See also 2first  3first
1first ಹರ್ಸ್‍
ಗುಣವಾಚಕ
  1. (ಕಾಲ ಯಾ ಕ್ರಮದಲ್ಲಿ) ಮೊದಲನೆಯ; ಪ್ರಥಮ; ಪೂರ್ವದ; ಆದಿಯ: January, the first month of the year ವರ್ಷದ ಮೊದಲನೇ ತಿಂಗಳು, ಜನವರಿ. the first man to arrive ಬಂದವರಲ್ಲಿ ಮೊದಲಿಗ.
  2. (ಸ್ಥಾನ, ದರ್ಜೆ, ಅಧಿಕಾರ ಯಾ ಪ್ರಾಧಾನ್ಯದಲ್ಲಿ) (ಎಲ್ಲಕ್ಕಿಂತ, ಎಲ್ಲರಿಗಿಂತ) ಮುಂದಾಗಿರುವ; ಪ್ರಮುಖ; ಅಗ್ರಗಣ್ಯ: head first ತಲೆ ಮುಂದಾಗಿ, ಮುಂಚಾಚಿ. feet first ಕಾಲು ಮುಂದಾಗಿ, ಮುಂಚಾಚಿ.
  3. (ನಿರ್ದೇಶಿಸಿದ ಯಾ ಸೂಚಿಸಿದ ಕಾಲಾವಧಿಯ ನಂತರ) ಮೊದಲು ಬರುವ; ಮೊಟ್ಟಮೊದಲನೆಯ; ಪ್ರಪ್ರಥಮ: the first cuckoo (ಋತುವಿನ) ಮೊಟ್ಟಮೊದಲ ಕೋಗಿಲೆ.
  4. (ಕೇವಲ) ಮೊದಲ; ಒಂದೇ ಒಂದನೆಯ: obeyed at her first word ಅವಳ ಮೊದಲ ಮಾತಿಗೇ ಅವಳು ಹೇಳಿದಂತೆ ಕೇಳಿದ.
  5. ಮೂಲಾಧಾರವಾಗಿರುವ ಯಾ ಸ್ವತಸ್ಸಿದ್ಧವಾಗಿರುವ: first principles ಮೂಲಾಧಾರ ಸೂತ್ರಗಳು; ಆಧಾರತತ್ವಗಳು.
  6. (ಸಂಗೀತ) ಎರಡು ಯಾ ಹೆಚ್ಚು ಸ್ಥಾಯಿಗಳ ಪ್ರಥಮ ಸ್ವರವನ್ನು ಹಾಡುವ ಯಾ ವಾದನಮಾಡುವ.
  7. (ಯಾವುದನ್ನೇ ಮಾಡಲು ಇಷ್ಟವುಳ್ಳವನಾಗಿರುವುದು, ಸಿದ್ಧನಾಗಿರುವುದು, ಮೊದಲಾದವುಗಳಲ್ಲಿ) ಮೊದಲಿಗನಾದ; ಪ್ರಥಮನಾದ: should be the first to admit the difficulty ಕಷ್ಟವನ್ನು ಒಪ್ಪುವುದರಲ್ಲಿ ಮೊದಲಿಗನಾಗಿರಬೇಕು.
ಪದಗುಚ್ಛ
  1. at first blush ಮೊದಲ ನೋಟಕ್ಕೇ; ಪ್ರಥಮ ದರ್ಶನದಲ್ಲೇ.
  2. at first sight = ಪದಗುಚ್ಛ \((1)\).
  3. at first view = ಪದಗುಚ್ಛ \((1)\).
  4. come in first ಮೊದಲು ಬರು; ಮೊದಲನೆಯವನಾಗು; ಪಂದ್ಯದಲ್ಲಿ (ಮೊದಲನೆಯವನಾಗಿ) ಗೆಲ್ಲು.
  5. first form (ಸ್ಕೂಲಿನಲ್ಲಿ) ಮೊಟ್ಟಮೊದಲ ತರಗತಿ; ಒಂದನೆಯ ಇಯತ್ತೆ.
  6. First Lord of the Admiralty (ಬ್ರಿಟನ್‍) ನೌಕಾಖಾತೆಯ ಪ್ರಥಮ ಸಚಿವ (ಅಂದರೆ ನೌಕಾಸಚಿವ).
  7. First Sea Lord ನೌಕಾಸೇನಾನಿ; ದಂಡನಾಯಕ.
  8. first thing (ಆಡುಮಾತು) ಎಲ್ಲಕ್ಕಿಂತ ಮುಂಚೆ; ಮೊಟ್ಟಮೊದಲು; ಪ್ರಪ್ರಥಮವಾಗಿ.
  9. first things ಎಲ್ಲಕ್ಕಿಂತ ಅತ್ಯಂತ ಮುಖ್ಯವಾದ ವಸ್ತುಗಳು, ವಿಷಯಗಳು.
  10. first violin
    1. ಆರ್ಕೆಸ್ಟ್ರಾ (ವಾದ್ಯಮೇಳ)ದ ತಂತೀವಾದ್ಯಗಾರರಲ್ಲಿ ಅತ್ಯುನ್ನತ ಸ್ಥಾಯಿಯಲ್ಲಿ ನುಡಿಸುವವನು.
    2. ವಾದ್ಯಮೇಳದ ನಾಯಕ.
    3. ತಂತೀವಾದ್ಯಚತುಷ್ಟಯದ ನಾಯಕ.
  11. in the first place ಮೊದಲನೆಯದಾಗಿ.
  12. the first two ಮೊದಲನೆಯವೆರಡೂ ಯಾ ಮೊದಲನೆಯವರಿಬ್ಬರೂ; ಮೊದಲನೆಯದು(ಯವನು) ಮತ್ತು ಎರಡನೆಯದು(ಯವನು).
  13. the two first = ಪದಗುಚ್ಛ \((12)\).
ನುಡಿಗಟ್ಟು
  1. first past the post (ಚುನಾವಣೆಯ ಉಮೇದುದಾರನ ವಿಷಯದಲ್ಲಿ) ಬಹುಶಃ ಪೂರ್ಣ ಬಹುಮತದಿಂದಲ್ಲದೆ ಇದ್ದರೂ ಹೆಚ್ಚು ಮತಗಳಿಂದ ಗೆದ್ದ.
  2. the first ಓನಾಮ; ಸಾಮಾನ್ಯ ವಿಷಯ; ಸ್ಥೂಲ ತತ್ತ್ವ: he doesn’t know the first thing about it ಅದರ ಬಗ್ಗೆ ಅವನಿಗೆ ಓನಾಮವೂ ಗೊತ್ತಿಲ್ಲ.
See also 1first  3first
2first ಹರ್ಸ್‍
ನಾಮವಾಚಕ
  1. (ಯಾವುದಾದರೂ) ತಿಂಗಳ ಮೊದಲ ತೇದಿ; ಗುರ್ರೇ ತಾರೀಖು; ಒಂದನೆಯ ತಾರೀಖು: first of June ಜೂನ್‍ ಒಂದನೇ ತಾರೀಖು.
  2. (ಪರೀಕ್ಷೆಯಲ್ಲಿ) ಪ್ರಪ್ರಥಮ ಸ್ಥಾನ; ಮೊಟ್ಟಮೊದಲನೆಯ ಸ್ಥಾನ; ಮೊದಲ ಶ್ರೇಣಿಯಲ್ಲಿ ತೇರ್ಗಡೆಯಾದವರ ಪೈಕಿ ಮೊದಲನೆಯ ಸ್ಥಾನ.
  3. (ಪರೀಕ್ಷೆಯಲ್ಲಿ) ಪ್ರಪ್ರಥಮ ಸ್ಥಾನ ಪಡೆದವನು(ಳು).
  4. (ಪಂದ್ಯದಲ್ಲಿ ಗೆದ್ದವರ ಪೈಕಿ) ಮೊದಲನೆಯ ಸ್ಥಾನ.
  5. (ಪಂದ್ಯದಲ್ಲಿ) ಮೊದಲನೇ ಸ್ಥಾನ ಪಡೆದವನು(ಳು).
  6. (ಬಹುವಚನದಲ್ಲಿ ಹಿಟ್ಟು, ಬೆಣ್ಣೆ, ಮೊದಲಾದವುಗಳ ವಿಷಯದಲ್ಲಿ) ಅತ್ಯುತ್ತಮ ತೆರದ್ದು; ಮೊದಲನೆಯ ರಖಮಿನದು; ಅವ್ವಲ್‍.
  7. (ವಾಹನದ) ಮೊದಲನೆಯ ಗೇರು.
ಪದಗುಚ್ಛ
  1. at first ಮೊದಮೊದಲು; ಆದಿಯಲ್ಲಿ; ಆರಂಭದಲ್ಲಿ; ಶುರುವಿನಲ್ಲಿ.
  2. from first to last ಉದ್ದಕ್ಕೂ; ಆದ್ಯಂತವಾಗಿ; ಮೊದಲಿನಿಂದ ಕೊನೆಯವರೆಗೂ.
  3. from the first ಮೊದಲಿನಿಂದಲೂ; ಆದಿಯಿಂದಲೂ; ಪ್ರಾರಂಭದಿಂದಲೂ; ಶುರುವಿನಿಂದಲೂ.
  4. the first ಪ್ರಾಗುಕ್ತ; ಮೊದಲು ಹೇಳಿದ, ಸೂಚಿಸಿದ – ವಸ್ತು, ವ್ಯಕ್ತಿ, ಮೊದಲಾದವು.
  5. the First (ಬ್ರಿಟಿಷ್‍ ಪ್ರಯೋಗ) ಸೆಪ್ಟೆಂಬರ್‍ ಒಂದನೆಯ ತಾರೀಖು; ಕವುಜುಗ ಪಕ್ಷಿಯ ಬೇಟೆಯ ಆರಂಭದ ದಿನ.
See also 1first  2first
3first ಹರ್ಸ್‍
ಕ್ರಿಯಾವಿಶೇಷಣ
  1. (ಎಲ್ಲರಿಗಿಂತ, ಎಲ್ಲಕ್ಕಿಂತ) ಮೊದಲು: first of all ಎಲ್ಲಕ್ಕಿಂತ ಮೊದಲು; ಮೊಟ್ಟಮೊದಲು; ಪ್ರಪ್ರಥಮವಾಗಿ.
  2. (ಒಂದು ನಿರ್ದೇಶಿಸಿದ ಯಾ ಸೂಚಿಸಿದ ಕಾಲ, ಘಟನೆ, ಮೊದಲಾದವುಗಳಿಗಿಂತ) ಮುಂಚಿತವಾಗಿ; ಮೊದಲು: must get this done first ಮೊದಲು ಈ ಕೆಲಸ ಆಗಬೇಕು, ಮಾಡಿಸಬೇಕು.
  3. ಎಲ್ಲಕ್ಕಿಂತ – ಮುಂಚೆ, ಹೆಚ್ಚಾಗಿ, ಲೇಸಾಗಿ: will see him damned first ಎಲ್ಲಕ್ಕಿಂತ ಮುಂಚೆ, ಅವನು ಹಾಳಾಗಿ ಹೋಗುವುದನ್ನು ನೋಡುತ್ತೇನೆ.
  4. ಮೊಟ್ಟಮೊದಲನೆಯದಾಗಿ; ಪ್ರಪ್ರಥಮವಾಗಿ: when did you see him first? ಅವನನ್ನು ನೀನು ಮೊಟ್ಟಮೊದಲು ನೋಡಿದ್ದು ಯಾವಾಗ?
  5. ಮೊದಲ ದರ್ಜೆಯಲ್ಲಿ: I usually travel first ನಾನು ಸಾಮಾನ್ಯವಾಗಿ ಮೊದಲ ದರ್ಜೆಯಲ್ಲಿ ಪ್ರಯಾಣ ಮಾಡುತ್ತೇನೆ.
ಪದಗುಚ್ಛ
  1. first and last ಒಟ್ಟಿನಲ್ಲಿ; ಮೊತ್ತದಲ್ಲಿ; ಒಟ್ಟಾರೆ.
  2. first come first served ಮೊದಲು ಬಂದವರಿಗೆ ಮೊದಲು (ಉಪಚಾರ) ಸಿಕ್ಕುತ್ತದೆ.
  3. first off (ಅಮೆರಿಕನ್‍ ಪ್ರಯೋಗ, ಆಡುಮಾತು) ಮೊದಲಿಗೆ; ಮೊಟ್ಟಮೊದಲನೆಯದಾಗಿ.
  4. first or last ಎಂದಾದರೂ; ಮೊದಲೋ ಕೊನೆಗೋ.