See also 1first  2first
3first ಹರ್ಸ್‍
ಕ್ರಿಯಾವಿಶೇಷಣ
  1. (ಎಲ್ಲರಿಗಿಂತ, ಎಲ್ಲಕ್ಕಿಂತ) ಮೊದಲು: first of all ಎಲ್ಲಕ್ಕಿಂತ ಮೊದಲು; ಮೊಟ್ಟಮೊದಲು; ಪ್ರಪ್ರಥಮವಾಗಿ.
  2. (ಒಂದು ನಿರ್ದೇಶಿಸಿದ ಯಾ ಸೂಚಿಸಿದ ಕಾಲ, ಘಟನೆ, ಮೊದಲಾದವುಗಳಿಗಿಂತ) ಮುಂಚಿತವಾಗಿ; ಮೊದಲು: must get this done first ಮೊದಲು ಈ ಕೆಲಸ ಆಗಬೇಕು, ಮಾಡಿಸಬೇಕು.
  3. ಎಲ್ಲಕ್ಕಿಂತ – ಮುಂಚೆ, ಹೆಚ್ಚಾಗಿ, ಲೇಸಾಗಿ: will see him damned first ಎಲ್ಲಕ್ಕಿಂತ ಮುಂಚೆ, ಅವನು ಹಾಳಾಗಿ ಹೋಗುವುದನ್ನು ನೋಡುತ್ತೇನೆ.
  4. ಮೊಟ್ಟಮೊದಲನೆಯದಾಗಿ; ಪ್ರಪ್ರಥಮವಾಗಿ: when did you see him first? ಅವನನ್ನು ನೀನು ಮೊಟ್ಟಮೊದಲು ನೋಡಿದ್ದು ಯಾವಾಗ?
  5. ಮೊದಲ ದರ್ಜೆಯಲ್ಲಿ: I usually travel first ನಾನು ಸಾಮಾನ್ಯವಾಗಿ ಮೊದಲ ದರ್ಜೆಯಲ್ಲಿ ಪ್ರಯಾಣ ಮಾಡುತ್ತೇನೆ.
ಪದಗುಚ್ಛ
  1. first and last ಒಟ್ಟಿನಲ್ಲಿ; ಮೊತ್ತದಲ್ಲಿ; ಒಟ್ಟಾರೆ.
  2. first come first served ಮೊದಲು ಬಂದವರಿಗೆ ಮೊದಲು (ಉಪಚಾರ) ಸಿಕ್ಕುತ್ತದೆ.
  3. first off (ಅಮೆರಿಕನ್‍ ಪ್ರಯೋಗ, ಆಡುಮಾತು) ಮೊದಲಿಗೆ; ಮೊಟ್ಟಮೊದಲನೆಯದಾಗಿ.
  4. first or last ಎಂದಾದರೂ; ಮೊದಲೋ ಕೊನೆಗೋ.