See also 2foul  3foul  4foul
1foul ಹೌಲ್‍
ಗುಣವಾಚಕ
  1. ಹೊಲಸು; ಗಬ್ಬು; ಹೇಸಿಕೆಯಾದ; ಅಸಹ್ಯಕರ; ಜುಗುಪ್ಸೆ ಹುಟ್ಟಿಸುವ; ಗಬ್ಬುನಾತದ; ನಾರುವ.
  2. ಕೊಳೆಯಾದ; ಮಲಿನ; ಮಾಸಿದ; ಮೈಲಿಗೆಯ; ಗಲೀಜಾದ; ಕೊಳಕಾದ: foul linen ಕೊಳಕು, ಮಾಸಿದ, ಮೈಲಿಗೆ – ಬಟ್ಟೆ.
  3. (ಅಶಿಷ್ಟ) ಹೇಸಿಕೆ ಬರಿಸುವ; ಅಸಹ್ಯಪಡಿಸುವ; ಜುಗುಪ್ಸೆ ಉಂಟುಮಾಡುವ; ಹೇವರಿಕೆ ಹುಟ್ಟಿಸುವ.
  4. (ತಿದ್ದುಪಡಿಗಳಿಂದ) ವಿಕಾರವಾದ; ಚಿತ್ತಾದ; ಚಿತ್ತುಚಿತ್ತಾದ: foul copy ಚಿತ್ತುಪ್ರತಿ.
  5. ಕೆಟ್ಟ; ಅಶುದ್ಧ; ಮಲಿನ; ಅನಾರೋಗ್ಯಕರ; ಆರೋಗ್ಯ ಕೆಡಿಸುವ ಪದಾರ್ಥದಿಂದ ಕೂಡಿದ: foul air ಕೆಟ್ಟಗಾಳಿ. foul water ಕೆಟ್ಟ ನೀರು.
  6. ಅಡಚಿಕೊಂಡಿರುವ; ಕೊಳೆ ಸೇರಿಕೊಂಡಿರುವ; ಕಸ ಕಟ್ಟಿಕೊಂಡಿರುವ: foul gun-barrel ಅಡಚಿಕೊಂಡಿರುವ ಬಂದೂಕು ನಳಿಕೆ.
  7. (ಹಡಗಿನ ತಳದ ವಿಷಯದಲ್ಲಿ) ಜೊಂಡು, ಚಿಪ್ಪಿನ ಪ್ರಾಣಿ, ಮೊದಲಾದವುಗಳಿಂದ ಕಟ್ಟಿಕೊಂಡ.
  8. ನೀತಿಗೆಟ್ಟ; ಹೊಲಸು ನಡತೆಯ; ಅನೈತಿಕ; ಅಶ್ಲೀಲ; ಹೇಯ ನೀಚ.
  9. ಕೆಟ್ಟ ಮಾತು ಬಯ್ಯುವ; ಹೊಲಸು ಮಾತಿನ: foul-mouthed ಹೊಲಸು ಬಾಯಿಯ; ಕೆಟ್ಟ ಬಯ್ಗುಳ ಬಯ್ಯುವ.
  10. (ತತ್ತಿ ಹಾಕುವ ಯಾ ಹಾಕಿದ ಮೇಲಿನ ಈನಿನ ವಿಷಯದಲ್ಲಿ) ಕೆಟ್ಟು ಹೋದ; ಕೆಟ್ಟಸ್ಥಿತಿಯಲ್ಲಿರುವ.
  11. ವಿಕಾರವಾದ ಅವಲಕ್ಷಣದ; ಕುರೂಪದ: fair or foul ಸುರೂಪಿ ಅಥವಾ ಕುರೂಪಿ.
  12. ಅನ್ಯಾಯದ; ಅಕ್ರಮ; ಭಂಡ; ಸರಿಯಲ್ಲದ; ಭಂಡಾಟದ; ಆಟ ಮೊದಲಾದವುಗಳಲ್ಲಿ ನಿಯಮಗಳಿಗೆ ವಿರುದ್ಧವಾದ: foul blow ಅನ್ಯಾಯದ ಏಟು.
  13. (ಹವಾಮಾನದ ವಿಷಯದಲ್ಲಿ)
    1. (ಮಳೆಯಿಂದ) ತಂಡಿಯಾದ.
    2. ಕೆರಳಿದ; ಶಾಂತವಾಗಿರದ.
    3. ಬಿರುಗಾಳಿಯಿಂದ ಕೂಡಿದ; ಅಲ್ಲೋಲಕಲ್ಲೋಲವಾದ; ಪ್ರಕ್ಷುಬ್ಧ.
  14. (ಗಾಳಿಯ ವಿಷಯದಲ್ಲಿ) ಎದುರು ಬೀಸುವ; ಪ್ರತಿಕೂಲವಾದ.
  15. ಡಿಕ್ಕಿಹೊಡೆದ; ಸಂಘಟ್ಟಿಸಿದ.
  16. ತೊಡಕಾದ; ತೊಡರಿಕೊಂಡ; ಸಿಕ್ಕುಸಿಕ್ಕಾದ; ಗಂಟುಗಂಟಾದ: rope is foul ಹಗ್ಗ ಸಿಕ್ಕು ಸಿಕ್ಕಾಗಿದೆ.
ಪದಗುಚ್ಛ
  1. foul deed ಹೇಯಕೃತ್ಯ; ನೀತಿಗೆಟ್ಟ ಕೃತ್ಯ; ದುಷ್ಕೃತ್ಯ.
  2. foul line ಆಟದ ಗೆರೆ; ಆಟದ ಮೈದಾನದಲ್ಲಿ ಆಡಬೇಕಾದ ಪ್ರದೇಶ ಮೊದಲಾದವುಗಳ ಎಲ್ಲೆಯನ್ನು ಗುರುತಿಸುವ ಗೆರೆ.
  3. foul motive ನೀಚ ಉದ್ದೇಶ.
  4. the foul fiend ಸೈತಾನ.
ನುಡಿಗಟ್ಟು

fall foul of ಘರ್ಷಿಸು; ಜಗಳವಾಡು; ಮೇಲೆಬೀಳು.

See also 1foul  3foul  4foul
2foul ಹೌಲ್‍
ನಾಮವಾಚಕ
  1. ಹೊಲಸಾದದ್ದು; ಹೊಲಸು (ವಸ್ತು).
  2. (ಮುಖ್ಯವಾಗಿ ಕುದುರೆ ಸವಾರಿ, ದೋಣಿ ನಡಸುವುದು, ಓಟ ಮೊದಲಾದವುಗಳಲ್ಲಿ) ಡಿಕ್ಕಿ ಹೊಡೆಯುವುದು ಯಾ ತೊಡರು ಹಾಕಿಕೊಳ್ಳುವುದು.
  3. (ಕ್ರೀಡೆಗಳಲ್ಲಿ) ಹೌಲು; ನಿಯಮಗಳ ಉಲ್ಲಂಘನೆ; ಭಂಡಾಟ; ತಪ್ಪಾಟ.
ನುಡಿಗಟ್ಟು

through foul and fair ಎಲ್ಲ ಸ್ಥಿತಿಗಳಲ್ಲೂ; ಒಳ್ಳೆಯ ಕಾಲದಲ್ಲೂ ಕೆಟ್ಟ ಕಾಲದಲ್ಲೂ.

See also 1foul  2foul  4foul
3foul ಹೌಲ್‍
ಕ್ರಿಯಾವಿಶೇಷಣ

ಅಕ್ರಮವಾಗಿ ಅವನನ್ನು ಹೊಡೆ.

ನುಡಿಗಟ್ಟು

play one foul ವಿಶ್ವಾಸಘಾತಮಾಡು; ದ್ರೋಹದಿಂದ ವರ್ತಿಸು.

See also 1foul  2foul  3foul
4foul ಹೌಲ್‍
ಸಕರ್ಮಕ ಕ್ರಿಯಾಪದ
  1. ಕೊಳೆಮಾಡು; ಹೊಲಸೆಬ್ಬಿಸು; ಗಬ್ಬುಮಾಡು; ಮಲಿನಗೊಳಿಸು; ಗಲೀಜುಮಾಡು.
  2. ಅಪರಾಧದ ಕಳಂಕ ಹಚ್ಚು; ಮಸಿಬಳಿ; ಕಪ್ಪುಹಚ್ಚು; ಮರ್ಯಾದೆ ಕೆಡಿಸು; ಹೆಸರುಕೆಡಿಸು.
  3. (ಲಂಗರು, ಹೊರಜಿ – ಇವನ್ನು) ಸಿಕ್ಕುಗಟ್ಟಿಸು; ಗೋಜು ಬೀಳಿಸು; ತೊಡರಿಕೊಳ್ಳುವಂತೆ ಮಾಡು.
  4. (ಅಡ್ಡಮಾರ್ಗ, ರೈಲುಮಾರ್ಗ, ವಾಹನ ಮತ್ತು ಜನಸಂಚಾರಗಳನ್ನು) ಕಿಕ್ಕಿರಿಸು; ಅಡಚು; ಬಂದು ಮಾಡು; ತಡೆಗಟ್ಟು; ಅಡಚಣೆಮಾಡು.
  5. ಡಿಕ್ಕಿ ಹೊಡೆ; ಸಂಘಟ್ಟಿಸು: keep to the left, or you will foul me ಎಡಗಡೆಗೇ ಇರು, ಇಲ್ಲದಿದ್ದರೆ ನನಗೆ ಡಿಕ್ಕಿ ಹೊಡೆಯುತ್ತೀಯೆ.
  6. (-ಒಡನೆ) ವಿವಾದದಲ್ಲಿ ಸಿಕ್ಕಿಹಾಕಿಕೊ.
  7. (ಆಡುಮಾತು) ಹಾಳುಮಾಡು; ಕುಲಗೆಡಿಸು; ಎಡವಟ್ಟುಮಾಡು; ಅವ್ಯವಸ್ಥೆ ಮಾಡು.
  8. (ಆಟಗಾರನ ವಿರುದ್ಧ) ಹೌಲುಮಾಡು; ತಪ್ಪಾಟಮಾಡು; ನಿಯಮಕ್ಕೆ ವಿರುದ್ಧವಾಗಿ ಆಡು.
ಅಕರ್ಮಕ ಕ್ರಿಯಾಪದ
  1. ಹೊಲಸಾಗು; ಕೊಳಕಾಗು; ಮಲಿನವಾಗು.
  2. ಅಡಚಿಕೊಳ್ಳು; ಕಸಕಡ್ಡಿಯಿಂದ – ಕಟ್ಟಿ ಕೊಳ್ಳು, ಅಡಚಣೆಯಾಗು.
  3. (ಹಗ್ಗ, ಲಂಗರು, ಮೊದಲಾದವು) ಸಿಕ್ಕುಬೀಳು; ಸಿಕ್ಕುಸಿಕ್ಕಾಗು; ತೊಡಕು ಬೀಳು; ಗುಂಜುಬೀಳು: the rope fouled ಹಗ್ಗ ಸಿಕ್ಕು ಸಿಕ್ಕಾಯಿತು.
ಪದಗುಚ್ಛ
ನುಡಿಗಟ್ಟು

foul one’s own nest ತನ್ನ ಗೂಡನ್ನೇ ಹೊಲಸುಮಾಡು; ತನ್ನ ಮನೆಯನ್ನೇ ತೆಗಳು.