲಿನವರೆಗೆ; ಅಡಿಯಿಂದ ಮುಡಿಯವರೆಗೆ; ಆಪಾದಮಸ್ತಕವಾಗಿ; ಮೈತುಂಬ.
    2. (ರೂಪಕವಾಗಿ) ಆಮೂಲಾಗ್ರ; ಮೊದಲಿಂದ ಕೊನೆಯವರೆಗೆ.
  14. in one’s head ತಲೆಯಲ್ಲಿ; ಆಲೋಚನೆಯಲ್ಲಿ; ಎಣಿಕೆಯಲ್ಲಿ; ಭೌತಿಕ ಸಾಧನಗಳ ಸಹಾಯವಿಲ್ಲದೆ ಮಾನಸಿಕ ಪ್ರಕ್ರಿಯೆಯಿಂದ.
  15. on one’s head:
    1. ತಲೆಯ ಮೇಲೆ; ಕಾಲುಗಳನ್ನು ಮೇಲೆತ್ತಿ ತಲೆ ಮತ್ತು ತೋಳುಗಳ ಮೇಲೆ.
    2. (ಅಶಿಷ್ಟ) ಬಹಳ ಸುಲಭವಾಗಿ; ಸ್ವಲ್ಪವೂ ಶ್ರಮವಿಲ್ಲದೆ: can do it on my head ಬಹಳ ಸುಲಭವಾಗಿ ಮಾಡಬಲ್ಲೆ.
    3. = ಪದಗುಚ್ಛ \((17)\).
  16. on one’s own head (ಸೇಡು, ತಪ್ಪು, ಜವಾಬ್ದಾರಿ, ಮೊದಲಾದವು) ತಲೆಯ ಮೇಲೆ (ಬಿದ್ದು, ಅವನ್ನು ಹೊತ್ತು, ಧರಿಸಿ).
  17. over one’s head:
    1. ತಲೆಯ, ನೆತ್ತಿಯ – ಮೇಲೆ; ಆಕಾಶದಲ್ಲಿ; ಮೇಲೆ ಎತ್ತರದಲ್ಲಿ.
    2. (ನೀರಿನ ವಿಷಯದಲ್ಲಿ)ತಲೆ ಮುಳುಗುವಂತೆ.
    3. (ಅಪಾಯ, ಗಂಡಾಂತರ, ಮೊದಲಾದವುಗಳ ವಿಷಯದಲ್ಲಿ) ತಲೆಯ ಮೇಲೆ ತೂಗುವ, ಎರಗುವ; ಸದ್ಯದಲ್ಲಿಯೇ ಸಂಭವಿಸುವ.
    4. (ಬಡ್ತಿಯ ವಿಷಯದಲ್ಲಿ) ತಲೆಯ ಮೇಲೆ; ಹೆಚ್ಚಿನ ಅರ್ಹತೆ, ನ್ಯಾಯವಾದ ಹಕ್ಕುಗಳಿರುವವನನ್ನು ಕಡೆಗಣಿಸಿ: he is promoted over my head ಅವನಿಗೆ ಬಡ್ತಿ ಕೊಟ್ಟು ನನ್ನ ತಲೆಯ ಮೇಲೆ ಕೂರಿಸಿದ್ದಾರೆ.
    5. ಬುದ್ಧಿಗೆ, ತಿಳಿವಳಿಕೆಗೆ ಈರಿ: he talked over our heads ಅವನು ನಮ್ಮ ತಿಳಿವಳಿಕೆಗೆ ಈರಿ ಮಾತನಾಡಿದ.
ನುಡಿಗಟ್ಟು
  1. beat (person’s) head off (ಒಬ್ಬನನ್ನು) ಪೂರ್ತಿ ದಣಿಸು, ಸುಸ್ತು ಮಾಡಿ ಬಿಡು.
  2. (be) weak in the head ಮಂದಬುದ್ಧಿ(ಯವನಾಗಿರು); ಅಂತಹುದೇನೂ ಬುದ್ಧಿವಂತನಾಗಿರದಿರು.
  3. bring to a head:
    1. ಪಕ್ವಸ್ಥಿತಿಗೆ ತರು.
    2. ಉತ್ಕಟಸ್ಥಿತಿಗೆ, ವಿಷಮಸ್ಥಿತಿಗೆ – ತರು; ತುದಿಗಟ್ಟಕ್ಕೆ ತರು.
  4. by the head and ears (ದನವನ್ನೆಳೆಯುವಂತೆ) ಬಲವಂತವಾಗಿ; ಕಿವಿಮೂಗು ಹಿಡಿದು; ಬಲಾತ್ಕಾರದಿಂದ; ದರದರನೆ: an utterly irrelevant story lugged in by head and ears ಬಲವಂತವಾಗಿ ಎಳೆದು ತಂದ ಶುದ್ಧ ಅಸಂಬದ್ದ ಕಥೆ.
  5. cannot make head or tail of (ವಿಷಯ ಮೊದಲಾದವುಗಳ) ತಲೆ ಬಾಲ ಒಂದೂ ತಿಳಿಯುವುದಿಲ್ಲ; ಏನೂ ಅರ್ಥವಾಗುವುದಿಲ್ಲ.
  6. come into (or enter) one’s head (ಆಲೋಚನೆ ಯಾ ಭಾವನೆ) ಮನಸ್ಸಿಗೆ ಬರು, ತೋರು, ಸುಳಿ.
  7. come to a head:
    1. ಪಕ್ವಸ್ಥಿತಿಗೆ ಬರು.
    2. ಉತ್ಕಟ ಸ್ಥಿತಿ ತಲುಪು; ವಿಷಮ ಸ್ಥಿತಿಗೆ ಬರು; ತುದಿಗಟ್ಟಕ್ಕೆ ಬರು.
  8. get one’s head down (ಅಶಿಷ್ಟ).
    1. ಹಾಸಿಗೆಯ ಮೇಲೆ ಬಿದ್ದುಕೊ, ತಲೆಹಾಕು.
    2. ಮಾಡಬೇಕಾಗಿರುವ ಕೆಲಸದ ಮೇಲೆ ನಿಗಾ ಇಡು; ಕೈಯಲ್ಲಿರುವ ಕೆಲಸದ ಮೇಲೆ ಕೇಂದ್ರೀಕರಿಸು.
  9. give a (person) his or her head (ಒಬ್ಬನನ್ನು) ಇಷ್ಟಬಂದಂತೆ ನಡೆಯಲು ಬಿಡು; ಸ್ವೇಚ್ಛೆಯಾಗಿ ಬಿಡು; ಸ್ವತಂತ್ರವಾಗಿ ವರ್ತಿಸುವಂತೆ ಬಿಡು; (ಅವನನ್ನು) ನಿಯಂತ್ರಿಸದಿರು.
  10. give (horse) his head (ಕುದುರೆಯನ್ನು) ಸ್ವೇಚ್ಛೆಯಾಗಿ ಬಿಡು; ಇಷ್ಟ ಬಂದಂತೆ ಹೋಗಲು ಬಿಡು; ನಿಯಂತ್ರಿಸದಿರು.
  11. go out of one’s head (ವಿಷಯ) ಮರೆತು ಹೋಗು; ವಿಸ್ಮೃತನಾಗು; ವಿಸ್ಮೃತಿ ಹೊಂದು.
  12. go to one’s head:
    1. (ಮದ್ಯದ ವಿಷಯದಲ್ಲಿ) ತಲೆಗೇರು; ನೆತ್ತಿಗೇರು; ಅಮಲೇರು; ಮತ್ತೇರು.
    2. (ಜಯ, ಏಳಿಗೆ, ಮೊದಲಾದವುಗಳ ವಿಷಯದಲ್ಲಿ) ತಲೆಗೇರು; ಅಮಲೇರು; ಸೊಕ್ಕೇರು; ದುರಹಂಕಾರ ಮಿತಿಈರು.
  13. hang one’s head (ಅವಮಾನದಿಂದ) ತಲೆತಗ್ಗಿಸು.
  14. have a good head on one’s shoulders ಒಳ್ಳೆಯ ತಲೆ ಹೊಂದಿರು; ಲೌಕಿಕ ಜ್ಞಾನ, ವ್ಯಾವಹಾರಿಕ ಸಾಮರ್ಥ್ಯ, ಮೊದಲಾದವನ್ನು ಹೊಂದಿರು.
  15. head and front:
    1. (ಪ್ರಾಪ್ರ) ಅಪರಾಧದ ತಿರುಳು, ಮುಖ್ಯಾಂಶ.
    2. (ಯಾವುದೇ ಕಾರ್ಯದ) ಮುಖಂಡ; ಮುಂದಾಳು; (ಸಾಮಾನ್ಯವಾಗಿ ಪುಂಡರ) ತಲೆಯಾಳು.
    3. (ಷೇಕ್ಸ್‍ಪಿಯರ್‍ನಲ್ಲಿ) ಅತಿ ಹೆಚ್ಚಿನ ಪ್ರಮಾಣ; ಪರಮಾವಧಿ.
  16. head in the sand ಎದುರಿಗಿರುವ ಅಪಾಯವನ್ನು ನಂಬಲು ಮನಸ್ಸಿಲ್ಲದೆ; ಎದುರಿಗಿರುವ ಅಪಾಯಕ್ಕೆ ಕಣ್ಣು ಮುಚ್ಚಿಕೊಂಡು.
  17. heads I win, tails you lose ಏನೇ ಆದರೂ ನನ್ನದೇ ಗೆಲುವು; ತಲೆಭಾಗ ಮೇಲಾಗಿ ಬಿದ್ದರೆ ನಾನು ಗೆಲ್ಲುತ್ತೇನೆ, ಹಿಂಭಾಗ ಮೇಲಾಗಿ ಬಿದ್ದರೆ ನೀನು ಸೋಲುತ್ತೀಯ.
  18. heads will roll (ಆಡುಮಾತು) ಕೆಲವರ ತಲೆಗಳು ಬೀಳುತ್ತವೆ; ಕೆಲವರು ವಜಾ ಆಗುವುದರಲ್ಲಿದ್ದಾರೆ ಯಾ ಅವಮಾನಕ್ಕೆ ಒಳಗಾಗುವವರಿದ್ದಾರೆ.
  19. hold one’s head high ತಲೆ ಎತ್ತಿಕೊಂಡು ಓಡಾಡು; ಮರ್ಯಾದೆಯಿಂದ ಇರು; ಗೌರವದಿಂದ ಬದುಕು.
  20. hold up one’s head ತಲೆ ಎತ್ತಿಕೊಂಡಿರು; ಅವಮಾನಕ್ಕೆ ಈಡಾಗದಿರು, ಒಳಗಾಗದಿರು.
  21. keep one’s head ಶಾಂತತೆಯಿಂದಿರು; ತಲೆ ಕೆಡಿಸಿಕೊಳ್ಳದಿರು; ದುಡುಕದಿರು.
  22. keeps one’s head above water (ಆಡುಮಾತು) ಸಾಲಕ್ಕೆ ಸಿಕ್ಕಿಕೊಳ್ಳದಿರು, ಬೀಳದಿರು.
  23. keep one’s head down (ಆಡುಮಾತು) ತಲೆ ಸರಿಯಾಗಿಟ್ಟುಕೊ, ನೆಟ್ಟಗಿಟ್ಟುಕೊ:
    1. ಏಕಾಗ್ರತೆ ಕಳೆದುಕೊಳ್ಳದಿರು; ಬೇರೆಡೆಗೆ ಗಮನ ಹರಿಸದಿರು.
    2. ಅಪಾಯಕ್ಕೆ ಎಡೆಗೊಡದಿರು, ಸಿಕ್ಕದಿರು.
  24. lay heads together ಪರಸ್ಪರ ಸಮಾಲೋಚಿಸು.
  25. laugh one’s head off ನಕ್ಕು ನಕ್ಕು ಸುಸ್ತಾಗು; ತಲೆ ಬಿದ್ದುಹೋಗುವಷ್ಟು ಗಟ್ಟಿಯಾಗಿ ನಗು.
  26. let him have his head:
    1. (ಕುದುರೆಯ ವಿಷಯದಲ್ಲಿ) = ನುಡಿಗಟ್ಟು \((10)\).
    2. (ಮನುಷ್ಯನ ವಿಷಯದಲ್ಲಿ) = ನುಡಿಗಟ್ಟು \((9)\).
  27. lose one’s head;
    1. ತಲೆ ಕಳೆದುಕೊ; ಶಿರಚ್ಛೇದಕ್ಕೆ ಗುರಿಯಾಗು.
    2. ದಿಕ್ಕು ತೋರದಾಗು; ತಲೆಕೆಡು; ಗೊಂದಲಕ್ಕೆ ಬೀಳು.
  28. make head:
    1. ಮುಂದುವರಿ; ಮುಂದೆ ಮುಂದೆ ಹೋಗು; ಪ್ರಗತಿಸಾಧಿಸು.
    2. ಎದುರಾಳಿಗಳನ್ನು ಪ್ರತಿಭಟಿಸಿ ಮುನ್ನುಗ್ಗು, ಮುಂದೆಸಾಗು.
  29. off one’s head (ಅಶಿಷ್ಟ) ತಲೆಕೆಟ್ಟು; ಹುಚ್ಚು ಹಿಡಿದು.
  30. off the top of one’s head (ಆಡುಮಾತು) ತಲೆಯಿಂದ ಪುಟಿದಂತೆ; ಪೂರ್ವಇಸಿದ್ಧತೆ ಇಲ್ಲದೆ; ಸಮಯ ಸ್ಫೂರ್ತಿಯಿಂದ; ಮೊದಲೇ ವಿಚಾರಣೆ ಮಾಡದೆ ಯಾ ಪೂರ್ವಚಿಂತನೆಯಿಲ್ಲದೆ.
  31. old head on young shoulders ಎಳೆಯ ವಯಸ್ಸು, ಬೆಳೆದ ಬುದ್ಧಿ; ವಯೋವೃದ್ಧನಲ್ಲದಿದ್ದರೂ ಜ್ಞಾನವೃದ್ಧ.
  32. out of one’s head:
    1. (ಅಶಿಷ್ಟ) ತಲೆಕೆಟ್ಟು; ಹುಚ್ಚು ಹಿಡಿದು.
    2. ಒಬ್ಬನ ಸ್ವಂತ ಕಲ್ಪನೆಯಿಂದ.
    3. ವಿಸ್ಮೃತವಾಗಿ; ಮರೆತುಹೋಗಿ.
  33. put heads together = ನುಡಿಗಟ್ಟು \((24)\).
  34. put into person’s head (ಅಭಿಪ್ರಾಯ ಮೊದಲಾದವನ್ನು ಒಬ್ಬನ). ತಲೆಯೊಳಕ್ಕೆ ಹಾಕು; (ಒಬ್ಬನಿಗೆ) ಸೂಚಿಸು; ಸಲಹೆಕೊಡು.
  35. put out of (one’s) head:
    1. (ಯಾವುದಾದರೂ ಒಂದರ) ಚಿಂತೆಬಿಡು; ತಲೆಗೆ ಹಚ್ಚಿಕೊಳ್ಳದಿರು; ವಿಷಯ ಕೈಬಿಡು; ತಲೆಯಿಂದ ಹೊರದೂಡು; ಮನಸ್ಸಿನಿಂದ ಹೊರಹಾಕು.
    2. (ಯಾವುದನ್ನಾದರೂ) ಮರೆತುಬಿಡು.
  36. take (or get) it into one’s head (ಎಂದು) ಅಂದುಕೊ; ಭಾವಿಸು, ಕಲ್ಪಿಸಿಕೊ; ನಿರ್ದಿಷ್ಟವಾದ, ಖಚಿತವಾದ ಅಭಿಪ್ರಾಯ ಯಾ ಯೋಜನೆ ಹಾಕಿಕೊ, ರೂಪಿಸಿಕೊ.
  37. talk (person’s) head off ಮಾತಾಡಿ ಮಾತಾಡಿ ಕೇಳುವವನನ್ನು – ದಣಿಸು, ಸುಸ್ತುಮಾಡು(ಕೇಳುವವನಿಗೆ) ಬೇಸರ ಹುಟ್ಟಿಸು; ಚಿಟ್ಟುಬರಿಸು.
  38. turn a person’s head ದುರಹಂಕಾರಿಯನ್ನಾಗಿ ಮಾಡು; ತಲೆ ತಿರುಗುವಂತೆ ಮಾಡು.
  39. two heads are better than one (ಆಲೋಚನೆ ಮೊದಲಾದವುಗಳ ವಿಷಯದಲ್ಲಿ) ಒಬ್ಬನಿಗಿಂತ ಇಬ್ಬರು ಮೇಲು; ಎರಡು ತಲೆ ಉತ್ತಮ.
  40. with one’s head in the CLOUDs.
See also 1head  3head
2head ಹೆಡ್‍
ಆಖ್ಯಾತಕ ಗುಣವಾಚಕ

ಮುಖ್ಯ, ಪ್ರಮುಖ; ಪ್ರಧಾನ; ಅಗ್ರಸ್ಥ: head clerk ಮುಖ್ಯ ಗುಮಾಸ್ತೆ, head waiter ಮುಖ್ಯ ಮಾಣಿhead office ಪ್ರಧಾನ ಕಚೇರಿ.

See also 1head  2head
3head ಹೆಡ್‍
ಸಕರ್ಮಕ ಕ್ರಿಯಾಪದ
  1. ಮುಂದುಗಡೆ ಇರು; ಮುಂಭಾಗದಲ್ಲಿರು.
  2. (ಸಂಸ್ಥೆ, ದಳ, ಮೊದಲಾದವುಗಳ) ನೇತಾರನಾಗಿರು; ನಾಯಕನಾಗಿರು; ಮುಂದಾಳಾಗಿರು; (ಸಂಸ್ಥೆ, ದಳ, ಮೊದಲಾದವುಗಳ) ಮುನ್ನಡೆಸು: head a procession ಮೆರವಣಿಗೆ ಮುಂದಾಳಾಗಿರುthe party headed by Nehru ನೆಹರೂರವರಿಂದ ಮುನ್ನಡೆಸಲ್ಪಟ್ಟ, ನೆಹರೂ ನೇತಾರರಾಗಿರುವ – ಪಕ್ಷ.
  3. ಶಿರೋನಾಮೆ ಕೊಡು; ಶೀರ್ಷಿಕೆಯನ್ನು ಒದಗಿಸು.
  4. (ಶಾಸನ, ಶೀರ್ಷಿಕೆ, ಮೊದಲಾದವುಗಳ ವಿಷಯದಲ್ಲಿ)(ತಲೆಯಲ್ಲಿ, ನೆತ್ತಿಯಲ್ಲಿ, ಮೇಲ್ಭಾಗದಲ್ಲಿ, ಅಗ್ರದಲ್ಲಿ, ಶಿರಸ್ಸಿನಲ್ಲಿ) ಹೆಸರು – ಹಾಕು, ಹೊಂದಿರು; ಶೀರ್ಷಿಕೆ ಇಡು.
  5. ನಿರ್ದಿಷ್ಟ ದಿಕ್ಕಿನಲ್ಲಿ ಸಾಗುವಂತೆ ಮಾಡು; ನಿರ್ದೇಶಿಸು.
  6. (ಕಾಲ್ಚೆಂಡಾಟ) ‘ಹೆಡ್‍’ ಮಾಡು; ತಲೆಯಿಂದ (ಚೆಂಡನ್ನು) ಹೊಡೆ.
  7. (ಗಿಡ, ಮರ, ಮೊದಲಾದವುಗಳ) ತಲೆ ಕಡಿ; ತುದಿ ಕತ್ತರಿಸು.
  8. ತಲೆ – ಇಡು, ಹಾಕು, ಜೋಡಿಸು, ಒದಗಿಸು, ತಲೆಯನ್ನು ಅಳವಡಿಸು: head an arrow ಬಾಣಕ್ಕೆ ತಲೆ ಜೋಡಿಸು.
  9. (ಯಾವುದಕ್ಕೇ ಆಗಲಿ) ತಲೆಯಾಗು; ಮುಖ್ಯಸ್ಥನಾಗು; ಮುಖಂಡನಾಗು: head a department ಇಲಾಖೆಯ ಮುಖ್ಯಸ್ಥನಾಗು.
  10. ಮೊದಲಿಗನಾಗಿರು; ಅಗ್ರಸ್ಥಾನ ಪಡೆದಿರು: he heads the list with 98% marks ಶೇಕಡ 98 ಅಂಕಗಳನ್ನು ಗಳಿಸಿ ಆತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾನೆ.
  11. (ಇತರರನ್ನು ಈರಿ) ಮುನ್ನಡೆ; ಮುನ್‍ಸಾಗು; ಮುಂದಕ್ಕೆ ಹೋಗು.
  12. (ಇತರರನ್ನು) ಈರಿಸು; ಇತರರಿಗಿಂತ – ಮಿಗಿಲಾಗು, ಮೇಲಾಗು, ಅತಿಶಯವಾಗು.
ಅಕರ್ಮಕ ಕ್ರಿಯಾಪದ
  1. ನಿರ್ದಿಷ್ಟ ದಿಕ್ಕಿನತ್ತ ಯಾ ಫಲಿತಾಂಶದತ್ತ – ಇರು ಯಾ ಸಾಗು: is heading for trouble ತೊಂದರೆಯತ್ತ ಸಾಗುತ್ತಿದೆ.
  2. (ಗಿಡ ಮೊದಲಾದವುಗಳ ವಿಷಯದಲ್ಲಿ) ಗೊಂಡೆಕಟ್ಟು; ಗೆಡ್ಡೆಯಾಗು; ತಲೆಯಾಗು; ತೆನೆಕಟ್ಟು: cabbage heads quickly ಎಲೆಕೋಸು ಬೇಗ ಗೊಂಡೆಕಟ್ಟುತ್ತದೆwheat heads ಗೋಧಿ ತೆನೆಕಟ್ಟುತ್ತದೆ.
ಪದಗುಚ್ಛ
  1. head back:
    1. (ಒಂದನ್ನು) ಹಿಮ್ಮೆಟ್ಟಿಸಲು, ಹಿಂದಕ್ಕೆ ತಿರುಗಿಸಲು ಅದರ ಮುಂದೆ ಹೋಗಿ ನಿಲ್ಲು, ಅಡ್ಡಗಟ್ಟು.
    2. ಮನೆ ಮೊದಲಾದವಕ್ಕೆ ಹಿಂತಿರುಗು.
  2. head for (ಹಡಗು ಮೊದಲಾದವುಗಳ ವಿಷಯದಲ್ಲಿ) (ನಿರ್ದಿಷ್ಟ ಸ್ಥಳದ, ಸ್ಥಾನದ) ಕಡೆಗೆ – ಸರಿ, ಸಾಗು, ಹೋಗು, ಚಲಿಸು: head for Bombay ಬೊಂಬಾಯಿಯತ್ತ ಸಾಗುತ್ತheading for the main road ಮುಖ್ಯರಸ್ತೆಯಿಂದ ಚಲಿಸುತ್ತhead straight for home ನೇರವಾಗಿ ಮನೆಗೆ ಹೋಗುheading for disaster ವಿನಾಶದತ್ತ ಸರಿಯುತ್ತ (ರೂಪಕವಾಗಿ ಸಹ.)
  3. head off:
    1. (ಒಂದನ್ನು) ಹಿಂದಕ್ಕೆ ಯಾ ಪಕ್ಕಕ್ಕೆ ತಿರುಗಿಸಲು (ಅದರ) ಮುಂದೆ ಹೋಗಿ ನಿಲ್ಲು: head off a flock of sheep ಕುರಿಗಳು ದಾರಿ ತಪ್ಪದಂತೆ ಯಾ ಅಡ್ಡದಾರಿ ಹಿಡಿಯದಂತೆ ಅವುಗಳ ಮುಂದೆ ಹೋಗಿ ಅಡ್ಡಗಟ್ಟಿ ನಿಲ್ಲುthe hounds headed off the fleeing hare ಓಡುತ್ತಿದ್ದ ಮೊಲ ಮುಂದುವರಿಯದಂತೆ ಬೇಟೆನಾಯಿಗಳು ಅದನ್ನು ಈರಿ ಹೋಗಿ ನಿಂತವು.
    2. (ರೂಪಕವಾಗಿ) ಓಡಿಹೋಗಿ – ತಡೆ, ಅಡ್ಡಿಪಡಿಸು: the police headed off the fleeing driver ಪರಾರಿಯಾಗುತ್ತಿದ್ದ ಚಾಲಕನನ್ನು ಪೊಲೀಸರು ಓಡಿಹೋಗಿ ತಡೆದರು.
    3. (ರೂಪಕವಾಗಿ) ನಿವಾರಿಸು; ತಪ್ಪಿಸು; ಪರಿಹರಿಸು: head off a quarrel ಮುಂಜಾಗ್ರತೆ ಕ್ರಮದಿಂದ ಜಗಳ ತಪ್ಪಿಸು.
  4. head up (ಅಮೆರಿಕನ್‍ ಪ್ರಯೋಗ) = 3head(2) ಸಕರ್ಮಕ ಕ್ರಿಯಾಪದ \((2)\).