(ನಗರ, ಕಟ್ಟಡ, ಮೊದಲಾದವುಗಳ) ನಿರ್ಮಾಪಕ; ನಿರ್ಮಾಣದಲ್ಲಿ ಯಾ ನಿರ್ಮಾಣವಾಗುವಾಗ ಪ್ರಧಾನ ಪಾತ್ರ ವಹಿಸುವವನು.
(ಸಂಘ, ಸಂಸ್ಥೆ, ಮತ, ಮೊದಲಾದವುಗಳ) ಸ್ಥಾಪಕ; ಆದ್ಯ ಪ್ರವರ್ತಕ.
(ಸಂಸ್ಥೆಯ) ಉಂಬಳಿದಾತ; ದತ್ತಿದಾನಿ; ಸ್ಥಾಪಕದಾನಿ; ಸಂಸ್ಥೆ ಮೊದಲಾದವನ್ನು ಸ್ಥಾಪಿಸಿ ನಡೆದುಕೊಂಡು ಹೋಗಲು ದತ್ತಿ, ಮಾನ್ಯ ಬಿಡುವವನು.
ಪದಗುಚ್ಛ
founder’s kin (ಬ್ರಿಟಿಷ್ ಪ್ರಯೋಗ) (ಚುನಾವಣೆಗೆ ಯಾ ಸವಲತ್ತುಗಳಿಗೆ ವಿಶೇಷ ಹಕ್ಕುಳ್ಳ) ಸ್ಥಾಪಕನ ಬಳಗ; ಸ್ಥಾಪಕನ ಬಂಧುವರ್ಗ.
founder’s shares ಸ್ಥಾಪಕರ ಷೇರುಗಳು; ಉದ್ಯಮವನ್ನು ವಹಿಸಿಕೊಂಡದ್ದಕ್ಕಾಗಿ ಭಾಗಶಃ ರಿಯಾಯಿತಿಯಾಗಿ ಸಾರ್ವಜನಿಕ ಕಂಪನಿಯ ಸ್ಥಾಪಕರಿಗೆ ನೀಡುವ, ಸಾಮಾನ್ಯ ಬಂಡವಾಳದಿಂದ ಬೇರೆಯಾದ ಷೇರುಗಳು.
(ಕುದುರೆಯನ್ನು) ಹೆಚ್ಚು ದಣಿಸಿ ಬೀಳಿಸು; ಕುಸಿದುಬೀಳುವಂತೆ ಮಾಡು.
(ಹಡಗನ್ನು) ನೀರು ತುಂಬಿ ಮುಳುಗುವಂತೆ ಮಾಡು; ನೀರು ತುಂಬಿಸಿ ಮುಳುಗಿಸು.
ಅಕರ್ಮಕ ಕ್ರಿಯಾಪದ
(ಭೂಮಿ, ಕಟ್ಟಡ, ಮೊದಲಾದವು) ಕೆಡೆದು ಬೀಳು; ಕುಸಿದುಬೀಳು: the building has foundered 10 ft. ಕಟ್ಟಡ ಹತ್ತು ಅಡಿ ಕುಸಿದು ಬಿದ್ದಿದೆ.
ಮುರಿದು ಬೀಳು; ಬಿದ್ದು ಹೋಗು.
(ಕುದುರೆ ಯಾ ಸವಾರ) ಸುಸ್ತಾಗಿ ಬೀಳು; ಕುಸಿದುಬೀಳು; ದಣಿದು ಕುಸಿ.
(ಕುದುರೆ ಯಾ ಸವಾರ) ಕುಂಟು ಬೀಳು: his horse foundered on the rocky path ಆತನ ಕುದುರೆ ಕಲ್ಲುದಾರಿಯಲ್ಲಿ ಕುಂಟುಬಿದ್ದು ಬಿಟ್ಟಿತು.
(ಬದಿನೆಲ, ಉಸುಬು, ಮೊದಲಾದವುಗಳಲ್ಲಿ) ಸಿಕ್ಕಿಕೊ; ಹೂತುಕೊ: the sheep foundered in the deep snow ಕುರಿಗಳು ಆಳವಾದ ಮಂಜಿನ ರಾಶಿಯಲ್ಲಿ ಸಿಕ್ಕಿಕೊಂಡವು.
(ಹಡಗಿನ ವಿಷಯದಲ್ಲಿ) ನೀರು ತುಂಬಿ ಮುಳುಗು.
(ಗಾಲ್ಫ್‍ಆಟದಲ್ಲಿ) ಚೆಂಡನ್ನು ನೆಲದೊಳಕ್ಕೆ ಹೊಡೆ.
(ಯೋಜನೆ ಮೊದಲಾದವು) ಕುಸಿದುಬೀಳು; ಭಗ್ನವಾಗು: the project foundered because public support was lacking ಸಾರ್ವಜನಿಕ ಬೆಂಬಲ ಸಾಲದೆ ಯೋಜನೆ ವಿಫಲಗೊಂಡಿತು.
(ಮಿತಿಈರಿ ತಿಂದು) ರೋಗ ತಂದುಕೊ: ಕಾಯಿಲೆಬೀಳು; ಆರೋಗ್ಯ ಕೆಡಿಸಿಕೊ; ಅಸ್ವಸ್ಥವಾಗು: a pet may founder if fed irregularly ಹೊತ್ತುಗೊತ್ತಿಲ್ಲದೆ ಮಿತಿಈರಿ ಉಣಿಸಿದರೆ ಮುದ್ದುಪ್ರಾಣಿ ಕಾಯಿಲೆ ಬೀಳಬಹುದು.