See also 1founder  2founder  4founder
3founder ಹೌಂಡರ್‍
ಸಕರ್ಮಕ ಕ್ರಿಯಾಪದ
  1. (ಕುದುರೆಯನ್ನು) ಹೆಚ್ಚು ದಣಿಸಿ ಬೀಳಿಸು; ಕುಸಿದುಬೀಳುವಂತೆ ಮಾಡು.
  2. (ಹಡಗನ್ನು) ನೀರು ತುಂಬಿ ಮುಳುಗುವಂತೆ ಮಾಡು; ನೀರು ತುಂಬಿಸಿ ಮುಳುಗಿಸು.
ಅಕರ್ಮಕ ಕ್ರಿಯಾಪದ
  1. (ಭೂಮಿ, ಕಟ್ಟಡ, ಮೊದಲಾದವು) ಕೆಡೆದು ಬೀಳು; ಕುಸಿದುಬೀಳು: the building has foundered 10 ft. ಕಟ್ಟಡ ಹತ್ತು ಅಡಿ ಕುಸಿದು ಬಿದ್ದಿದೆ.
  2. ಮುರಿದು ಬೀಳು; ಬಿದ್ದು ಹೋಗು.
  3. (ಕುದುರೆ ಯಾ ಸವಾರ) ಸುಸ್ತಾಗಿ ಬೀಳು; ಕುಸಿದುಬೀಳು; ದಣಿದು ಕುಸಿ.
  4. (ಕುದುರೆ ಯಾ ಸವಾರ) ಕುಂಟು ಬೀಳು: his horse foundered on the rocky path ಆತನ ಕುದುರೆ ಕಲ್ಲುದಾರಿಯಲ್ಲಿ ಕುಂಟುಬಿದ್ದು ಬಿಟ್ಟಿತು.
  5. (ಬದಿನೆಲ, ಉಸುಬು, ಮೊದಲಾದವುಗಳಲ್ಲಿ) ಸಿಕ್ಕಿಕೊ; ಹೂತುಕೊ: the sheep foundered in the deep snow ಕುರಿಗಳು ಆಳವಾದ ಮಂಜಿನ ರಾಶಿಯಲ್ಲಿ ಸಿಕ್ಕಿಕೊಂಡವು.
  6. (ಹಡಗಿನ ವಿಷಯದಲ್ಲಿ) ನೀರು ತುಂಬಿ ಮುಳುಗು.
  7. (ಗಾಲ್ಫ್‍ಆಟದಲ್ಲಿ) ಚೆಂಡನ್ನು ನೆಲದೊಳಕ್ಕೆ ಹೊಡೆ.
  8. (ಯೋಜನೆ ಮೊದಲಾದವು) ಕುಸಿದುಬೀಳು; ಭಗ್ನವಾಗು: the project foundered because public support was lacking ಸಾರ್ವಜನಿಕ ಬೆಂಬಲ ಸಾಲದೆ ಯೋಜನೆ ವಿಫಲಗೊಂಡಿತು.
  9. (ಮಿತಿಈರಿ ತಿಂದು) ರೋಗ ತಂದುಕೊ: ಕಾಯಿಲೆಬೀಳು; ಆರೋಗ್ಯ ಕೆಡಿಸಿಕೊ; ಅಸ್ವಸ್ಥವಾಗು: a pet may founder if fed irregularly ಹೊತ್ತುಗೊತ್ತಿಲ್ಲದೆ ಮಿತಿಈರಿ ಉಣಿಸಿದರೆ ಮುದ್ದುಪ್ರಾಣಿ ಕಾಯಿಲೆ ಬೀಳಬಹುದು.