See also 2dog
1dog ಡಾಗ್‍
ನಾಮವಾಚಕ
  1. ನಾಯಿ; ಸೊಣಗ; ಕುನ್ನಿ; ಶುನಕ; ಶ್ವಾನ.
  2. ಬೇಟೆನಾಯಿ.
  3. ಗಂಡುನಾಯಿ.
  4. ಗಂಡುತೋಳ.
  5. ಗಂಡುನರಿ.
  6. ಕೆಲಸಕ್ಕೆ ಬಾರದವ; ಅಯೋಗ್ಯ; ಅಧಮ; ಹಲ್ಕಾ; ಕುನ್ನಿ: dirty dog ಹಲ್ಕಾ ಮನುಷ್ಯ.
  7. ಮನುಷ್ಯ; ಆಸಾಮಿ; ಇಸಮು: sly dog ಠಕ್ಕ ಆಸಾಮಿ. lucky dog ಅಷ್ಟವಂತ ಆಸಾಮಿ. jolly dog ಋಷಿ ಆಸಾಮಿ; ಮೋಜುಗಾರ ಆಸಾಮಿ; ದಿಲ್‍ದಾರ್‍ ಮನುಷ್ಯ.
  8. (ಖಗೋಳ ವಿಜ್ಞಾನ)
    1. ಶ್ವಾನ ನಕ್ಷತ್ರ ಪುಂಜ: Greater Dog or Canis Major ಮಹಾಶ್ವಾನ. Lesser Dog or Canis Minor ಲಘುಶ್ವಾನ.
    2. = dogstar.
    1. ಬಿಗಿಣಿ; (ಯಾವುದಾದರೂ ವಸ್ತುವನ್ನು) ಬಿಗಿಯಾಗಿ ಹಿಡಿದುಕೊಳ್ಳಲು ಬಳಸುವ ಯಾವುದೇ ಬಗೆಯ ಯಾಂತ್ರಿಕ ಸಾಧನ.
    2. ಬಿಗಿಸರಳು; ಎರಡು ಕೊನೆಯಲ್ಲಿ ಮೇಲ್ಮುಖವಾಗಿ ಬಗ್ಗಿಸಿರುವ ತುದಿಗಳುಳ್ಳ, ತೊಲೆಗಳನ್ನು ಬಿಗಿಯುವಂಥ ಸರಳು. ಸಲಾಕಿ.
  9. (ಬಹುವಚನದಲ್ಲಿ) ಕಾಷ್ಠಾಧಾರಗಳು; ಸೌದೆಯನ್ನು ಉರಿಸುವುದು ಮೊದಲಾದವುಗಳಿಗೆ ಬಳಸುವ ಲೋಹದ ಆಸರೆಗಳು; ಅಗ್ಗಿಷ್ಟಿಕೆಯ ಸರಳು – ತಡಿಕೆ, ಜಾಲರಿ.
  10. ಬಿರುಗಾಳಿ, ಮಳೆಗಳನ್ನು ಸೂಚಿಸುವ ದಿಗಂತ ಬೆಳಕು (ಇದನ್ನು sea-dog ಎಂದೂ ಕರೆಯುತ್ತಾರೆ).
  11. ಸೂರ್ಯಾಭಾಸ; ಪ್ರತಿಸೂರ್ಯ.
  12. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಕಳಪೆ; ಕೆಲಸಕ್ಕೆ ಬಾರದ್ದು; ನಿಷ್ಪ್ರಯೋಜಕವಾದದ್ದು; ತೀರ ಕೆಳಮಟ್ಟದ, ಉಪಯೋಗಕ್ಕೆ ಬಾರದ ವಸ್ತು.
  13. (ಬಹುವಚನದಲ್ಲಿ, ಅಶಿಷ್ಟ) ಕಾಲುಗಳು.
ನುಡಿಗಟ್ಟು
  1. a case of dog eat dog ನಾಯಿಯನ್ನು ನಾಯಿ ತಿನ್ನುವ ಪರಿಸ್ಥಿತಿ; (ವ್ಯಾಪಾರದಲ್ಲಿ) ನಿರ್ದಯ ವಿಧಾನಗಳನ್ನು ಅನುಸರಿಸುವ ಪೈಪೋಟಿ; ಪರಸ್ಪರ ಘಾತಕ – ಪ್ರತ್ತಿ, ಸ್ಥಿತಿ.
  2. be (the) underdog ಅಧೀನ ಸ್ಥಾನದಲ್ಲಿರು; ಅಧೀನನಾಗಿರು.
  3. be top dog ಅಧಿಕಾರಸ್ಥಾನದಲ್ಲಿರು; ಮೇಲಧಿಕಾರಿಯಾಗಿರು.
  4. 2die a dog’s death.
  5. die like a dog ನಾಯಿಯ ಹಾಗೆ ಸಾಯಿ; ದುಃಸ್ಥಿಯಿಯಲ್ಲಿ ಸಾಯಿ; ಹೀನ ಸ್ಥಿತಿಯಲ್ಲಿ ಯಾ ನಾಚಿಕೆಗೇಡಿನ ಸ್ಥಿತಿಯಲ್ಲಿ ಸಾಯಿ.
  6. dog in a blanket
    1. ಒಳಗೆ ದ್ವೀಪದ್ರಾಕ್ಷಿ ಇಟ್ಟು ಮುಚ್ಚಿದ ಉಂಡೆ.
    2. ಒಳಗೆ ರಾಸಾಯನ ತುಂಬಿದ ಕಡಬು.
  7. dog in the manger ತಾನೂ ತಿನ್ನ ಪರರಿಗೂ ಕೊಡ; ಗೌಡರಗೂಳಿ; ತನಗೆ ಬೇಡವಾದರೂ ಬೇರೆಯವರಿಗೆ ಕೊಡದವ.
  8. dogs of war ಯುದ್ಧದ ಅನರ್ಥಗಳು; ಯುದ್ಧದ ಜೊತೆಜೊತೆಯಲ್ಲಿಯೇ ಬರುವ ಕೊಳ್ಳೆ, ಸುಲಿಗೆ, ಮೊದಲಾದವು.
  9. every dog has his day.
  10. give a dog bad name and hang him ಕೆಟ್ಟ ಹೆಸರಿಟ್ಟು ಕೊಲ್ಲು; ಕೆಟ್ಟ ಹೆಸರಿಟ್ಟರೆ ಅದು ಸ್ಥಿರವಾಗುತ್ತದೆ, ನಿಲ್ಲುತ್ತದೆ.
  11. go to the dogs ಹಾಳಾಗಿ ಹೋಗು; ನಾಶವಾಗಿ ಹೋಗು; ನೈತಿಕವಾಗಿ ಯಾ ಶಾರೀರಕವಾಗಿ ಅವನತಿ ಹೊಂದು.
  12. hair of the dog that bit one ಅಮಲಿಳಿಕೆಯ ಕುಡಿತ; ಅಮಲು ಪರಿಹಾರದ ಕುಡಿತ; ಕುಡಿತದ ಮತ್ತನ್ನು ಯಾ ಪರಿಣಾಮವನ್ನು ಇಳಿಸಲು ಮತ್ತೆ ಕುಡಿಯುವ ಕುಡಿತ.
  13. help a lame dog over a stile (ಇತರರ) ಕಷ್ಟಕ್ಕಾಗು; (ಇತರರ) ಕಷ್ಟ ಕಾಲದಲ್ಲಿ ನೆರವಾಗು.
  14. keep a dog and bark oneself ನಾಯಿಯನ್ನು ಸಾಕಿ ತಾನೇ ಬೊಗಳು; ಆಳು ಕಾಳುಗಳನ್ನಿಟ್ಟುಕೊಂಡಿದ್ದರೂ ತಾನೇ ಕೆಲಸ ಮಾಡು.
  15. lead a dog’s life ನಾಯಿಪಾಡು ಪಡು; ತೊಂದರೆ ಪಡು; ಬೇಜಾರಿನ ಯಾ ಕಿರಿಕಿರಿಯ ಸ್ಥಿತಿಯಲ್ಲಿರು.
  16. lead one a dog’s life ನಾಯಿಪಾಡು ಪಡಿಸು; ಗೋಳುಗುಟ್ಟಿಸು; ಕಷ್ಟದಲ್ಲಿ ಸಿಕ್ಕಿಸು.
  17. let sleeping dogs lie ಕೆಡುಕನ್ನು ಕೆಣಕಬೇಡ; ಬೀದಿಯಲ್ಲಿ ಹೋಗುವ ಮಾರಿಯನ್ನು ಒಳಕ್ಕೆ ಕರೆಯಬೇಡ.
  18. like a dog’s dinner (ಆಡುಮಾತು) (ಉಡುಪು, ಅಣಿಗೊಳಿಸಿರುವುದು, ಮೊದಲಾದವುಗಳ ವಿಷಯದಲ್ಲಿ) ಠೀಕಾಗಿ; ಎದ್ದುಕಾಣುವಂತೆ; ನೀಟಾಗಿ; ಷೋಕಿಯಾಗಿ.
  19. like a dog with two tails ಎರಡು ಬಾಲದ ನಾಯಿಂತೆ; ಸಂತೋಷದಿಂದ; ಖುಷಿಯಾಗಿ; ಆನಂದಭರಿತನಾಗಿ.
  20. love me, love my dog ನನ್ನ ಮೇಲೆ ಪ್ರೀತಿ ಇದ್ದರೆ ನನ್ನವರ ಮೇಲೂ ಪ್ರೀತಿ ಇಡು; ನನ್ನ ಸ್ನೇಹಿತರನ್ನೂ ನಿನ್ನ ಸ್ನೇಹಿತರಂತೆ ಕಾಣು; ನನ್ನನ್ನು ಪ್ರೀತಿಸುವುದಾದರೆ ನನಗೆ ಬೇಕಾದವರನ್ನೂ ಪ್ರೀತಿಸು.
  21. not a dog’s chance ಎಳ್ಳಷ್ಟೂ ಅವಕಾಶವಿಲ್ಲ; ಏನೇನೂ ಅವಕಾಶವಿಲ್ಲ.
  22. not have word to throw at a dog ಯಾರೊಡನೆಯೂ ಮಾತನಾಡದೆ ಬಿಗುಮಾನದಿಂದ ಇರು, ಮೌನದಿಂದ ಇರು.
  23. put on dog (ಆಡುಮಾತು) ಆಡಂಬರದಿಂದ ವರ್ತಿಸು; ಪ್ರತಿಷ್ಠೆ ತೋರಿಸಿಕೊ; ಜರ್ಬುತೋರು.
  24. rain cats and dogs ಕುಂಭ ದ್ರೋಣವಾಗಿ ಸುರಿ; ಹುಚ್ಚುಮಳೆ ಹುಯ್ಯು; ಭಾರಿ ಮಳೆ ಸುರಿ.
  25. the dogs (ಬ್ರಿಟಿಷ್‍ ಪ್ರಯೋಗ ಆಡುಮಾತು) ಬೇಟೆನಾಯಿಗಳ – ರೇಸು, ಜೂಜಿನ ಕೂಟ.
  26. throw to the dogs
    1. ಕೆಲಸಕ್ಕೆ ಬಾರದ್ದೆಂದು ಬಿಸಾಡು; ನಿಷ್ಪ್ರಯೋಜಕವೆಂದು ಎಸೆದುಬಿಡು.
    2. (ಸ್ವಾರ್ಥಕ್ಕಾಗಿ ಬೇರೊಂದನ್ನು, ಬೇರೊಬ್ಬರನ್ನು) ಬಲಿಕೊಡು.
  27. try it on the dog ನಾಯಿಯ ಮೇಲೆ ಪ್ರಯೋಗಿಸು; ಕಳಪೆ ಯಾ ಅಮುಖ್ಯ ವ್ಯಕ್ತಿ, ವಸ್ತುವಿಗೆ ಮಾತ್ರ ತೊಂದರೆಯಾಗುವಂತೆ ಅವುಗಳ ಮೇಲೆ ಪ್ರಯೋಗಮಾಡು.