See also 2founder  3founder  4founder
1founder ಹೌಂಡರ್‍
ನಾಮವಾಚಕ
  1. (ನಗರ, ಕಟ್ಟಡ, ಮೊದಲಾದವುಗಳ) ನಿರ್ಮಾಪಕ; ನಿರ್ಮಾಣದಲ್ಲಿ ಯಾ ನಿರ್ಮಾಣವಾಗುವಾಗ ಪ್ರಧಾನ ಪಾತ್ರ ವಹಿಸುವವನು.
  2. (ಸಂಘ, ಸಂಸ್ಥೆ, ಮತ, ಮೊದಲಾದವುಗಳ) ಸ್ಥಾಪಕ; ಆದ್ಯ ಪ್ರವರ್ತಕ.
  3. (ಸಂಸ್ಥೆಯ) ಉಂಬಳಿದಾತ; ದತ್ತಿದಾನಿ; ಸ್ಥಾಪಕದಾನಿ; ಸಂಸ್ಥೆ ಮೊದಲಾದವನ್ನು ಸ್ಥಾಪಿಸಿ ನಡೆದುಕೊಂಡು ಹೋಗಲು ದತ್ತಿ, ಮಾನ್ಯ ಬಿಡುವವನು.
ಪದಗುಚ್ಛ
  1. founder’s kin (ಬ್ರಿಟಿಷ್‍ ಪ್ರಯೋಗ) (ಚುನಾವಣೆಗೆ ಯಾ ಸವಲತ್ತುಗಳಿಗೆ ವಿಶೇಷ ಹಕ್ಕುಳ್ಳ) ಸ್ಥಾಪಕನ ಬಳಗ; ಸ್ಥಾಪಕನ ಬಂಧುವರ್ಗ.
  2. founder’s shares ಸ್ಥಾಪಕರ ಷೇರುಗಳು; ಉದ್ಯಮವನ್ನು ವಹಿಸಿಕೊಂಡದ್ದಕ್ಕಾಗಿ ಭಾಗಶಃ ರಿಯಾಯಿತಿಯಾಗಿ ಸಾರ್ವಜನಿಕ ಕಂಪನಿಯ ಸ್ಥಾಪಕರಿಗೆ ನೀಡುವ, ಸಾಮಾನ್ಯ ಬಂಡವಾಳದಿಂದ ಬೇರೆಯಾದ ಷೇರುಗಳು.