Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
foul
3
foul
4
foul
1
foul
ಗುಣವಾಚಕ
ಹೊಲಸು; ಗಬ್ಬು; ಹೇಸಿಕೆಯಾದ; ಅಸಹ್ಯಕರ; ಜುಗುಪ್ಸೆ ಹುಟ್ಟಿಸುವ; ಗಬ್ಬುನಾತದ; ನಾರುವ.
ಕೊಳೆಯಾದ; ಮಲಿನ; ಮಾಸಿದ; ಮೈಲಿಗೆಯ; ಗಲೀಜಾದ; ಕೊಳಕಾದ:
foul linen
ಕೊಳಕು, ಮಾಸಿದ, ಮೈಲಿಗೆ – ಬಟ್ಟೆ.
(ಅಶಿಷ್ಟ) ಹೇಸಿಕೆ ಬರಿಸುವ; ಅಸಹ್ಯಪಡಿಸುವ; ಜುಗುಪ್ಸೆ ಉಂಟುಮಾಡುವ; ಹೇವರಿಕೆ ಹುಟ್ಟಿಸುವ.
(ತಿದ್ದುಪಡಿಗಳಿಂದ) ವಿಕಾರವಾದ; ಚಿತ್ತಾದ; ಚಿತ್ತುಚಿತ್ತಾದ:
foul copy
ಚಿತ್ತುಪ್ರತಿ.
ಕೆಟ್ಟ; ಅಶುದ್ಧ; ಮಲಿನ; ಅನಾರೋಗ್ಯಕರ; ಆರೋಗ್ಯ ಕೆಡಿಸುವ ಪದಾರ್ಥದಿಂದ ಕೂಡಿದ:
foul air
ಕೆಟ್ಟಗಾಳಿ.
foul water
ಕೆಟ್ಟ ನೀರು.
ಅಡಚಿಕೊಂಡಿರುವ; ಕೊಳೆ ಸೇರಿಕೊಂಡಿರುವ; ಕಸ ಕಟ್ಟಿಕೊಂಡಿರುವ:
foul gun-barrel
ಅಡಚಿಕೊಂಡಿರುವ ಬಂದೂಕು ನಳಿಕೆ.
(ಹಡಗಿನ ತಳದ ವಿಷಯದಲ್ಲಿ) ಜೊಂಡು, ಚಿಪ್ಪಿನ ಪ್ರಾಣಿ, ಮೊದಲಾದವುಗಳಿಂದ ಕಟ್ಟಿಕೊಂಡ.
ನೀತಿಗೆಟ್ಟ; ಹೊಲಸು ನಡತೆಯ; ಅನೈತಿಕ; ಅಶ್ಲೀಲ; ಹೇಯ ನೀಚ.
ಕೆಟ್ಟ ಮಾತು ಬಯ್ಯುವ; ಹೊಲಸು ಮಾತಿನ:
foul-mouthed
ಹೊಲಸು ಬಾಯಿಯ; ಕೆಟ್ಟ ಬಯ್ಗುಳ ಬಯ್ಯುವ.
(ತತ್ತಿ ಹಾಕುವ ಯಾ ಹಾಕಿದ ಮೇಲಿನ ಈನಿನ ವಿಷಯದಲ್ಲಿ) ಕೆಟ್ಟು ಹೋದ; ಕೆಟ್ಟಸ್ಥಿತಿಯಲ್ಲಿರುವ.
ವಿಕಾರವಾದ ಅವಲಕ್ಷಣದ; ಕುರೂಪದ:
fair or foul
ಸುರೂಪಿ ಅಥವಾ ಕುರೂಪಿ.
ಅನ್ಯಾಯದ; ಅಕ್ರಮ; ಭಂಡ; ಸರಿಯಲ್ಲದ; ಭಂಡಾಟದ; ಆಟ ಮೊದಲಾದವುಗಳಲ್ಲಿ ನಿಯಮಗಳಿಗೆ ವಿರುದ್ಧವಾದ:
foul blow
ಅನ್ಯಾಯದ ಏಟು.
(ಹವಾಮಾನದ ವಿಷಯದಲ್ಲಿ)
(ಮಳೆಯಿಂದ) ತಂಡಿಯಾದ.
ಕೆರಳಿದ; ಶಾಂತವಾಗಿರದ.
ಬಿರುಗಾಳಿಯಿಂದ ಕೂಡಿದ; ಅಲ್ಲೋಲಕಲ್ಲೋಲವಾದ; ಪ್ರಕ್ಷುಬ್ಧ.
(ಗಾಳಿಯ ವಿಷಯದಲ್ಲಿ) ಎದುರು ಬೀಸುವ; ಪ್ರತಿಕೂಲವಾದ.
ಡಿಕ್ಕಿಹೊಡೆದ; ಸಂಘಟ್ಟಿಸಿದ.
ತೊಡಕಾದ; ತೊಡರಿಕೊಂಡ; ಸಿಕ್ಕುಸಿಕ್ಕಾದ; ಗಂಟುಗಂಟಾದ:
rope is foul
ಹಗ್ಗ ಸಿಕ್ಕು ಸಿಕ್ಕಾಗಿದೆ.
ಪದಗುಚ್ಛ
foul deed
ಹೇಯಕೃತ್ಯ; ನೀತಿಗೆಟ್ಟ ಕೃತ್ಯ; ದುಷ್ಕೃತ್ಯ.
foul line
ಆಟದ ಗೆರೆ; ಆಟದ ಮೈದಾನದಲ್ಲಿ ಆಡಬೇಕಾದ ಪ್ರದೇಶ ಮೊದಲಾದವುಗಳ ಎಲ್ಲೆಯನ್ನು ಗುರುತಿಸುವ ಗೆರೆ.
foul motive
ನೀಚ ಉದ್ದೇಶ.
the foul fiend
ಸೈತಾನ.
ನುಡಿಗಟ್ಟು
fall foul of
ಘರ್ಷಿಸು; ಜಗಳವಾಡು; ಮೇಲೆಬೀಳು.