See also 2gum  3gum  4gum
1gum ಗಮ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಒಸಡು; ಬಾಯಲ್ಲಿ ಹಲ್ಲುಗಳು ಹುಗಿದಿರುವ ಗಟ್ಟಿ ಮಾಂಸ.

See also 1gum  3gum  4gum
2gum ಗಮ್‍
ನಾಮವಾಚಕ
  1. ಗೋಂದು; ಬಂಟೆ; ಅಂಟು.
  2. ಕಣ್ಣ – ಕಸರು, ಪಿಸುರು.
  3. ಗಮ್‍; ಗೋಂದು ಮಿಠಾಯಿ; ಜಿಲೆಟಿನ್‍ ಮೊದಲಾದವುಗಳಿಂದ ತಯಾರಿಸಿದ ಪಾರದರ್ಶಕವಾದ ಗಟ್ಟಿ ಮಿಠಾಯಿ.
  4. ಗೋಂದು (ಸ್ರವಿಸುವ) ಮರ.
  5. ಬಂಕೆ ರೋಗ; ಗೋಂದು ಬೇನೆ; ಹಣ್ಣು ಗಿಡಗಳಲ್ಲಿ ಅಂಟು ಸುರಿಯುವ ರೋಗ.
  6. (ಅಮೆರಿಕನ್‍ ಪ್ರಯೋಗ) = gumboot.
  7. (ಅಮೆರಿಕನ್‍ ಪ್ರಯೋಗ) = chewing-gum.
  8. ರೇಷ್ಮೆ ಮೇಣ; ರೇಷ್ಮೆ ಅಂಟು; ಹಸಿ ಯಾ ಸಂಸ್ಕರಿಸದ ರೇಷ್ಮೆ ಎಳೆಗಳ ಸುತ್ತ ಇರುವ ಮೇಣದಂಥ ಅಂಟು ಪದಾರ್ಥ.
  9. ಪೆಟ್ರೋಲಿಯಂ ಮೊದಲಾದವುಗಳಲ್ಲಿರುವ ಗಷ್ಟು.
See also 1gum  2gum  4gum
3gum ಗಮ್‍
ಕ್ರಿಯಾಪದ
(ವರ್ತಮಾನ ಕೃದಂತ gumming, ಭೂತರೂಪ ಮತ್ತು ಭೂತಕೃದಂತ gummed).
ಸಕರ್ಮಕ ಕ್ರಿಯಾಪದ
  1. ಗೋಂದಿನಿಂದ, ಗೋಂದು ಬಳಿದು – ರಟ್ಟಾಗಿಸು, ರಟ್ಟಿನಂತಾಗಿಸು.
  2. ಗೋಂದು – ಹಾಕು, ಬಳಿ, ಹಚ್ಚು, ಲೇಪಿಸು.
  3. ಗೋಂದಿನಿಂದ (ಯಾವುದನ್ನೇ) ಭದ್ರವಾಗಿ – ಅಂಟಿಸು, ಸೇರಿಸು, ಬಂಧಿಸು.
ಅಕರ್ಮಕ ಕ್ರಿಯಾಪದ

(ಹಣ್ಣಿನ ಗಿಡದ ಯಾ ಮರದ ವಿಷಯದಲ್ಲಿ) (ರೋಗದಿಂದ) ಗೋಂದು ಸುರಿಸು, ಅಂಟು – ಸೋರಿಸು, ಸ್ರವಿಸು, ಜಿನುಗು, ಒಸರು.

ಪದಗುಚ್ಛ

gum up ಅಡಚಣೆ ಮಾಡು; ಅಡ್ಡಿಪಡಿಸು; ಹಾಳು ಮಾಡು; ಎಕ್ಕಹುಟ್ಟಿಸು; ಹೊಲಬುಗೆಡಿಸು; ಸುಸೂತ್ರವಾಗಿ ನಡೆಯುವುದರ ಮಧ್ಯೆ ಪ್ರವೇಶಿಸು: gum up the works ಕೆಲಸಗಳಿಗೆ ಅಡ್ಡಿಪಡಿಸು.

See also 1gum  2gum  3gum
4gum ಗಮ್‍
ನಾಮವಾಚಕ

(ಅಸಂಸ್ಕೃತ) (ಆಣೆಗಳು, ಉದ್ಗಾರಗಳು, ಮೊದಲಾದವುಗಳಲ್ಲಿ) ದೇವರು: by gum ದೇವರಾಣೆ!