See also 2split  3split
1split ಸ್ಪ್ಲಿಟ್‍
ಕ್ರಿಯಾಪದ
(ವರ್ತಮಾನ ಕೃದಂತ splitting; ಭೂತರೂಪ ಮತ್ತು ಭೂತಕೃದಂತ ಅದೇ).
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಉದ್ದುದ್ದವಾಗಿ) ಸೀಳು; ಒಡೆ; ಸಿಗಿ.
  2. ಪರಮಾಣುವನ್ನು -ವಿದಳನ ಗೊಳಿಸು, ವಿದಳನಗೊಳ್ಳುವಂತೆ ಮಾಡು.
  3. ವಿಭಾಗಿಸು; ಭಾಗಗಳಾಗಿ ಒಡೆ, ಬೇರ್ಪಡಿಸು: split it into three layers ಅದನ್ನು ಮೂರು ಪದರಗಳನ್ನಾಗಿ ವಿಭಾಗಿಸು. the job was split up among the six of us ಆ ಕೆಲಸವನ್ನು ನಮಗೆ, ಆರೂ ಜನಕ್ಕೆ, ಭಾಗ ಮಾಡಿ ಕೊಡಲಾಯಿತು. the three of them split a bottle of wine ಆ ಮೂರು ಮಂದಿಯೂ ಒಂದು ಸೀಸೆ ವೈನನ್ನು ವಿಭಾಗ ಮಾಡಿಕೊಂಡರು.
  4. (ಅಮೆರಿಕನ್‍ ಪ್ರಯೋಗ) (ಆಡುಮಾತು) (ವಿಸ್ಕಿ ಮೊದಲಾದವನ್ನು) ನೀರು ಬೆರೆಸಿ ತೆಳುಗೊಳಿಸು, ದುರ್ಬಲಗೊಳಿಸು.
  5. ಮುರಿದು ತೆಗೆದು ಹಾಕು.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಉದ್ದುದ್ದವಾಗಿ) ಸೀಳಿಹೋಗು; ಒಡೆದುಹೋಗು; ಸಿಗಿದುಹೋಗು.
  2. (ಹಡಗಿನ ವಿಷಯದಲ್ಲಿ) ಒಡೆದುಹೋಗು; ಭಗ್ನವಾಗು.
  3. (ಪರಮಾಣುವಿನ ವಿಷಯದಲ್ಲಿ) ಒಡೆ.
  4. (ಮುಖ್ಯವಾಗಿ ಭಿನ್ನಾಭಿಪ್ರಾಯ ಯಾ ವೈಷಮ್ಯದಿಂದಾಗಿ) ವಿರುದ್ಧ ಪಕ್ಷಗಳಾಗಿ – ವಿಭಾಗವಾಗು; ಒಡೆ; ಪ್ರತ್ಯೇಕವಾಗು; ಬೇರ್ಪಡು; ಕಕ್ಷಿ ಗಳಾಗು; ಪಕ್ಷ ಪ್ರತಿಪಕ್ಷಗಳಾಗು ( ಸಕರ್ಮಕ ಕ್ರಿಯಾಪದ ಸಹ): split up after ten years ಹತ್ತು ವರ್ಷಗಳ ಅನಂತರ ಬೇರೆಯಾದರು. they were split on the question of voting ಮತ ಚಲಾಯಿಸುವ ವಿಷಯದಲ್ಲಿನ ಭಿನ್ನಾಭಿಪ್ರಾಯದಿಂದ ಅವರು ಬೇರ್ಪಟ್ಟರು. the two split up after ten years together ಆ ಇಬ್ಬರೂ ಹತ್ತು ವರ್ಷ ಕಾಲ ಒಟ್ಟಿಗಿದ್ದ ಬಳಿಕ ವಿಭಾಗವಾದರು, ಬೇರ್ಪಟ್ಟರು, ಪ್ರತ್ಯೇಕಗೊಂಡರು. split into groups ಗುಂಪುಗಳಾಗಿ ಒಡೆದುಹೋಗು.
  5. ಮುರಿದು ಬೀಳು; ಬೇರ್ಪಡು.
  6. (ಮುಖ್ಯವಾಗಿ ಇದ್ದಕ್ಕಿದ್ದಂತೆ) ಹೊರಟುಬಿಡು, ಹೋಗು ( ಸಕರ್ಮಕ ಕ್ರಿಯಾಪದ ಸಹ).
  7. (ವ್ಯಕ್ತಿ ಮೊದಲಾದವರೊಡನೆ)
    1. ಜಗಳವಾಡು.
    2. ಸಂಗ ಬಿಡು; ಸಂಪರ್ಕ ತೊರೆ ( ಸಕರ್ಮಕ ಕ್ರಿಯಾಪದ ಸಹ).
    1. (ತಲೆಯ ವಿಷಯದಲ್ಲಿ) (ತಲೆನೋವು, ಗಲಾಟೆ, ಮೊದಲಾದವುಗಳಿಂದಾಗಿ) ಸಿಡಿ; ಬಾಧೆ ಕೊಡು; ತೀವ್ರ ಯಾತನೆ ಉಂಟುಮಾಡು: my head is splitting ನನ್ನ ತಲೆ ಸಿಡಿಯುತ್ತಿದೆ.
    2. (ಮುಖ್ಯವಾಗಿ ತಲೆನೋವಿನ ವಿಷಯದಲ್ಲಿ) ತುಂಬಾ ನೋಯು; ತೀವ್ರವಾಗಿರು.
  8. (ಆಡುಮಾತು) ಗುಟ್ಟು ರಟ್ಟುಮಾಡು; ಸಹಾಪರಾಧಿಯ ಮೇಲೆ ಮಾಹಿತಿ, ಸುದ್ದಿ ಕೊಡು: split on them to the police ಅವರ ಮೇಲೆ ಪೊಲೀಸರಿಗೆ ಸುದ್ದಿ ಕೊಟ್ಟ.
ಪದಗುಚ್ಛ
  1. split hairs ಕೂದಲು ಸೀಳು; ಅತಿ ಸೂಕ್ಷ ಭೇದ, ತಾರತಮ್ಯ ಮಾಡು.
  2. split one’s sides ಹೊಟ್ಟೆಯೆಲ್ಲ ಬಿರಿಯುವಂತೆ, ಹುಣ್ಣಾಗುವಂತೆ – ನಗು.
  3. split the difference
    1. ಮುಂದಿಟ್ಟ ಎರಡು ಮೊತ್ತಗಳ ಸರಾಸರಿ ತೆಗೆದುಕೊ.
    2. ಹೀಗೆ ಸರಾಸರಿ ತೆಗೆದು – ಹಂಚು, ಪಾಲು ಮಾಡಿಕೊಡು.
    3. ಹೀಗೆ ಹಂಚಿಕೊಂಡು ರಾಜಿಯಾಗು, ರಾಜಿ ಮಾಡಿಕೊ.
  4. split the ticket (or one’s vote) (ಅಮೆರಿಕನ್‍ ಪ್ರಯೋಗ) ಎದುರಾಳಿಗಳಾದ ಸ್ಪರ್ಧಿಗಳಿಗೆ ತನ್ನ ಮತಗಳನ್ನು ಹಂಚಿಕೊಡು; ಒಂದು ಪಕ್ಷಕ್ಕಿಂತ ಹೆಚ್ಚಿನ (ಉಮೇದುವಾರರಿಗೆ) ವೋಟು ಮಾಡು.
  5. split the vote (ಬ್ರಿಟಿಷ್‍ ಪ್ರಯೋಗ) (ಅಭ್ಯರ್ಥಿಯ ಯಾ ಅಲ್ಪಮತೀಯ ಪಕ್ಷದ ವಿಷಯದಲ್ಲಿ) ಪ್ರತಿಸ್ಪರ್ಧಿಯ ಮತಗಳನ್ನು ಒಡೆ; ತನ್ನ ಕಡೆಗೆ ಸೆಳೆದುಕೊಂಡು, ಮೂರನೆಯವನ ಕೈಯಲ್ಲಿ ಇಬ್ಬರೂ ಸೋಲುವಂತಾಗು.
  6. split with =
    1. ಒಬ್ಬನ ಸಂಬಂಧ ತೊರೆ; ಒಬ್ಬನಿಂದ ದೂರವಾಗು.
    2. ಜಗಳವಾಡು.