hair ಹೇರ್‍
ನಾಮವಾಚಕ
    1. (ಪ್ರಾಣಿಗಳ ಚರ್ಮದಿಂದ ಬೆಳೆಯುವ) ಕೂದಲು; ನವಿರು; ರೋಮ.
    2. (ಮುಖ್ಯವಾಗಿ) ಕೇಶ: ತಲೆಗೂದಲು.
  1. (ಸಾಮುದಾಯಿಕ ಏವಯಾ ಪ್ರಾಚೀನ ಪ್ರಯೋಗ ಬಹುವಚನ) (ವ್ಯಕ್ತಿಯ ತಲೆಯ ಮೇಲೆ ಬೆಳೆಸುವ) ಕೇಶಗಳು; ಕೂದಲುಗಳು.
  2. (ಕೈಗಾರಿಕೆ ಮೊದಲಾದವುಗಳಲ್ಲಿ ಬಳಸುವ) ಕೂದಲ ರಾಶಿ; ಕೇಶರಾಶಿ.
  3. (ಸಸ್ಯದ ಹೊರ ಚರ್ಮದಿಂದ ಬೆಳೆಯುವ) ರೋಮ; ಎಳೆಯಂಥ ಅಂಗಾಂಶ.
  4. ಕೂದಲಿನಂಥ (ಯಾವುದೇ) ವಸ್ತು.
  5. ತುಸು; ಅಲ್ಪ; ಲವ; ಲೇಹಶ; ಬಹಳ ಕೊಂಚ; ಅತಿಸ್ವಲ್ಪ.
ನುಡಿಗಟ್ಟು
  1. against the hair ಸ್ವಭಾವವಿರುದ್ಧವಾಗಿ: if you should fight you go against the hair of your profession ನೀನು ಜಗಳವಾಡಿದರೆ ಅದು ನಿನ್ನ ವೃತ್ತಿಗೇ ವಿರೋಧ.
  2. do one’s hair ತಲೆಬಾಚಿಕೊ; ಜಡೆಹಾಕಿಕೊ.
  3. get (or have) person by the short hairs (ಅಶಿಷ್ಟ) ಒಬ್ಬನ ಜುಟ್ಟನ್ನು ತನ್ನ ಕೈಯಲ್ಲಿಟ್ಟುಕೊ.
  4. hair of the $^1$dog that bit one.
  5. hair(stands) on end (ಚಳಿ, ಭಯ, ಮೊದಲಾದವುಗಳಿಂದ) ರೋಮಾಂಚವಾಗು; ಮೈಮೇಲೆ ಮುಳ್ಳೇಳು; ಮೈನವಿರೇಳು.
  6. keep one’s hair on(ಅಶಿಷ್ಟ) ಸಮಾಧಾನದಿಂದಿರು; ಶಾಂತನಾಗಿರು; ಕೋಪಗೊಳ್ಳದಿರು.
  7. let one’s hair down
    1. (ಹೆಂಗಸಿನ ವಿಷಯದಲ್ಲಿ) ಕೂದಲಗಂಟು, ಜಡೆ, ಮೊದಲಾದವನ್ನು ಬಿಚ್ಚಿ ಇಳಿಯ ಬಿಡು.
    2. (ರೂಪಕವಾಗಿ) (ಆಡುಮಾತು) ಬಿಗುಮಾನ ಬಿಡು; ಸಹಜವಾಗಿ, ಸರಳವಾಗಿ, ಸಂಕೋಚವಿಲ್ಲದೆ – ನಡೆದುಕೋ, ವರ್ತಿಸು.
  8. make one’s hair curl.
  9. make one’s hair stand on end (ಭಯಂಕರವಾದ ಅನುಭವದ ವಿಷಯದಲ್ಲಿ) ನವಿರೇಳಿಸು; ರೋಮಾಂಚಗೊಳಿಸು.
  10. not turn a hair ಕೂದಲು ಕದಲದಿರು; ಕುಡಿದ ನೀರು ಅಲ್ಲಾಡದಂತಿರು; ದಣಿವನ್ನಾಗಲಿ ದುಗುಡವನ್ನಾಗಲಿ ತೋರದಿರು.
  11. put up one’s hair (ಹೆಂಗಸಿನ ವಿಷಯದಲ್ಲಿ) ತುರುಬು ಕಟ್ಟಿಕೊ; ಜಡೆ ಹಾಕಿಕೊ; ಕೂದಲು ಗಂಟುಹಾಕಿಕೊ.
  12. $^1$split hairs.
  13. $^1$tear one’s hair.
  14. to a hair ಕರಾರುವಕ್ಕಾಗಿ; ನಿಷ್ಕೃಷ್ಟವಾಗಿ: the reproduction matched the original to a hair ಪ್ರತಿಕೃತಿಯು ಮೂಲಕೃತಿಗೆ ನಿಷ್ಕೃಷ್ಟವಾಗಿ ಸರಿಸಮನಾಗಿತ್ತು.
  15. to get in someone’s hair (ಅಶಿಷ್ಟ) ರೇಗಿಸು; ಸಿಟ್ಟುಬರಿಸು; ಮೈ ಉರಿಯುವಂತೆ ಮಾಡು: thier snobbishness gets in my hair ಅವರ ಬಡಾಯಿ ಕಂಡರೆ ನನಗೆ ಮೈ ಉರಿಯುತ್ತದೆ.
  16. turn up one’s hair = ನುಡಿಗಟ್ಟು \((11)\).